ಮನೆ ಸುದ್ದಿ ಜಾಲ ಚಾಮುಂಡಿ ಬೆಟ್ಟಕ್ಕೆ ಧಕ್ಕೆ ಉಂಟುಮಾಡುವ ಅಭಿವೃದ್ಧಿ ಕಾರ್ಯ ಬೇಡ

ಚಾಮುಂಡಿ ಬೆಟ್ಟಕ್ಕೆ ಧಕ್ಕೆ ಉಂಟುಮಾಡುವ ಅಭಿವೃದ್ಧಿ ಕಾರ್ಯ ಬೇಡ

0

ಮೈಸೂರು(Mysuru): ಚಾಮುಂಡಿ ಬೆಟ್ಟಕ್ಕೆ(Chamundi hill) ಧಕ್ಕೆ ಉಂಟುಮಾಡುವ ಯಾವುದೇ ಅಭಿವೃದ್ಧಿ ಕಾರ್ಯಗಳು  ಮಾಡಬಾರದೆಂದು ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆಯುವಂತೆ ಸಾಹಿತಿಗಳು ಗಣ್ಯರಿಗೆ ಮನವಿ ಮಾಡಲು ಚಾಮುಂಡಿ ಬೆಟ್ಟ ಉಳಿಸಿ ಸಮಿತಿಯ ನಿರ್ಧಾರ ಮಾಡಿದೆ.

ಇಂದು  ಚಾಮುಂಡಿ ಬೆಟ್ಟ ಉಳಿಸಿ ಸಮಿತಿಯ ಸಭೆ ನಡೆಸಿದ್ದು,  ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಈ ಕೆಳಕಂಡಂತಿವೆ.

ಒಂದು ವಾರದಲ್ಲಿ ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳಿಗೆ ಮತ್ತು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸೇರಿದಂತೆ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ, ನಗರ ಪಾಲಿಕೆ, ಮೂಡಾ ಇವರಿಗೆ ಮನವಿ ಸಲ್ಲಿಕೆ.

ಕರ್ನಾಟಕದ ಮುಖ್ಯವಾಗಿ ಮೈಸೂರು ನಗರದ ಗಣ್ಯರು, ಸಾಹಿತಿಗಳು ಮತ್ತು ಕಲಾವಿದರು ಇವರಿಂದ ಚಾಮುಂಡಿ ಬೆಟ್ಟಕ್ಕೆ ಧಕ್ಕೆ ಉಂಟು ಮಾಡುವ ಯಾವುದೇ ಅಭಿವೃದ್ಧಿ ಚಟುವಟಿಕೆಗಳನ್ನು ಮಾಡಬಾರದೆಂದು ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆಯುವಂತೆ ಕೋರುವುದು ಎಂಬ ನಿರ್ಣಯವನ್ನ ಕೈಗೊಂಡಿದೆ.

ಹಿಂದಿನ ಲೇಖನತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಸಮಯದ ಕೊರತೆ ನಿವಾರಣೆ: ನ್ಯಾ‌.ಎಂ.ಎಲ್.ರಘುನಾಥ್
ಮುಂದಿನ ಲೇಖನಸಾಲ್ ಮೊನೆಲ್ಲಾ ಬ್ಯಾಕ್ಟಿರಿಯಾ ಸೋಂಕು: ಬೆಲ್ಜಿಯಂನ ಕಿಂಡರ್ ಚಾಕೋಲೆಟ್ ಕಾರ್ಖಾನೆ ಬಂದ್