ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನಟಿ ಸಂಯುಕ್ತ ಹೊರನಾಡು ಮತ್ತು ಬೆಂಗಳೂರಿನ ಟೆಕ್ಯೋನ್ ಸಂಸ್ಥೆ ಮತ್ತು ಪ್ರಾಣ ಅನಿಮಲ್ ಪ್ರತಿಷ್ಠಾನದ ಸಹಯೋಗದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ ಎಂದು ಉದ್ಯಾನದ ಕಾರ್ಯನಿರ್ವಹಾಕ ನಿರ್ದೇಶಕ ಸೂರ್ಯಸೇನ್ ತಿಳಿಸಿದರು.
ನಟಿ ಸಂಯುಕ್ತ ಹೊರನಾಡು ಅವರು ವಿವಿಧ ಕಂಪನಿಗಳ ಸಹಯೋಗದೊಂದಿಗೆ ಎರಡೂವರೆ ವರ್ಷದ ಹುಲಿಯನ್ನು ದತ್ತು ಪಡೆಯುವ ಮೂಲಕ ವನ್ಯಜೀವಿ ಸಂರಕ್ಷಣೆ ನಿಟ್ಟಿನಲ್ಲಿ ಜಾಗೃತಿ ಮೂಡಿಸಿದರು.