ಮನೆ ಅಪರಾಧ ಐಶ್ವರ್ಯ ಗೌಡ ಮನೆಯಲ್ಲಿ 2.25 ಕೋಟಿ ನಗದು ಪತ್ತೆ: ಇಡಿ ಅಧಿಕೃತ ಮಾಧ್ಯಮ ಪ್ರಕಟಣೆ

ಐಶ್ವರ್ಯ ಗೌಡ ಮನೆಯಲ್ಲಿ 2.25 ಕೋಟಿ ನಗದು ಪತ್ತೆ: ಇಡಿ ಅಧಿಕೃತ ಮಾಧ್ಯಮ ಪ್ರಕಟಣೆ

0

ಬೆಂಗಳೂರು : ರಾಜ್ಯ ರಾಜಕೀಯ ಹಾಗೂ ಹಣಕಾಸು ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿರುವ ಘಟನೆ ನಡೆದಿದೆ. ಐಶ್ವರ್ಯ ಗೌಡ ನಿವಾಸದಲ್ಲಿ ರೂಪಾಯಿ 2.25 ಕೋಟಿಯಷ್ಟು ನಗದು ಪತ್ತೆಯಾಗಿರುವುದಾಗಿ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ED) ಅಧಿಕೃತ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದೆ.

ಇತ್ತೀಚೆಗೆ, ಮಾಜಿ ಸಚಿವ ವಿನಯ್ ಕುಲಕರ್ಣಿ, ಶಿಲ್ಪಾಗೌಡ ಸೇರಿದಂತೆ ಐಶ್ವರ್ಯ ಗೌಡ ಅವರ 14ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ವಂಚನೆ ಸಂಬಂಧ ಪಿಎಮ್ಮೆಲ್‌ಎ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದು ಇಡಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಐಶ್ವರ್ಯ ಗೌಡ ಹಣ ವರ್ಗಾವಣೆ ಅಪರಾಧದಲ್ಲಿ ಭಾಗಿಯಾಗಿರುವುದು ದೃಢಪಟ್ಟ ಹಿನ್ನಲೆಯಲ್ಲಿ, ಬೆಂಗಳೂರಿನ ಇಡಿ ತಂಡವು 2025 ಏಪ್ರಿಲ್ 24ರಂದು ಪಿಎಂಎಲ್‌ಎ, 2002 ರ ಅಡಿಯಲ್ಲಿ ಅವರನ್ನು ಬಂಧಿಸಿದೆ. ಬಂಧನದ ನಂತರ, ಅವರನ್ನು ಗೌರವಾನ್ವಿತ ವಿಶೇಷ ನ್ಯಾಯಾಲಯದ (ಪಿಎಂಎಲ್‌ಎ) ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಅವರ ಇಡಿ ಕಸ್ಟಡಿಗೆ ಆದೇಶ ನೀಡಿದ್ದು, ತನಿಖೆ ಮುಂದುವರಿದಿದೆ.

24 ಮತ್ತು 25 ಏಪ್ರಿಲ್ 2025ರಂದು ನಡೆದ ಶೋಧದ ವೇಳೆ, ವಿವಿಧ ಅಪರಾಧ ದಾಖಲೆಗಳು, ಡಿಜಿಟಲ್ ಸಾಧನಗಳು ಹಾಗೂ ಸುಮಾರು 2.25 ಕೋಟಿ ರೂಪಾಯಿಯ ನಗದು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಮಾಧ್ಯಮ ಪ್ರಕಟಣೆ ತಿಳಿಸಿದೆ. ಈ ಶೋಧ ಕಾರ್ಯಾಚರಣೆಯ ಫಲಿತಾಂಶವಾಗಿ ಪ್ರಕರಣ ಮತ್ತಷ್ಟು ಗಂಭೀರ ರೂಪ ಪಡೆದಿದೆ. ಐಶ್ವರ್ಯ ಗೌಡ ಅವರ ವಿರುದ್ಧದ ಆರೋಪಗಳು ಚಿನ್ನಾಭರಣ ವಂಚನೆ ಹಾಗೂ ಭಾರೀ ಹಣ ವರ್ಗಾವಣೆಯ ಕುರಿತಂತೆ ಎತ್ತಿಹೇಳಲಾಗಿದ್ದು, ಈ ತನಿಖೆಯಿಂದ ಹೆಚ್ಚಿನ ಸತ್ಯಗಳು ಹೊರ ಬರುವ ನಿರೀಕ್ಷೆಯಿದೆ.