ಮನೆ ಮನರಂಜನೆ ಸಾಹಸಸಿಂಹ ವಿಷ್ಣುವರ್ಧನ್ ಪ್ರತಿಯೊಂದು ಚಿತ್ರಗಳು ಕೌಟುಂಬಿಕ ಪ್ರಧಾನವಾಗಿತ್ತು: ಮಂಡ್ಯ ರಮೇಶ್

ಸಾಹಸಸಿಂಹ ವಿಷ್ಣುವರ್ಧನ್ ಪ್ರತಿಯೊಂದು ಚಿತ್ರಗಳು ಕೌಟುಂಬಿಕ ಪ್ರಧಾನವಾಗಿತ್ತು: ಮಂಡ್ಯ ರಮೇಶ್

0

ಮೈಸೂರು(Mysuru): ಸಾಹಸಸಿಂಹ ವಿಷ್ಣುವರ್ಧನ್ ಅವರು ಮೂಲತ: ಮೈಸೂರಿನವರಾದರು ವಿಶ್ವದಲ್ಲೇ ಜನಪ್ರಿಯರಾಗಿದ್ದಾರೆ. ಅವರ ಪ್ರತಿಯೊಂದು ಚಿತ್ರಗಳು ಸಹ ಕೌಟುಂಬಿಕ ಪ್ರಧಾನವಾಗಿತ್ತು ಎಂದು ಹಿರಿಯ ರಂಗಕರ್ಮಿ ಮಂಡ್ಯ ರಮೇಶ್ ಹೇಳಿದರು.

ಮೈಸೂರು ನಗರ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು  ರಾಮಚಂದ್ರರಾವ್ ಉದ್ಯಾನವನದಲ್ಲಿ ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ವತಿಯಿಂದ ಡಾ.ಸಾಹಸಸಿಂಹ ವಿಷ್ಣುವರ್ಧನ್ ರವರ 13 ನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಮಹಿಳಾ ಪೌರಕಾರ್ಮಿಕರಿಗೆ ಸೀರೆ ವಿತರಿಸಲಾಯಿತು.

ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಜೊತೆಯಲ್ಲೆ ಚಿತ್ರರಂಗದಲ್ಲಿ ಹೊಸ ಆಯಾಮ ಸೃಷ್ಟಿಸುವಲ್ಲಿ ಕಲಾವಿದರಿಗೆ ಮಾದರಿಯಾಗಿತ್ತು, ಕನ್ನಡ ನೆಲ ಜಲ ಭಾಷೆಯ ವಿಚಾರಕ್ಕೆ ಧಕ್ಕೆ ಬಂದಾಗ ಧ್ವನಿ ಎತ್ತುತ್ತಿದ್ದ ಮಹಾನ್ ವ್ಯಕ್ತಿ ಡಾ. ವಿಷ್ಣುವರ್ಧನ. ಚಿತ್ರನಗರಿ ಮೈಸೂರಿನಲ್ಲಿ ಸ್ಥಾಪನೆಯ ಪರಿಕಲ್ಪನೆ ನೀಡಿದ್ದೇ ವಿಷ್ಣುವರ್ಧನ್ ಎಂದು ಹೇಳಿದರು.

ಡಾ.ವಿಷ್ಣುವರ್ಧನ್ ರವರ ಸರಳಜೀವನ  ಪ್ರತಿಯೊಬ್ಬರಿಗೂ ಮಾದರಿ. ಎಲ್ಲಾ ಪಾತ್ರಗಳಲ್ಲಿ ನಟಿಸುವ ಮೂಲಕ ಪ್ರತಿಯೊಂದು ಕ್ಷೇತ್ರದ ಜನವಿಶ್ವಾಸ ಗಳಿಸಿದ್ದಾರೆ. ಅವರು ನಟಿಸಿರುವ ಚಿತ್ರಗಳಲ್ಲಿ ಕೆಲ ಜಿಲ್ಲೆಯ ಸ್ಥಳಗಳು ಪ್ರವಾಸೋದ್ಯಮ ತಾಣವಾಗಿದೆ. ಚಾಮುಂಡಿ ಬೆಟ್ಟದಿಂದ ಚಿತ್ರದುರ್ಗದ ಕೋಟೆಯವರೆಗೂ ಹೊಸಮುಖ ಕಲಾವಿದರಿಗೆ ಸ್ಪೂರ್ತಿಯಾಗಿದ್ದರು ಎಂದು  ತಿಳಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ ಮಂಡ್ಯ ರಮೇಶ್, ಕಾಂಗ್ರೆಸ್ ಮುಖಂಡರಾದ ಎನ್ಎಂ ನವೀನ್ ಕುಮಾರ್, ಪ್ರದೀಪ್ ಕುಮಾರ್, ಮಾಜಿನಗರ ಪಾಲಿಕೆ ಸದಸ್ಯರಾದ ಎಂ ಡಿ  ಪಾರ್ಥಸಾರಥಿ, ವಿನಯ್ ಕಣಗಾಲ್, ಅಜಯ್ ಶಾಸ್ತ್ರಿ, ಸಂದೀಪ್, ಪೈಲ್ವಾನ್ ಸುನಿಲ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗ ಅಧ್ಯಕ್ಷರಾದ ಎಸ್ ಎನ್ ರಾಜೇಶ್, ಲಿಂಗರಾಜು, ರವಿಕುಮಾರ್, ಸುಚಿಂದ್ರ, ಚಕ್ರಪಾಣಿ, ಧರ್ಮೇಂದ್ರ , ಬಸವರಾಜು ಹಾಜರಿದ್ದರು.

ಹಿಂದಿನ ಲೇಖನಲವಂಗದ ಎಣ್ಣೆಯಿಂದ ಹಲವಾರು ಲಾಭ
ಮುಂದಿನ ಲೇಖನಡಿಪ್ಲೊಮಾ, ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ 5 ವರ್ಷದ ಎಲ್‌’ಎಲ್‌’ಬಿ ಕೋರ್ಸ್‌ಗೆ ಅನುಮತಿಸಿ: ಮದ್ರಾಸ್‌ ಹೈಕೋರ್ಟ್‌