ಪ್ರೊಟೆಸ್ಟಂಟ್ ಬ್ರಿಷಪ್ ಓಮ್ಮೆ ತಮ್ಮ ಚರ್ಚ್ಚು ನಡೆಸುವ ಶಾಲೆಯೊಂದಕ್ಕೆ ವಾರ್ಷಿಕ ಭೇಟಿಗಾಗಿ ಹೋದರು. ಅವರು ಬಹಳ ಕಾಲದ ನಂತರ ಬಂದಿದ್ದ ಕಾರಣ ಅಲ್ಲಿಯೇ ಆ ರಾಶಿ ಉಳಿಯಲು ಯೋಚಿಸಿದರು. ಊಟವಾದ ನಂತರ ಅವರು ಶಾಲಾ ಫ್ರಾಂಶು ಪಾಲರು ಜೊತೆ ಮಾತುಕತೆಯಲ್ಲಿ ತೊಡಗಿದರು. ಆಗ ಬಿಷಪ್ “ಮನುಷ್ಯನು ಪ್ರಕೃತಿ ರಹಸ್ಯವನ್ನು ಬಳಸಿಕೊಳ್ಳುತ್ತಿದ್ದಾನೆ. ಸಮಾಜಕ್ಕೆ ಉಪಯೋಗವಾಗುವಂತಹ ಹಲವಾರು ವಸ್ತುಗಳನ್ನು ಕಂಡುಹಿಡಿದಿದ್ದಾನೆ ಆದರೆ ಇನ್ನೂ ಅವನು ಕಂಡುಹಿಡಿಯಬಹುದು ಎಂದು ನನಗೆ ಅನಿಸಿದು. ವಿಶ್ವವು ಅತಿ ಶೀಘ್ರದಲ್ಲಿ ಕೊನೆಯಾಗುತ್ತದೆ ಎಂದು ನನ್ನ ಭಾವನೆ” ಎಂದು ಹೇಳಿದರು
ಇದನ್ನು ಪ್ರಾಂಶುಪಾಲರು ಒಪ್ಪಲಿಲ್ಲ “ಮನುಷ್ಯ ಇನ್ನು ಹಲವಾರು ವಿಷಯಗಳನ್ನು ಕಂಡುಹಿಡಿಯುವಲ್ಲಿದ್ದಾನೆ. 50 ವರ್ಷಗಳೊಳಗೆ ಈ ಭೂಮಿಯಲ್ಲಿ ಬಹಳಷ್ಟು ಅವಿಷ್ಕಾರಗಳಾಗಿವೆ” ಎಂದರು
“ಕನಿಷ್ಠ ಒಂದನ್ನಾದರೂ ತಿಳಿಸುತ್ತೀರಾ? ” ಎಂದು ಬಿಷಬ್ ಸವಾ ಲೆಸೆದರು.
“ ಏಕೆಲ್ಲ, ಮನುಷ್ಯನು ಶೀಘ್ರದಲ್ಲಿ ಹಾರಬಹುದು” ಪ್ರಾಂಶುಪಾಲರು ಉತ್ತರಿಸಿದರು.
“ಮೂರ್ಖತನ! ಮನುಷ್ಯ ಹಾರಬೇಕೆಂದು ದೇವನಿಗೆ ಅನಿಸಿದ್ದರೆ ಅವನಿಗೆ ಹಾರಲು ರೆಕ್ಕೆಗಳನ್ನು ನೀಡುತ್ತಿದ್ದ. ಅದನ್ನು ಅವನು ಪಕ್ಷಿಗಳಿಗೆ ಮತ್ತು ಕೀಟಗಳಿಗೆ ಮಾತ್ರ ನೀಡುದ್ದಾನೆ. ಅವುಗಳು ಮಾತ್ರ ಹಾರಬೇಕೆಂಬುದು ಅವನ ಇಚ್ಛೆಯಾಗಿತೇ ಹೊರತು ಮನುಷ್ಯನಲ್ಲ” ಎಂದು ಬಿಷಪ್ ಹೇಳಿದರು.
ಪ್ರಶ್ನೆಗಳು
1. ಬಿಷಪ್ ರ ಹೆಸರು ನಿಮಗೆ ಗೊತ್ತಾ?
2. ಈ ಕಥೆಯ ನೀತಿಯೇನು?
ಉತ್ತರಗಳು
1.ಆವರ ಹೆಸರು ರೈಟ್. ಅವರಿಗೆ ಅರಿವಲ್ಲೆ ಹಾಗೂ ವಿಲ್ಬರ್ ಎಂಬ ಇಬ್ಬರು ಮಕ್ಕಳಿದ್ದರು. ಅವರಿಬ್ಬರೂ ವಿಮಾನವನ್ನು ರಚಿಸುವ ಇತಿಹಾಸವನ್ನು ಸೃಷ್ಟಿಸಿದರು.
2. ಆಶಾವಾದ ಹಾಗೂ ದೂರ ದೃಷ್ಟಿಯಿಂದ ಮಾತ್ರ ತಾಂತ್ರಿಕ ಅವಿಷ್ಕಾರ ಸಾಧ್ಯ. ಈ ಭೂಮಿಯಲ್ಲಿ ಶೋಧಿಸುವುದು.ಬಹಳಷ್ಟಿದೆ ಎಂದು ನಾವು ನಂಬಬೇಕು. ನಿರಂತರ ಸಂಶೋಧನೆ ಹಾಗೂ ಪರಿಶ್ರಮದಿಂದ ಮನುಷ್ಯನು ನಿಸರ್ಗವನ್ನು ಇನ್ನೂ ಉತ್ತಮವಾಗಿ ಅವಿಷ್ಕರಿಸಬಲ್ಲನು ಹಾಗೂ ಹೆಚ್ಚು ಹೆಚ್ಚು ಸಾಧಿಸಬಲ್ಲನು. ಆದರೆ ಅವರು ಈ ಭೂಮಿಯಲ್ಲಿರುವ ಪ್ರತಿಯೊಬ್ಬರ ಬದುಕು ಉತ್ತಮವಾಗಲು ಹಾಗೂ ಅರ್ಥಪೂರ್ಣವಾಗಲು ಮಾತ್ರ ಈ ಸಾಧನೆಗಳನ್ನು ಹಾಗೂ ಅವಿಷ್ಕಾರಣಗಳನ್ನು ಬಳಸಬೇಕು.