ಬೆಂಗಳೂರು: ಕಾಂಗ್ರೆಸ್ ನಲ್ಲೇ ಸಿಎಂ ಕುರ್ಚಿಗೆ ರನ್ನಿಂಗ್ ರೇಸ್ ಆರಂಭವಾಗಿದೆ. ಕಾಂಗ್ರೆಸ್ ಪಕ್ಷದಲ್ಲೇ ಸಿಎಂ ಸಿದ್ದರಾಮಯ್ಯರನ್ನ ಇಳಿಸಲು ರೆಡಿಯಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ನಲ್ಲಿಈಗ ಸಿಎಂ ಕುರ್ಚಿಗೆ 100 ಮೀಟರ್ ರನ್ನಿಂಗ್ ರೇಸ್ ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೇ ಸಿಎಂ ಇಳಿಸಲು ರೆಡಿ ಇದ್ದಾರೆ. ಗ್ಯಾರಂಟಿ ಜೊತೆಗೆ ಈಗ ತಿಂಡಿ ಭಾಗ್ಯ ಫ್ರಿ ಇದೆ ಎಂದು ವ್ಯಂಗ್ಯವಾಡಿದರು.
ಮುಡಾ ಹಗರಣದ ತನಿಖೆ ಮರೆಮಾಚಲು ಸಿಎಂ ಹಿಂಬಾಲಕರು ಹುನ್ನಾರ ಮಾಡಿದ್ದಾರೆ ಎಂದು ಆರ್ ಅಶೋಕ್ ಆರೋಪಿಸಿದರು.