ಮನೆ ಕ್ರೀಡೆ ಪ್ರೊ ಕಬಡ್ಡಿ ಲೀಗ್‌’ನ ವೇಳಾಪಟ್ಟಿ ಪ್ರಕಟ

ಪ್ರೊ ಕಬಡ್ಡಿ ಲೀಗ್‌’ನ ವೇಳಾಪಟ್ಟಿ ಪ್ರಕಟ

0

ಬೆಂಗಳೂರು(Bengaluru): ಪ್ರೊ ಕಬಡ್ಡಿ ಲೀಗ್‌ನ ಒಂಬತ್ತನೇ ಆವೃತ್ತಿಯ ವೇಳಾಪಟ್ಟಿಯನ್ನು ಟೂರ್ನಿಯ ಆಯೋಜಕ ಸಂಸ್ಥೆ ಮಶಾಲ್ ಸ್ಪೋರ್ಟ್ಸ್ ಬುಧವಾರ ಪ್ರಕಟಿಸಿದ್ದು, ಕಂಠೀರವ ಕ್ರೀಡಾಂಗಣದಲ್ಲಿ ಅ. 7ರಿಂದ ಕಬಡ್ಡಿ ಆರಂಭವಾಗಲಿದೆ.

ಅ.7ರಿಂದ ನಂತರ 26ರವರೆಗೆ ಮೊದಲ ಹಂತದ ಪಂದ್ಯಗಳು ನಡೆಯಲಿದ್ದು, ಅ.28ರಿಂದ ನವೆಂಬರ್‌ 7ರವರೆಗೆ ಪುಣೆಯ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ನಂತರದ ಹಂತದ ಪಂದ್ಯಗಳು ಆಯೋಜನೆಯಾಗಿವೆ. ಈ ಬಾರಿ ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ.

ಲೀಗ್‌ನ ಮೊದಲ ಮೂರು ದಿನ, ಪ್ರತಿ ದಿನಕ್ಕೆ ಮೂರು ಪಂದ್ಯಗಳು ನಡೆಯಲಿವೆ. ಪ್ರತಿ ಶುಕ್ರವಾರ ಮತ್ತು ಭಾನುವಾರವೂ ಮೂರು ಪಂದ್ಯಗಳನ್ನು ಆಡಿಸಲಾಗುತ್ತದೆ. ಮೊದಲಾರ್ಧದಲ್ಲಿ ಒಟ್ಟು 66 ಪಂದ್ಯಗಳು ಆಯೋಜನೆಯಾಗಿವೆ.

ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಂಗ್ ಡೆಲ್ಲಿ ಮತ್ತು ಯು ಮುಂಬಾ ಸೆಣಸಲಿವೆ. ಅದೇ ದಿನ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ತೆಲುಗು ಟೈಟನ್ಸ್‌ಗೆ ಮುಖಾಮುಖಿಯಾಗುವುದು.ಲೀಗ್‌ನ ದ್ವಿತೀಯಾರ್ಧದ ವೇಳಾಪಟ್ಟಿಯನ್ನು ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಪ್ರಕಟಿಸಲಾಗುತ್ತದೆ.

ಹಿಂದಿನ ಲೇಖನರಾಷ್ಟ್ರಪತಿಗಳು ದಸರಾ ಉದ್ಘಾಟಿಸುತ್ತಿರುವುದು ಹೆಮ್ಮೆಯ ಸಂಗತಿ: ಯದುವೀರ್ ಒಡೆಯರ್
ಮುಂದಿನ ಲೇಖನಬಿ.ಎಸ್.ಯಡಿಯೂರಪ್ಪ ಅವರು ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿಲ್ಲ: ಬಿ.ವೈ.ವಿಜಯೇಂದ್ರ