ಅಹಮದಾಬಾದ್ : ಸರ್ದಾರ್ ಪಟೇಲ್ ಅವರ 150 ನೇ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಭಾರತದ ಏಕೀಕರಣದ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು.
ರಾಷ್ಟ್ರೀಯ ಸಮಗ್ರತೆ, ಉತ್ತಮ ಆಡಳಿತ ಮತ್ತು ಸಾರ್ವಜನಿಕ ಸೇವೆಗೆ ಅವರ ಅಚಲ ಬದ್ಧತೆಯು ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಲ್ಲಿದ್ದವರಿಗೆ ಪ್ರಧಾನಿ ಮೋದಿ ಏಕತಾ ದಿವಸದ ಪ್ರತಿಜ್ಞೆ ಬೋಧಿಸಿದರು. ಪೊಲೀಸರು ಮತ್ತು ಅರೆಸೈನಿಕ ಪಡೆಗಳಿಂದ ರಾಷ್ಟ್ರೀಯ ಏಕತಾ ದಿನದ ಪರೇಡ್ ಜೊತೆಗೆ ಸಾಂಸ್ಕೃತಿಕ ಉತ್ಸವವೂ ನಡೆಯಲಿದೆ.
ಇಂದು ಉಕ್ಕಿನ ಮನುಷ್ಯ ಸದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ. ಗುಜರಾತಿನ ಏಕ್ತಾ ನಗರದಲ್ಲಿ ನಿರ್ಮಿಸಲಾಗಿರುವ ಏಕತಾ ಪ್ರತಿಮೆ ಬಳಿ ಗಣರಾಜ್ಯೋತ್ಸವ ಮಾದರಿಯ ಪರೇಡ್ ನಡೆದಿದೆ.
ರಾಷ್ಟ್ರೀಯ ಏಕತಾ ದಿವಸ್ ಎಂಬ ಈ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಗಣರಾಜ್ಯೋತ್ಸವದ ಮೆರವಣಿಗೆಯ ಮಾದರಿಯಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರ ಪೊಲೀಸ್ ಪಡೆಗಳ ತುಕಡಿಗಳು ಭಾಗವಹಿಸಿವೆ.
ಹತ್ತು ರಾಜ್ಯಗಳ ಟ್ಯಾಬ್ಲೋಗಳು, ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದ ಫ್ಲೈ-ಪಾಸ್ಟ್ ಮತ್ತು ಮಹಿಳಾ ನೇತೃತ್ವದ ತುಕಡಿಗಳು ಪ್ರಮುಖ ಪಾತ್ರ ವಹಿಸಿವೆ. ನವೆಂಬರ್ 1 ರಿಂದ 15 ರವರೆಗೆ ಭಾರತ್ ಪರ್ವ್ ಮತ್ತು ಭಾರತದ ಉಕ್ಕಿನ ಮನುಷ್ಯನನ್ನು ಗೌರವಿಸಲು ಪಾದಯಾತ್ರೆಗಳೊಂದಿಗೆ ಉತ್ಸವಗಳು ಮುಂದುವರೆಯಲಿವೆ.















