ಮನೆ ಸುದ್ದಿ ಜಾಲ ಸಾಲ್ ಮೊನೆಲ್ಲಾ ಬ್ಯಾಕ್ಟಿರಿಯಾ ಸೋಂಕು: ಬೆಲ್ಜಿಯಂನ ಕಿಂಡರ್ ಚಾಕೋಲೆಟ್ ಕಾರ್ಖಾನೆ ಬಂದ್

ಸಾಲ್ ಮೊನೆಲ್ಲಾ ಬ್ಯಾಕ್ಟಿರಿಯಾ ಸೋಂಕು: ಬೆಲ್ಜಿಯಂನ ಕಿಂಡರ್ ಚಾಕೋಲೆಟ್ ಕಾರ್ಖಾನೆ ಬಂದ್

0

ಬ್ರಸೆಲ್ಸ್‌: ಯುರೋಪ್‌ನ ಹಲವು ರಾಷ್ಟ್ರಗಳು ಮತ್ತು ಅಮೆರಿಕದಲ್ಲಿ ಸಾಲ್‌ಮೊನೆಲ್ಲಾ ಬ್ಯಾಕ್ಟಿರಿಯಾ ಸೋಂಕು ಪ್ರಕರಣಗಳು ವರದಿಯಾಗಲು ಇಟಲಿಯ ಫೆರೆರೊ ಸಂಸ್ಥೆಯ ಕಿಂಡರ್‌ ಚಾಕೋಲೆಟ್‌ಗಳು ಕಾರಣ ಎಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಕಾರ್ಖಾನೆಗಳನ್ನು ಮುಚ್ಚಲು ಬೆಲ್ಜಿಯಂ ಸರ್ಕಾರ ಶುಕ್ರವಾರ ಆದೇಶಿಸಿದೆ.

ವೇಳೆ ಕಿಂಡರ್‌ ಮಿಠಾಯಿ ತಯಾರಕ ಸಂಸ್ಥೆ ಫೆರೆರೊ ನೀಡಿರುವ ಮಾಹಿತಿಯು ಅಪೂರ್ಣ ಎಂಬುದು ಗೊತ್ತಾಗಿದೆ. ಹೀಗಾಗಿ, ಕಾರ್ಖಾನೆಗಳನ್ನು ಮುಚ್ಚಲು ಆದೇಶಿಸಲಾಗಿದೆ’ ಎಂದು ಬೆಲ್ಜಿಯಂನ ಆಹಾರ ಸುರಕ್ಷತಾ ಪ್ರಾಧಿಕಾರ ಎಎಫ್‌ಎಸ್‌ಸಿಎ ತಿಳಿಸಿದೆ.

ಫೆರೆರೊ ಕಂಪನಿಯ ಕಿಂಡರ್ ಬ್ರ್ಯಾಂಡ್‌ನ ಸಂಪೂರ್ಣ ಉತ್ಪನ್ನಗಳನ್ನೂ ಹಿಂದಕ್ಕೆ ಪಡೆಯುವಂತೆಯೂ ಪ್ರಾಧಿಕಾರ ಆದೇಶಿಸಿದೆ. ಫ್ರಾನ್ಸ್‌ನಲ್ಲಿ ಸಾಲ್‌ಮೊನೆಲ್ಲಾ ಬ್ಯಾಕ್ಟಿರಿಯಾದ 21 ಸೋಂಕು ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 15 ಕಿಂಡರ್ ಉತ್ಪನ್ನಗಳನ್ನು ಸೇವಿಸಿದ್ದಾರೆ ಎಂದು ಗೊತ್ತಾಗಿದೆ.

ಬ್ರಿಟನ್‌ನಲ್ಲಿಯೂ 63 ಸಾಲ್‌ಮೊನೆಲ್ಲಾ ಪ್ರಕರಣಗಳು ವರದಿಯಾಗಿವೆ. ಸಾಲ್‌ಮೊನೆಲ್ಲಾ ಎಂಬುದು ಬ್ಯಾಕ್ಟೀರಿಯ. ಅದು ಅತಿಸಾರ, ಜ್ವರ, ಹೊಟ್ಟೆ ನೋವು ಸೇರಿದಂತೆ ಹಲವು ಬಗೆಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಆಹಾರದ ಮೂಲಕವೇ ಈ ಸೋಂಕು ಹರಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಮೊನೆಲ್ಲಾ ಬ್ಯಾಕ್ಟೀರಿಯಾ ಸೋಂಕಿನ ಕಾರಣಕ್ಕಾಗಿ ಫೆರೆರೊ ಕ್ಷಮೆ ಯಾಚಿಸಿದೆ. ಅಂತರಿಕ ವೈಫಲ್ಯವನ್ನು ನಾವು ಒಪ್ಪಿಕೊಳ್ಳುತ್ತೇವೆ. ಇದಕ್ಕಾಗಿ ನಾವು ಹೃದಯಾಂತರಾಳದಿಂದ ಕ್ಷಮೆ ಕೋರುತ್ತೇವೆ ಎಂದು ಫೆರೆರೊ ಹೇಳಿದೆ. ‘ಮಾರುಕಟ್ಟೆಗೆಗೆ ಬಿಡುಗಡೆಯಾದ ಕಿಂಡರ್ ಉತ್ಪನ್ನಗಳಲ್ಲಿ ಸಾಲ್ಮೊನೆಲ್ಲಾ ಇರಲಿಲ್ಲ. ಆದರೆ ಸಾಲ್ಮೊನೆಲ್ಲಾ ಸೋಂಕು ಪತ್ತೆಯಾದ ಬೆಲ್ಜಿಯಂನಲ್ಲಿ ಅವುಗಳನ್ನು ತಯಾರಿಸಿದ ಕಾರಣ ಚಾಕೋಲೆಟ್‌ ಉತ್ಪನ್ನಗಳನ್ನು ಹಿಂದಕ್ಕೆ ಪಡೆಯಲು ನಿರ್ಧಾರಿಸಲಾಗಿದೆ’ ಎಂದು ಫೆರೆರೊ ಹೇಳಿದೆ.