ಮನೆ ರಾಜ್ಯ ಮೂಲಭೂತ ಸೌಲಭ್ಯಕ್ಕೆ ಒತ್ತಾಯಿಸಿ ಆರ್’ಟಿಪಿಎಸ್ ಚಿಮಣಿ ಏರಿದ ಗುತ್ತಿಗೆ ಕಾರ್ಮಿಕ

ಮೂಲಭೂತ ಸೌಲಭ್ಯಕ್ಕೆ ಒತ್ತಾಯಿಸಿ ಆರ್’ಟಿಪಿಎಸ್ ಚಿಮಣಿ ಏರಿದ ಗುತ್ತಿಗೆ ಕಾರ್ಮಿಕ

0

ರಾಯಚೂರು(Raichuru): ಕಳೆದ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ವೇತನ, ಸೌಲಭ್ಯಗಳ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿರುವ ಕ್ರಮ ಖಂಡಿಸಿ ಆರ್ ಟಿಪಿಎಸ್ ಕಾರ್ಮಿಕ ಕೇಂದ್ರದ ಚಿಮಣಿ ಏರಿ ಪ್ರತಿಭಟನೆ ನಡೆಸುತ್ತಿದ್ದಾನೆ.

ಚಿಮಣಿ ಏರುವ ಮೊದಲು ಸಾಮಾಜಿಕ ತಾಲತಾಣ ಇನ್‌ಸ್ಟಾಗ್ರಾಂನಲ್ಲಿ ಎಂಟು ನಿಮಿಷ ಮಾತನಾಡಿರುವ ವಿಡಿಯೊ ಹರಿಬಿಟ್ಟಿದ್ದಾರೆ. ವಿಡಿಯೊ ವೈರಲ್ ಆಗಿದೆ.

ಕಾರ್ಮಿಕರು ಮತ್ತು ಅಧಿಕಾರಿಗಳ ಚಿಮಣಿ ಕೆಳಭಾಗದಲ್ಲಿ ನೆರೆದಿದ್ದು, ಮನವೊಲಿಸಲು ಹರ ಸಾಜಸ ಪಡುತ್ತಿದ್ದಾರೆ.

ವಿಡಿಯೋದಲ್ಲಿ ಸುನೀಲ್ ಹೇಳುರುವುದೇನು ? : ಆರ್‌’ಟಿಪಿಎಸ್ ನಿರ್ಮಾಣಕ್ಕೆ ಭೂಮಿ ನೀಡಿದವರನ್ನು ಗುತ್ತಿಗೆ ನೌಕರಿಗೆ ಸೇರಿಸಿಕೊಂಡಿದ್ದಾರೆ. ಸರಿಯಾದ ವೇತನ ಕೊಡುತ್ತಿಲ್ಲ ಎಂಬುದನ್ನು ವಿಡಿಯೊದಲ್ಲಿ ಸುನೀಲ್ ಹೇಳಿದ್ದಾರೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆರ್ ಟಿಪಿಎಸ್ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುವವರೆಲ್ಲ ಒಂದು ಕುಟುಂಬದ ಸದಸ್ಯರಿದ್ದಂತೆ. ಮನೆಯಲ್ಲಿ ಸಿಹಿ ಮಾಡಿದಾಗ ಎಲ್ಲರೂ ಹಂಚಿಕೊಂಡು ತಿನ್ನುತ್ತಾರೆ. ಆದರೆ, ಆರ್‌ಟಿಪಿಎಸ್‌ನಲ್ಲಿ ಅಧಿಕಾರಿಗಳಿಗೆ ಮಾತ್ರ ಸಿಹಿ‌ ಸಿಗುತ್ತಿದೆ.‌ ಗುತ್ತಿಗೆ ಕಾರ್ಮಿಕರಿಗೂ ‘ಸಿಹಿ’ ಕೊಡಿ. ನ್ಯಾಯಬದ್ಧ ವೇತನ ನೀಡಿ ಎಂದು ಆರ್‌ಟಿಪಿಎಸ್ ಚಿಮಣಿ ಏರಿ ಕುಳಿತಿರುವ ಕಾರ್ಮಿಕ ಸುನೀಲ್ ಅವರು ವಿಡಿಯೊ ಲೈವ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ.

ಮಿಲ್ ನಿರ್ವಹಣೆ ವಿಭಾಗದಲ್ಲಿ ಪ್ರತಿಯೊಂದನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದೇವೆ. ಆದರೆ ಕೆಪಿಸಿಎಲ್ ಅಧಿಕಾರಿಗಳು ಈ ಕೆಲಸಗಳನ್ನು ಬೇರೆಯವರಿಗೆ ಗುತ್ತಿಗೆ ಕೊಟ್ಟು ತಿರುಗಿಯೂ ನೋಡುವುದಿಲ್ಲ. ಗುತ್ತಿಗೆದಾರ ಕಂಪೆನಿಗಳು ಸೌಲಭ್ಯ ಕೊಡದೆ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.

ಹಿಂದಿನ ಲೇಖನಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಸೋನಿಯಾ, ಪ್ರಿಯಾಂಕಾ , ಪಿ.ಚಿದಂಬರಂ ಮತದಾನ
ಮುಂದಿನ ಲೇಖನಕೊಡಗು: ಕಾವೇರಿ ತೀರ್ಥೋದ್ಬವಕ್ಕೆ ಕ್ಷಣಗಣನೆ