ಮನೆ ರಾಜಕೀಯ ಈ ವರ್ಷ ‘ಕೊರೋನಾ ಪಾಸ್’ ಇಲ್ಲ: ಸಚಿವ ಬಿ.ಸಿ.ನಾಗೇಶ್

ಈ ವರ್ಷ ‘ಕೊರೋನಾ ಪಾಸ್’ ಇಲ್ಲ: ಸಚಿವ ಬಿ.ಸಿ.ನಾಗೇಶ್

0

ಬೆಂಗಳೂರು: ಕಳೆದ ವರ್ಷದಂತೆ ಈ ವರ್ಷ ಕೊರೋನಾ ಪಾಸ್ ಇರುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳು ಎಸ್ಎಸ್ಎಲ್’ಸಿ ಪರೀಕ್ಷೆ ಎದುರಿಸಲಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. 

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ  ಸಚಿವರು, 2020-21 ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಮತ್ತು ಶಾಲೆಗಳು ತೀವ್ರವಾದ ಕೋವಿಡ್-ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಕಳೆದ ವರ್ಷ ಸಮಸ್ಯೆ ವಿಭಿನ್ನವಾಗಿತ್ತು. ಕಳೆದ ವರ್ಷ ನೀಡಿದ್ದ ಸೌಲಭ್ಯ, ವ್ಯವಸ್ಥೆಯನ್ನೇ ಈ ಬಾರಿಯೂ ವಿಸ್ತರಿಸಿದರೆ, ವಿದ್ಯಾರ್ಥಿಗಳು ಓದುವುದನ್ನೇ ಮರೆತು ಬಿಡುತ್ತಾರೆ. ಇದರಿಂದ ಕೆಟ್ಟ ಪ್ರವೃತ್ತಿಯೊಂದನ್ನು ಬೆಳೆಸಿದಂತಾಗುತ್ತದೆ ಎಂದು ಹೇಳಿದ್ದಾರೆ.
 
ರಾಜ್ಯದ ಬಹುತೇಕ ಎಲ್ಲಾ ಶಾಲೆಗಳು ಶೇಕಡಾ 70 ರಷ್ಟು ಪಠ್ಯಕ್ರಮವನ್ನು ಪೂರ್ಣಗೊಳಿಸಿವೆ, ವಿದ್ಯಾರ್ಥಿಗಳಿಗೆ ಸಹಾಯಕವಾಗಲು ಶೇಕಡಾ 30 ರಷ್ಟು ಪಠ್ಯಕ್ರಮ ಕಡಿಮೆ ಮಾಡಲಾಗಿದೆ. ಫೆಬ್ರವರಿ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಕೋವಿಡ್ ತೀವ್ರವಾಗಿ ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ, ಆದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್‌ನಿಂದ ಏಪ್ರಿಲ್ 11 ರ ಕೊನೆಯ ವಾರದಲ್ಲಿ ನಡೆಯಲಿವೆ. ಆ ಸಮಯದ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ. 

ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ ವಿಚಾರ ಕುರಿತು ಮಾತನಾಡಿ, ಆದರೆ, ಶೈಕ್ಷಣಿಕ ವರ್ಷ ಆರಂಭವಾದಾಗಲೇ ಈ ಆದೇಶಗಳಿದ್ದವು. ಮುಂದಿನ -23 ಶೈಕ್ಷಣಿಕ ವರ್ಷದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದಿದ್ದಾರೆ. 

ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಮಾತನಾಡಿ, ಕೆಲವು ಶಿಕ್ಷಕರು ಸುಮಾರು ಎರಡರಿಂದ ಮೂರು ವರ್ಷಗಳ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಕೆಲವು ತಿಂಗಳ ಹಿಂದಷ್ಟೇ ಪ್ರಕರಣವನ್ನು ವಿಲೇವಾರಿ ಮಾಡಿತ್ತು. ಆದೇಶ ಹೊರಬಿದ್ದ ನಂತರ ಶಿಕ್ಷಕರು ವರ್ಗಾವಣೆ ಕೇಳಲು ಆರಂಭಿಸಿದರು. ‘‘ನ್ಯಾಯಾಲಯದ ಆದೇಶ ಹಾಗೂ ಶಿಕ್ಷಕರ ನಿಜವಾದ ಬೇಡಿಕೆಗಳನ್ನು ಗೌರವಿಸಬೇಕು. ವರ್ಗಾವಣೆ ಪ್ರಕ್ರಿಯೆ ಆರಂಭಿಸಿದ್ದರೂ, ತೀವ್ರ ಕೊರತೆ ಇರುವ ಕಡೆಯಿಂದ ಶಿಕ್ಷಕರನ್ನು ಸ್ಥಳಾಂತರಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಹಿಂದಿನ ಲೇಖನಕೋವಿನ್ ಪೋರ್ಟಲ್ ನಿಂದ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಆರೋಗ್ಯ ಸಚಿವಾಲಯ ಸ್ಪಷ್ಟನೆ
ಮುಂದಿನ ಲೇಖನಅಪ್ಪು ಕನಸಿನ ಯೋಜನೆ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ: ರಾಘವೇಂದ್ರ ರಾಜ್ ಕುಮಾರ್