ಮನೆ ಜ್ಯೋತಿಷ್ಯ ಶಿಲ್ಪ ಶಾಸ್ತ್ರ

ಶಿಲ್ಪ ಶಾಸ್ತ್ರ

0

  ಆಗಮನ ಶಾಸ್ತ್ರದ ಪ್ರತಿ ಮಾಲ ಲಕ್ಷಣದಲ್ಲಿ ಮೂರ್ತಿ ಅಥವಾ ವಿಗ್ರಹಗಳನ್ನು ನಿರ್ಮಾಣ ಮಾಡುವ ವಿವರಗಳು ಅಡಗಿವೆ. ಶಿಲ್ಪ ‘ಸ್ಥಪತಿ’ ಎಂದೂ ಅಗಮಿಕರಿಗೆ ಸ್ಥಾಪಕ ಎಂದು ಹೆಸರುಗಳುಂಟು. ಈ ಪ್ರತಿಮಾ ಲಕ್ಷಣದಲ್ಲಿ ಮೂರ್ತಿಗಳ ಲಕ್ಷಣಗಳನ್ನೂ, ಅವುಗಳ ತತ್ವಗಳ ಮೂಲ ಸಂಕೇತವನ್ನೂ ಆಯಾಯ ಮೂರ್ತಿಗಳ ಕೈಗಳಲ್ಲಿ ಧರಿಸಿರುವ ಆಯುಧ ವಿಶೇಷಗಳ ಕಾರಣಗಳನ್ನು, ಸಮಭಂಗಿ, ತ್ರಿಭಂಗಿ  ಮೊದಲಾದ ಅಂಗ ವಿನ್ಯಾಸಗಳ ವೈಖರಿಗಳನ್ನೂ ಸಕಾರಣವಾಗಿ ಚಿತ್ರಿಸಲಾಗಿದೆ.

Join Our Whatsapp Group

    ದೇವಾಲಯಗಳನ್ನು ಕಟ್ಟಲು ಮತ್ತು ಮೂರ್ತಿಗಳನ್ನು ನಿರ್ಮಿಸಲು ಬೇಕಾಗುವ ಶಿಲೆಗಳ ಲಕ್ಷಣಗಳನ್ನು ಆಗಮ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಶಿಲೆಗಳಲ್ಲಿ ಪುಂಶಿಲೆ, ಸ್ತ್ರೀಶಿಲೆ, ನಪುಂಸಕಶಿಲೆ, ಎಂಬುದಾಗಿ ಮೂರು ವಿಧಗಳುಂಟು. ಕಂಚಿನ ತಾಳದ ನಾದದಂತೆ ಧ್ವನಿಕೊಡುವ ಶಿಲೆಯು ಪುಂಶಿಲೆಯೆಂದೂ, ಘಂಟಾನಾದದಂತೆ ಧ್ವನಿಕೊಡುವ  ಶಿಲೆಯು ಸ್ತ್ರೀ ಶಿಲೆಯೆಂದೂ,

ತಾಳನಾದ ವಿಹೀನವಾದ ಶಿಲೆಯು ನಪುಂಸಕ ಶಿಲೆಯೆಂದೂ ಉಲ್ಲೇಖವಿದೆ.ಪುರುಷ ದೇವತಾ ವಿಗ್ರಹವನ್ನು ಸ್ತ್ರೀ ದೇವತಾ ವಿಗ್ರಹಗಳನ್ನು  ಪುಂಶಿಲೆಯಿಂದಲೂ, ಸ್ತ್ರೀದೇವತಾ ವಿಗ್ರಹಗಳನ್ನು ಸ್ತ್ರೀಶಿಲೆಯಿಂದಲೂ.  ಆಧಾರ ಪೀಠಾಧಿಗಳನ್ನು ನಪುಂಸಕ ಶಿಲೆಯಿಂದಲೂ  ನಿರ್ಮಿಸಬೇಕೆಂದು ವಿಧಿಸಿದ ಈ ಕರ್ಮಕ್ಕೆ ವಿರೋಧವಾಗಿ ನಿರ್ಮಿಸಲಾಗಿರುವ ವಿಗ್ರಹಗಳು ಎಷ್ಟೇ ಸುಂದರವಾಗಿದ್ದರೂ ಶಿಲ್ಪ ಕಲಾ ಪರಿಪೂರ್ಣವಾಗಿದ್ದರು ಅದರಲ್ಲಿ  ಅದರಲ್ಲಿ ನಡೆಸುವ ಆಗಮೋಕ್ತ ಪ್ರತಿಷ್ಠಾಕಾರ್ಯವು ಫಲ ಪ್ರದವಾಗುವುದಲ್ಲವೆಂದು ಶಾಸ್ತ್ರವಿದೆ.ಕಳಾವಿಹೀನವಾದ ಈ ಮೂರ್ತಿಯು ಪೂಜಾರ್ಹವೂ ಅಲ್ಲ. ಆಗಮನ ಸಿದ್ದಾಂತ ಮತ್ತು ಶಿಲ್ಪ ಸಿದ್ದಾಂತ ಸಮನ್ವಯದಿಂದ ನಿರ್ವಹಿಸಲಾಗಿರುವ ಪ್ರತಿಮೆಗಳಲ್ಲಿ ಕಾಳಪೂರ್ಣತೆಯಿದ್ದು, ಭಕ್ತರ ಮನಸ್ಸನ್ನು ಆಕರ್ಷಿಸುವ ವಿಶಿಷ್ಟ ಶಕ್ತಿ ಇರುತ್ತದೆ.