ಮನೆ ಸುದ್ದಿ ಜಾಲ ಉಕ್ರೇನ್‌ನ ಮರಿಯುಪೋಲ್‌ ಉಕ್ಕಿನ ಘಟಕದ ಮೇಲೆ ರಷ್ಯಾ ಶೆಲ್‌ ದಾಳಿ ಆರಂಭ

ಉಕ್ರೇನ್‌ನ ಮರಿಯುಪೋಲ್‌ ಉಕ್ಕಿನ ಘಟಕದ ಮೇಲೆ ರಷ್ಯಾ ಶೆಲ್‌ ದಾಳಿ ಆರಂಭ

0

ಕೀವ್ (Kyiv)-ರಷ್ಯಾದ ಪಡೆಗಳು ಉಕ್ರೇನ್‌ನ ಮರಿಯುಪೋಲ್‌ ನಗರದ ಉಕ್ಕಿನ ಘಟಕದ ಮೇಲೆ ಶೆಲ್ ದಾಳಿಯನ್ನು ಪುನರಾರಂಭಿಸಿದೆ.

ನಾಗರಿಕರ ಭಾಗಶಃ ಸ್ಥಳಾಂತರದ ನಡುವೆ ರಷ್ಯಾ ಪಡೆಗಳು ಶೆಲ್‌ ದಾಳಿ ಪುನರರಾಂಭಿಸಿದೆ ಎಂದು ಉಕ್ರೇನ್ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರದರ್ಶನದ ಸಂದರ್ಶನವೊಂದರಲ್ಲಿ ಮಾತನಾಡಿರುವ ನ್ಯಾಷನಲ್ ಗಾರ್ಡ್ ಬ್ರಿಗೇಡ್ ಕಮಾಂಡರ್ ಡೆನಿಸ್ ಶ್ಲೆಗಾ, ಅಜೋವ್‌ಸ್ಟಲ್ ಉಕ್ಕಿನ ಘಟಕದಿಂದ ಒಂದು ಸುತ್ತಿನ ನಾಗರಿಕರ ತೆರವು ಬಾಕಿ ಇತ್ತು. ಹತ್ತಾರು ಸಣ್ಣ ಮಕ್ಕಳು ಕೈಗಾರಿಕೆಗಳ ಬಂಕರ್‌ಗಳಲ್ಲಿ ಇದ್ದಾರೆ ಎಂದು ಅವರು ಹೇಳಿದ್ದಾರೆ.

ಸ್ಥಾವರದಿಂದ ನಾಗರಿಕರನ್ನು ಸ್ಥಳಾಂತರವನ್ನು ರಕ್ಷಣಾ ಸಿಬ್ಬಂದಿ ನಿಲ್ಲಿಸಿದ ತಕ್ಷಣ ಶೆಲ್ ದಾಳಿ ಪ್ರಾರಂಭವಾಯಿತು ಎಂದು ಶ್ಲೇಗಾ ಹೇಳಿದರು.

ಸುಮಾರು 500 ಮಂದಿ ಗಾಯಗೊಂಡ ಸೈನಿಕರು ಮತ್ತು ಹಲವಾರು ಮೃತ ದೇಹಗಳ ಜೊತೆಗೆ ಇನ್ನೂ ನೂರಾರು ನಾಗರಿಕರು ಸ್ಥಳದಲ್ಲಿ ಸಿಲುಕಿದ್ದಾರೆ ಎಂದು ಕಮಾಂಡರ್ ಅಂದಾಜಿಸಿದ್ದಾರೆ. ಈ ಘಟಕವು ರಷ್ಯನ್ನರು ಆಕ್ರಮಿಸದ ನಗರದ ಏಕೈಕ ಭಾಗವಾಗಿದೆ.

ರಷ್ಯಾದ ರಕ್ಷಣಾ ಸಚಿವಾಲಯವು ಭಾನುವಾರ ಪ್ರಕಟಿಸಿರುವ ವಿಡಿಯೋದಲ್ಲಿ ಜನರು ಉಕ್ಕಿನ ಘಟಕದಿಂದ ಹೊರಬರುತ್ತಿರುವುದು ಕಂಡುಬಂದಿದೆ. ಇದರಲ್ಲಿ ಎರಡು ಸಾಕು ನಾಯಿಗಳೊಂದಿಗೆ ಮಹಿಳೆಯರ ಸಣ್ಣ ಗುಂಪು ಸಹ ಕಾಣಬಹುದಾಗಿದೆ.