ಮನೆ ಸುದ್ದಿ ಜಾಲ ಮಾರುಕಟ್ಟೆಯಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್ ಮಾರಾಟಕ್ಕೆ ಷರತ್ತುಗಳೊಂದಿಗೆ ಡಿಸಿಜಿಐ ಅನುಮತಿ

ಮಾರುಕಟ್ಟೆಯಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್ ಮಾರಾಟಕ್ಕೆ ಷರತ್ತುಗಳೊಂದಿಗೆ ಡಿಸಿಜಿಐ ಅನುಮತಿ

0

ನವದೆಹಲಿ: ಕೋವಿಡ್-19 ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕೆಲವೊಂದು ಷರತ್ತುಗಳೊಂದಿಗೆ ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾ​​​ ಅನುಮತಿ ನೀಡಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮಾಂಡವೀಯಾ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ವಯಸ್ಕ ವ್ಯಕ್ತಿಗಳಿಗೆ ಬಳಕೆ ಮಾಡಲು ಮಾತ್ರ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್​ ಲಸಿಕೆಗಳಿಗೆ DCGIನಿಂದ ಅನುಮೋದನೆ ಸಿಕ್ಕಿದ್ದು, 2019ರ ಹೊಸ ಔಷಧ ಮತ್ತು ಕ್ಲಿನಿಕಲ್ ಪ್ರಯೋಗಗಳ ನಿಯಮದ ಅಡಿಯಲ್ಲಿ ಅನುಮತಿ ನೀಡಲಾಗಿದೆ.

ಜನರು ಇನ್ಮುಂದೆ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಿಂದ ಕೋವಿಡ್​ ವ್ಯಾಕ್ಸಿನ್ ಖರೀದಿ ಮಾಡಬಹುದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಮಾರ್ಗಸೂಚಿ ರಿಲೀಸ್ ಮಾಡುವ ಸಾಧ್ಯತೆ ಇದೆ. ಕೋವಿಡ್​ ಲಸಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ಔಷಧಾಲಯಗಳು ಆರು ತಿಂಗಳ ಡೇಟಾ ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾಗೆ ನೀಡಬೇಕು.

ಕೇಂದ್ರೀಯ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು (ಎಸ್‌ಇಸಿ) ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಾಗಲು ಈಗಾಗಲೇ ಒಪ್ಪಿಗೆ ನೀಡಿದ್ದು, ಇದನ್ನು ಆಧರಿಸಿ ಲಸಿಕೆ ತಯಾರಿಕೆ ಕಂಪನಿಗಳಾದ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಮತ್ತು ಭಾರತ್‌ ಬಯೊಟೆಕ್‌ ಭಾರತೀಯ ಔಷಧಗಳ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ)ಕ್ಕೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದವು. ಇದೀಗ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಪ್ರತಿ ಡೋಸ್‌ಗೆ 1,200 ರೂ.ಗಳ ದರದಲ್ಲಿ ಲಭ್ಯವಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಖಾಸಗಿ ಸೌಲಭ್ಯಗಳಲ್ಲಿ 780 ರೂ.ಗಳಿಗೆ ಮಾರಾಟವಾಗ್ತಿವೆ. ಇದೀಗ ಇವುಗಳ ಬೆಲೆಯಲ್ಲೂ ಗಣನೀಯವಾದ ಇಳಿಕೆ ಕಂಡು ಬರುವ ಸಾಧ್ಯತೆ ಇದ್ದು, ಪ್ರತಿ ಡೋಸ್​ಗೆ 275 ರೂ. ಆಗಲಿದೆ ಎಂದು ತಿಳಿದು ಬಂದಿದೆ.

ಹಿಂದಿನ ಲೇಖನಸೆಲ್ಫಿ ಕ್ರೇಜ್: ಹೊಗೇನಕಲ್ ಜಲಪಾತದಲ್ಲಿ ಕಾಲು ಜಾರಿ ಬಿದ್ದು ವಿದ್ಯಾರ್ಥಿ ಸಾವು
ಮುಂದಿನ ಲೇಖನಜನ್ಮದಿನದ ಅಂಗವಾಗಿ ಗೋ ಪೂಜೆ ಸಲ್ಲಿಸಿದ ಸಿಎಂ: ಗಣ್ಯರಿಂದ ಶುಭಾಶಯ