ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಅಶ್ಲೀಲ ವಿಡಿಯೋ ಹರಿಬಿಟ್ಟ ರೂವಾರಿ ಸಿಎಂ ಮತ್ತು ಡಿಸಿಎಂ. ಪೆನ್ ಡ್ರೈವ್ ಕಥಾ ನಾಯಕ ಕಾಂಗ್ರೆಸ್ ಸರ್ಕಾರ. ನನಗೆ ಮೂರು ದಿನಗಳ ಹಿಂದೆ ಡಿಸಿಎಂ ಡಿ.ಕೆ ಶಿವಕುಮಾರ್ ಕರೆ ಮಾಡಿದ್ದರು. ಲೋಕಸಭೆ ಚುನಾವಣೆ ಮುಗಿದ ಮೇಲೆ ನನಗೆ ಕ್ಯಾಬಿನೇಟ್ ರೇಂಜ್ ಆಫರ್ ಕೊಟ್ಟಿದ್ದಾರೆ ಎಂದು ದೇವರಾಜೇಗೌಡ ಸ್ಪೋಟಕ ಆರೋಪ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ತಮ್ಮ ಮತ್ತು ಡಿಕೆ ಶಿವಕುಮಾರ್ ನಡುವೆ ನಡೆದ ಸಂಭಾಷಣೆ ಎನ್ನಲಾದ ಆಡಿಯೋವನ್ನ ಬಿಡುಗಡೆ ಮಾಡಿದ ದೇವರಾಜೇಗೌಡ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಪೊಲೀಸರ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ. ಯಾರನ್ನು ಆರೋಪಿ ಮಾಡಬೇಕೆಂದು ಸೂಚಿಸಿದ್ದಾರೆ. ಹಾಸನ ಪ್ರಭಾವಿ ರಾಜಕಾರಣಿ ವಿರುದ್ದ ನನ್ನ ಹೋರಾಟ. ನನ್ನ ಹೋರಾಟವನ್ನ ವಾಮಮಾರ್ಗದಲ್ಲಿ ಬಳಸಿದ್ದಾರೆ ಎಂದರು.
ವಿಡಿಯೋ ಪ್ರಕರನಳದಲ್ಲಿ ನನಗೆ ಆಫರ್ ನೀಡಿದ್ರು ಡಿಕೆಶಿವಕುಮಾರ್ ಬೆಂಬಲಿಗರ ಕೈಯಲ್ಲಿ ಆಫರ್ ನೀಡಿದ್ರು. ಡಿಸಿಎಂ ಅವರು ಮಾತಕತೆಗೆ ಕೆಲ ಬೆಂಬಲಿಗರನ್ನ ನನ್ನ ಬಳಿ ಕಳುಹಿಸಿದ್ರು. ಸಿಎಂ ಡಿಸಿಎಂಗೆ ನೇರ ಸವಾಲು ಹಾಕುತ್ತೇನೆ. ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕುವುದಾರೇ ಹಾಕಿ ನಾನೇ ನನ್ನ ಮನೆ ವಿಳಾಸ ಕೊಡುತ್ತೇನೆ. ಡಿಕೆಶಿ ಗರಡಿಯಲ್ಲೇ ಬೆಳೆದವನು ನಾನು . ಈ ಪ್ರಕರಣವನ್ನ ಸಿಬಿಐಗೆ ನೀಡಬೇಕು ಎಂದು ದೇವರಾಜೇಗೌಡ ಆಗ್ರಹಿಸಿದರು.