ಮನೆ ರಾಜ್ಯ ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೆ ವೇತನ ಹೆಚ್ಚಿಸಿ ಆದೇಶ

ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೆ ವೇತನ ಹೆಚ್ಚಿಸಿ ಆದೇಶ

0

ಬೆಂಗಳೂರು: ಸಾರಿಗೆ ನಿಗಮಗಳ ನಿವೃತ್ತಿಯಾಗಿರುವ ನೌಕರರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. ಕಾರ್ಮಿಕ ಸಂಘಟನೆಗಳ ಮನವಿಯ ಬೆನ್ನಲ್ಲೇ, ನಿವೃತ್ತಿಯಾದ ನೌಕರರಿಗೂ ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಪರಿಣಾಮವಾಗಿ 2023ರ ಮಾರ್ಚ್​​ನಲ್ಲಿ ನಿವೃತ್ತಿಯಾದ ನೌಕರರಿಗೆ ಶೇ 15 ರಷ್ಟು ಹೆಚ್ಚುವರಿ ವೇತನ ಸಿಗಲಿದೆ.

Join Our Whatsapp Group

2023 ರ ಮಾರ್ಚ್​​ನಲ್ಲಿ ನಿವೃತ್ತಿ ಹೊಂದಿದ ಅಧಿಕಾರಿ ಮತ್ತು ನೌಕರರಿಗೆ 2019 ರ ಡಿಸೆಂಬರ್ 31 ರಂದು ಅವರು ಪಡೆಯುತ್ತಿದ್ದ ಮೂಲವೇತನವನ್ನು ಪರಿಗಣಿಸಿ ಶೇ 15 ರಷ್ಟು ಹೆಚ್ಚಿಸಿ ಅದರಂತೆ ವೇತನ ಶ್ರೇಣಿ ಪರಿಷ್ಕರಿಸಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನಿವೃತ್ತಿಯಾದ ನೌಕರರಿಗೆ ವೇತನ ಪರಿಷ್ಕರಣೆಯ ಹೆಚ್ಚಿಸಿದ ಹಣ ಕೊಡಲು ನಾಲ್ಕು ಸಾರಿಗೆ ನಿಗಮಗಳಿಗೆ ಅಂದಾಜು 220 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

2023 ರ ಮಾರ್ಚ್ 01 ರಂದು ಸಂಸ್ಥೆಯ ಸೇವೆಯಲ್ಲಿದ್ದ ಅಧಿಕಾರಿ ನೌಕರರಿಗೆ 2020 ರ ಜನವರಿ 1 ರಿಂದ 2023 ರ ಫೆಬ್ರವರಿ 28 ರ ಅವಧಿಯನ್ನು ನೋಷನಲ್ ಆಗಿ ಪರಿಗಣಿಸಿ ವೇತನ ನಿಗದಿಪಡಿಬೇಕು. ಈ ವರ್ಷದ ಕೊನೆಯಲ್ಲಿ ನಿವೃತ್ತಿ ನೌಕರರಿಗೆ ವೇತನ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹಿಂದಿನ ಲೇಖನಕಂಪ್ಲಿ: ಸೋಮಪ್ಪನ ಕೆರೆಯಲ್ಲಿ ಮೀನುಗಾರರ ಬಲೆಗೆ ಬಿದ್ದ ಮೊಸಳೆ
ಮುಂದಿನ ಲೇಖನಬಿಟ್ ಕಾಯಿನ್ ಪ್ರಕರಣ: ಡಿವೈಎಸ್ಪಿ ಶ್ರೀಧರ್ ಪೂಜಾರಿಗೆ ನಿರೀಕ್ಷಣಾ ಜಾಮೀನು