ಮೈಸೂರು : ಮೈಸೂರಿನ ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯ ಹಾಗೂ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಹೊರರಾಜ್ಯದ ಪ್ರವಾಸಿ ವಾಹನಗಳ ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ. ನಿಗದಿತ ಕಾಲಾವಧಿ ಮುಗಿದಿದ್ದರೂ ಅಕ್ರಮವಾಗಿ ನಗರದಲ್ಲಿ ಸಂಚರಿಸುತ್ತಿರುವ ವಾಹನಗಳನ್ನು ಪತ್ತೆಹಚ್ಚಲು ವಿಶೇಷ ತಪಾಸಣಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
ನೆರೆ ರಾಜ್ಯಗಳಿಂದ ಬರುವ ಪ್ರವಾಸಿ ವಾಹನಗಳ ಮೇಲೆ ಮೈಸೂರಿನ ಸಾರಿಗೆ ಇಲಾಖೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಕಾಲಾವಧಿ ಮೀರಿ ನಗರದಲ್ಲಿ ಸಂಚರಿಸುತ್ತಿರುವ ಪ್ರವಾಸಿ ವಾಹನಗಳ ವಿರುದ್ಧ ವಿಶೇಷ ತಪಾಸಣಾ ಕಾರ್ಯವನ್ನು ನಡೆಸಿ ಪ್ರಕರಣ ದಾಖಲಿಸುತ್ತಿದ್ದಾರೆ. ಮೈಸೂರಿನ ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಸೇರಿದಂತೆ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿ ವಾಹನಗಳ ತಪಾಸಣೆ ನಡೆಸುತ್ತಿರುವ ಸಾರಿಗೆ ಇಲಾಖೆ ಅಧಿಕಾರಿಗಳು, ಅವಧಿ ಮೀರಿ ರಾಜ್ಯದಲ್ಲಿ ಸಂಚರಿಸುತ್ತಿರುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸುವ ಕಾರ್ಯ ಆರಂಭಿಸಿದ್ದಾರೆ.
ಒಂದೇ ದಿನ ಮೈಸೂರು ನಗರದಲ್ಲಿ ನೆರೆ ರಾಜ್ಯದ 10 ಪ್ರವಾಸಿ ವಾಹನಗಳನ್ನು ಪತ್ತೆ ಹಚ್ಚಿ ವಾಹನಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ. ಪ್ರವಾಸಿ ತಾಣವಾದ ಸಾಂಸ್ಕೃತಿಕ ನಗರಿ ಮೈಸೂರಿಗೆ ನೆರೆ ಜಿಲ್ಲೆಗಳ ಪ್ರವಾಸಿಗರಿಂದ ನೆರೆ ರಾಜ್ಯಗಳಿಂದ ಬರುವ ಪ್ರವಾಸಿಗರ ಸಂಖ್ಯೆಯೇ ಹೆಚ್ಚಾಗಿದೆ. ಸಾಮಾನ್ಯ ದಿಧಿನಗಳಲ್ಲಿ200ರಿಂದ 300 ಪ್ರವಾಸಿ ವಾಹನಗಳು ಮೈಸೂರು ನಗರಕ್ಕೆ ಬಂದರೆ ವಾರಾಂತ್ಯ ಮತ್ತು ವಿಶೇಷ ರಜಾ ದಿನಗಳಲ್ಲಿ500ಕ್ಕೂ ಹೆಚ್ಚು ಬಸ್ಗಳು, ಮ್ಯಾಕ್ಸಿಕ್ಯಾಬ್ ಸೇರಿದಂತೆ ಪ್ರವಾಸಿ ವಾಹನಗಳು ಮೈಸೂರಿಗೆ ಬರುಧಿತ್ತವೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯವು ಅಖಿಲ ಭಾರತ ಪ್ರವಾಸಿ ಪರವಾನಗಿ(ಎಐಟಿಪಿ) ನಿಯಮಗಳಿಗೆ ಕೆಲ ತಿದ್ದುಪಡಿ ಮಾಡಿದ್ದು, ಈ ಪರವಾನಗಿ ಹೊಂದಿರುವ ಪ್ರವಾಸಿ ವಾಹನಗಳಿಗೆ ನೆರೆ ರಾಜ್ಯಗಳಲ್ಲಿಸಂಚರಿಸುವ ಕಾಲಾವಧಿಯನ್ನು 90 ದಿನಗಳಿಂದ 60 ದಿನಗಳಿಗೆ ಕಡಿತಗೊಳಿಸಲಾಗಿದೆ. ಪ್ರವಾಸಿ ಪರವಾನಗಿ ಹೊಂದಿರುವ ವಾಹನಗಳ ಸಂಚಾರ ಆಯಾ ರಾಜ್ಯದಲ್ಲಿಯೇ ಆರಂಭಗೊಂಡು ಆಯಾ ರಾಜ್ಯದಲ್ಲಿಯೇ ಅಂತ್ಯಗೊಳ್ಳಬೇಕು. ಈ ಸಂಚಾರದ ಅವಧಿಯು ಮೊದಲು 90 ದಿನಗಳಿಗೆ ಇತ್ತು. ಈಗ ತಿದ್ದುಪಡಿ ಮಾಡಿ 60 ದಿನಗಳಿಗೆ ಸೀಮಿತಗೊಳಿಸಿರುವುದರಿಂದ ಪ್ರವಾಸಿ ವಾಹನಗಳು, ಅವಧಿ ಮೀರುವ ಮುನ್ನವೇ ಸ್ವರಾಜ್ಯ ತಲುಪಿರಬೇಕು. ಇಲ್ಲದಿದ್ದರೆ ಪರವಾನಗಿ ಉಲ್ಲಂಘನೆ ಎಂದು ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಹಿನ್ನೆಲೆಯಲ್ಲಿಮೈಸೂರು ನಗರದಲ್ಲಿಅಂತಹ ಪರವಾನಗಿ ನಿಯಮ ಉಲ್ಲಂಘನೆ ಮಾಡಿರುವ ನೆರೆ ರಾಜ್ಯಗಳ ಪ್ರವಾಸಿ ವಾಹನಗಳನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಕಾರ್ಯಾಚರಣೆಯನ್ನು ಮೈಸೂರಿನ ಸಾರಿಗೆ ಅಧಿಕಾರಿಗಳು ಆರಂಭಿಸಿದ್ದಾರೆ. ಮೈಸೂರು ನಗರದ ಹೃದಯ ಭಾಗದಲ್ಲಿರುವ ಅರಮನೆಯ ಪಾರ್ಕಿಂಗ್ ಆವರಣ, ದೊಡ್ಡ ಕೆರೆ ಮೈದಾನ, ಮೃಗಾಲಯ ಎದುರು, ಚಾಮುಂಡಿ ಬೆಟ್ಟ ಸೇರಿದಂತೆ ಮೈಸೂರು ನಗರವನ್ನು ಸಂಪರ್ಕಿಸುವ ಹೆದ್ದಾರಿಗಳಾದ ಮೈಸೂರು-ಬೆಂಗಳೂರು ರಸ್ತೆ, ನಂಜನಗೂಡು ರಸ್ತೆ, ಮಾನಂದವಾಡಿ ರಸ್ತೆ, ಹುಣಸೂರು ರಸ್ತೆಯ ಜಂಕ್ಷನ್ಗಳಲ್ಲಿನಿರಂತರವಾಗಿ 100 ಕ್ಕೂ ಹೆಚ್ಚು ವಾಹನಗಳನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಧಿಪಾಧಿಸಣೆ ನಡೆಸಿದ್ದಾರೆ.















