ಮನೆ ಮನರಂಜನೆ ಸೈಮಾ- 2023: ನಾಮಿನೇಟ್‌ ಆಗಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ

ಸೈಮಾ- 2023: ನಾಮಿನೇಟ್‌ ಆಗಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ

0

ಬೆಂಗಳೂರು: ದಕ್ಷಿಣದ ಸಿನಿಮಾಗಳು ಅಂದರೆ ಪ್ರಮುಖವಾಗಿ ಪ್ರಾದೇಶಿಕ ಸಿನಿಮಾರಂಗದ ಸೈಮಾ ಅವಾರ್ಡ್ಸ್‌ (ಸೌತ್ ಇಂಡಿಯನ್ ಇಂಟರ್​ ನ್ಯಾಷನಲ್​ ಮೂವಿ ಅವಾರ್ಡ್ಸ್​) 2023ನೇ ಸಾಲಿನ ಪ್ರಶಸ್ತಿ ಸಮಾರಂಭಕ್ಕೆ ನಾಮಿನೇಟ್‌ ಆಗಿರುವ ಸಿನಿಮಾಗಳ ಪಟ್ಟಿ ಹೊರಬಿದ್ದಿದೆ.

Join Our Whatsapp Group

ಸೈಮಾದಲ್ಲಿ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. 2023ನೇ ಸಾಲಿನಲ್ಲಿ ಕನ್ನಡದ ʼಕಾಂತಾರʼ,  ತೆಲುಗಿನ ʼಆರ್‌ ಆರ್‌ ಆರ್‌ʼ ಹಾಗೂ ತಮಿಳಿನ ‘ಪೊನ್ನಿಯಿನ್ ಸೆಲ್ವನ್: ಭಾಗ 1’ ಸಿನಿಮಾಗಳು ನಾಮಿನೇಟ್‌ ಪಟ್ಟಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ.

ಸೈಮಾ- 2023: ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿ:

ತೆಲುಗು: ʼ ಗೋಲ್ಡನ್‌ ಗ್ಲೋಬ್‌, ಆಸ್ಕರ್‌ ನಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದು ಇತಿಹಾಸ ಬರೆದಿರುವ ರಾಜಮೌಳಿ ಅವರ ʼಆರ್‌ ಆರ್‌ ಆರ್‌ʼ ಸೈಮಾದಲ್ಲಿ 11 ವಿಭಾಗದಲ್ಲಿ ನಾಮಿನೇಟ್‌ ಆಗಿದೆ. ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಅವರ ‘ಸೀತಾ ರಾಮಂ’ 10 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ. ಇನ್ನು ಕಳೆದ ವರ್ಷ ಸದ್ದು ಮಾಡಿದ ಟಾಲಿವುಡ್‌ ಸಿನಿಮಾಗಳಾದ ‘ಡಿಜೆ ಟಿಲ್ಲು’ ‘ಕಾರ್ತಿಕೇಯ 2’ ಮತ್ತು ‘ಮೇಜರ್’ ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ನಾಮಿನೇಟ್‌ ಆಗಿದೆ.

ತಮಿಳು: ಕಾಲಿವುಡ್‌ನ ಪ್ಯಾನ್‌ ಇಂಡಿಯಾ ಸಿನಿಮಾ ಮಣಿರತ್ನಂ ಅವರ ʼ ಪೊನ್ನಿಯಿನ್ ಸೆಲ್ವನ್ -1ʼ 10 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ. ಇನ್ನು ಸೂಪರ್‌ ಹಿಟ್‌ ಆದ ಲೋಕೇಶ್‌ ಕನಕರಾಜ್‌ ಅವರ ʼವಿಕ್ರಮ್‌ʼ 9 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ. ರೊಮ್ಯಾಂಟಿಕ್‌ ಹಿಟ್‌ ʼಲವ್‌ ಟುಡೇʼ, ಧನುಷ್‌ ಅಭಿನಯದ ʼತಿರುಚಿತ್ರಾಂಬಲಂʼ,ʼರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾಗಳು ಅತ್ಯುತ್ತಮ ಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿದೆ.

ಕನ್ನಡ: ಸೈಮಾದಲ್ಲಿ ಪ್ರಮುಖವಾಗಿ ರಿಷಬ್‌ ಶೆಟ್ಟಿ ಅವರ ಸೂಪರ್‌ ಹಿಟ್ ‘ಕಾಂತಾರ’ ಯಶ್ ಅವರ ಬಾಕ್ಸ್‌ ಆಫೀಸ್‌ ಹಿಟ್ ‘ಕೆಜಿಎಫ್: ಚಾಪ್ಟರ್-2’ ಸಿನಿಮಾಗಳು 11 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ. ಇನ್ನು ಸ್ಯಾಂಡಲ್‌ ವುಡ್‌ ನಲ್ಲಿ ಸದ್ದು ಮಾಡಿದ ಸಿನಿಮಾಗಳ ಸಾಲಿನಲ್ಲಿ ಬರುವ ರಕ್ಷಿತ್ ಶೆಟ್ಟಿ ಅವರ ‘777 ಚಾರ್ಲಿ’, ಡಾರ್ಲಿಂಗ್‌ ಕೃಷ್ಣ ಅವರ ‘ಲವ್ ಮಾಕ್‌ಟೇಲ್ 2’ ಮತ್ತು ಕಿಚ್ಚ ಸುದೀಪ್‌ ಅವರ ‘ವಿಕ್ರಾಂತ್ ರೋಣ’ ಅತ್ಯುತ್ತಮ ಚಿತ್ರಕ್ಕೆ ನಾಮನಿರ್ದೇಶನಗೊಂಡಿದೆ.

ಮಲಯಾಳಂ: ಸೈಮಾ ಅವಾರ್ಡ್ಸ್‌ ಗಾಗಿ ನಾಮಿನೇಟ್‌ ಆಗಿರುವ ಪ್ರಮುಖ ಚಿತ್ರಗಳೆಂದರೆ, ಅಮಲ್ ನೀರದ್ ನಿರ್ದೇಶನದ ಮಮ್ಮುಟ್ಟಿ ಅವರ ʼಭೀಷ್ಮ ಪರ್ವಂʼ ಸಿನಿಮಾ 8 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ. ಇನ್ನು ಟೋವಿನೋ ಥಾಮಸ್ ಅಭಿನಯದ ‘ತಳ್ಳುಮಾಲ’ 7 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ. ಪ್ರೇಕ್ಷಕರ ಮನಗೆದ್ದ ‘ಹೃದಯಂ’, ‘ಜಯ ಜಯ ಜಯ ಜಯ ಹೇ’, ‘ನ್ನ ತಾನ್ ಕೇಸ್ ಕೊಡು’ ʼಜನ ಗಣ ಮನ’ ಚಿತ್ರಗಳು ಬೆಸ್ಟ್‌ ಫಿಲ್ಮ್ಸ್‌ಗಾಗಿ ನಾಮಿನೇಟ್‌ ಆಗಿವೆ.

11ನೇ ವರ್ಷದ ಸೈಮಾಆವೃತ್ತಿಯ ಪ್ರಶಸ್ತಿ ಕಾರ್ಯಕ್ರಮ ಸೆಪ್ಟೆಂಬರ್ 15 ಮತ್ತು 16 ರಂದು ವರ್ಲ್ಡ್ ಟ್ರೇಡ್ ಸೆಂಟರ್‌ ದುಬೈನಲ್ಲಿ ನಡೆಯಲಿದೆ.