ಮನೆ ರಾಷ್ಟ್ರೀಯ ಬಿಹಾರದ ರೈಲುಗಳಲ್ಲಿ ರಶ್ – ಎನ್‌ಡಿಎ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ

ಬಿಹಾರದ ರೈಲುಗಳಲ್ಲಿ ರಶ್ – ಎನ್‌ಡಿಎ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ

0

ನವದೆಹಲಿ : ದೀಪಾವಳಿ ಹಬ್ಬಗಳಿಗೆ ಬಿಹಾರಕ್ಕೆ ಜನರನ್ನು ಸಾಗಿಸಲು ಸಾಮರ್ಥ್ಯ ಮೀರಿ ಓಡುವ ರೈಲುಗಳ ಬಗ್ಗೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭಾ ಸಂಸದ ರಾಹುಲ್ ಗಾಂಧಿ ಇಂದು ಎನ್​ಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಹಬ್ಬದ ಋತುವಿನಲ್ಲಿ ಪ್ರಯಾಣಿಕರನ್ನು ರೈಲಿನಲ್ಲಿ “ಅಮಾನವೀಯ” ರೀತಿಯಲ್ಲಿ ಸಾಗಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಬಿಹಾರಕ್ಕೆ ಹೋಗುವ ರೈಲುಗಳು ತುಂಬಿ ತುಳುಕುತ್ತಿವೆ. ಟಿಕೆಟ್ ಪಡೆಯುವುದು ಅಸಾಧ್ಯವಾಗಿದೆ. ಅನೇಕ ರೈಲುಗಳು ತಮ್ಮ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುತ್ತಿದೆ. ಜನರು ಬಾಗಿಲುಗಳಿಂದ ನೇತಾಡುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ವಿಡಿಯೋವನ್ನು ಹಂಚಿಕೊಂಡು ಎಕ್ಸ್​ನಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ.

ಈ ವೇಳೆ ಡಬಲ್ ಎಂಜಿನ್ ಸರ್ಕಾರವನ್ನು ರಾಹುಲ್ ಗಾಂಧಿ ಖಂಡಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಮತ್ತು ಬಿಹಾರದಲ್ಲಿ ಅದರ ಎನ್‌ಡಿಎ ಮಿತ್ರ ಪಕ್ಷ ಜೆಡಿಯು ಹಬ್ಬದ ದಟ್ಟಣೆಗಾಗಿ ಘೋಷಿಸಲಾದ 12,000 ವಿಶೇಷ ರೈಲುಗಳ ಬಗ್ಗೆ ರಾಹುಲ್ ಗಾಂಧಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

“ಕೇಂದ್ರ ಸರ್ಕಾರ ಘೋಷಿಸಿರುವ 12,000 ವಿಶೇಷ ರೈಲುಗಳು ಎಲ್ಲಿವೆ? ಬಿಹಾರದಲ್ಲಿ ಪ್ರಯಾಣಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ”ಎಂದು ಅವರು ಹೇಳಿದ್ದಾರೆ. ಹಬ್ಬದ ದಟ್ಟಣೆಯನ್ನು ನಿರ್ವಹಿಸಲು ರೈಲ್ವೆ ವಿಶೇಷ ರೈಲುಗಳನ್ನು ಘೋಷಿಸಿದೆ.

ಹಬ್ಬದ ಋತುವಿನಲ್ಲಿ ಭಾರೀ ಪ್ರಯಾಣಿಕರ ಹರಿವನ್ನು ನಿರ್ವಹಿಸಲು ರೈಲ್ವೆ ಸಚಿವಾಲಯವು ಅಕ್ಟೋಬರ್ 1 ಮತ್ತು ನವೆಂಬರ್ 30ರ ನಡುವೆ 12,011 ವಿಶೇಷ ರೈಲು ಪ್ರಯಾಣಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.