ಮನೆ ರಾಷ್ಟ್ರೀಯ ಎನ್ ಐಎ ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಸದಾನಂದ ವಸಂತ್ ದಾಟೆ

ಎನ್ ಐಎ ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಸದಾನಂದ ವಸಂತ್ ದಾಟೆ

0

ಮುಂಬೈ: ಮಹಾರಾಷ್ಟ್ರ ಕೇಡರ್‌ ನ ಹಿರಿಯ ಪೊಲೀಸ್ ಅಧಿಕಾರಿ ಹಾಗೂ 26/11 ಮುಂಬೈ ದಾಳಿಯ ಹೀರೊ ಎಂದು ಖ್ಯಾತರಾಗಿರುವ ಸದಾನಂದ ವಸಂತ್ ದಾಟೆ ಅವರು ರಾಷ್ಟ್ರೀಯ ತನಿಖಾ ದಳದ (NIA) ನೂತನ ಮುಖ್ಯಸ್ಥರಾಗಿ (ಡಿಜಿ) ಭಾನುವಾರ ಅಧಿಕಾರ ವಹಿಸಿಕೊಂಡಿದ್ದಾರೆ.

Join Our Whatsapp Group

NIA ನ ನಿರ್ಗಮಿತ ಮುಖ್ಯಸ್ಥರಾದ ದಿನಕರ್ ಗುಪ್ತಾ ಅವರು ಅಧಿಕಾರ ಹಸ್ತಾಂತರಿಸಿದರು.

1990 ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಸದಾನಂದ ದಾಟೆ ಅವರು ಇದಕ್ಕೂ ಮೊದಲು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆಯ (ATS) ಮುಖ್ಯಸ್ಥರಾಗಿದ್ದರು.

ಮಹಾರಾಷ್ಟ್ರ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳೂ ಸೇರಿದಂತೆ ದಾಟೆ ಅವರು ಸಿಬಿಐ ಹಾಗೂ ಸಿಆರ್‌ಪಿಎಫ್‌ನಲ್ಲೂ ಕೆಲಸ ಮಾಡಿದ್ದರು.

2008ರಲ್ಲಿ ನವೆಂಬರ್ 26ರಂದು ನಡೆದಿದ್ದ ಮುಂಬೈ ದಾಳಿಯ ವೇಳೆ ಶಸ್ತ್ರಸಜ್ಜಿತ ಉಗ್ರರ ವಿರುದ್ಧ ಸಮರ್ಥವಾಗಿ ಹೋರಾಡಿದ್ದಕ್ಕೆ ದಾಟೆ ಅವರಿಗೆ ರಾಷ್ಟ್ರಪತಿ ಪದಕ ದಕ್ಕಿತ್ತು.

ಮುಂಬೈ ದಾಳಿಯ ನಂತರ ಭಯೋತ್ಪಾದನೆ ಮಟ್ಟ ಹಾಕಲು 2008ರಲ್ಲಿ ಕೇಂದ್ರ ಸರ್ಕಾರ ಎನ್‌ಐಎ ಅನ್ನು ಸ್ಥಾಪಿಸಿತು.

ಹಿಂದಿನ ಲೇಖನಬಿಎಂಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ: ಸವಾರ ಸಾವು
ಮುಂದಿನ ಲೇಖನಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ: ಕನ್ನಡದಲ್ಲೇ ಸಂದೇಶ ಪ್ರಕಟಿಸಿ ನಮನ ಸಲ್ಲಿಸಿದ ಪ್ರಧಾನಿ ಮೋದಿ