ಮನೆ ಕ್ರೀಡೆ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯ: ಇಂಗ್ಲೆಂಡ್‌ ಗೆ 118 ರನ್‌ ಗಳ ಜಯ

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯ: ಇಂಗ್ಲೆಂಡ್‌ ಗೆ 118 ರನ್‌ ಗಳ ಜಯ

0

ಮ್ಯಾಂಚೆಸ್ಟರ್ (Manchester): ಆಲ್‌ರೌಂಡ್‌ ಆಟವಾಡಿದ ಇಂಗ್ಲೆಂಡ್‌ ತಂಡ, ಎರಡನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 118 ರನ್‌ಗಳ ಜಯ ಸಾಧಿಸಿದೆ.

ಇಂಗ್ಲೆಂಡ್‌ ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1–1 ರಲ್ಲಿ ಸಮಬಲ ಮಾಡಿಕೊಂಡಿತು. ಮೂರನೇ ಹಾಗೂ ಕೊನೆಯ ಪಂದ್ಯ ಭಾನುವಾರ ನಡೆಯಲಿದೆ.

ಓಲ್ಡ್‌ ಟ್ರಾಫರ್ಡ್‌ನಲ್ಲಿ ನಡೆದ ಪಂದ್ಯ ಮಳೆಯ ಕಾರಣ ನಾಲ್ಕು ಗಂಟೆ ತಡವಾಗಿ ಆರಂಭವಾಯಿತು. ಇದರಿಂದ ಓವರ್‌ಗಳ ಸಂಖ್ಯೆಯನ್ನು 29ಕ್ಕೆ ಇಳಿಸಲಾಗಿತ್ತು. ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡ ಲಿಯಾಮ್‌ ಲಿವಿಂಗ್‌ಸ್ಟೋನ್ (38, 26 ಎ.) ಮತ್ತು ಸ್ಯಾಮ್‌ ಕರನ್ (35, 18 ಎ.) ಅವರ ಭರ್ಜರಿ ಆಟದ ನೆರವಿನಿಂದ 28.1 ಓವರ್‌ಗಳಲ್ಲಿ 201 ರನ್‌ ಗಳಿಸಿತು.

ಆದಿಲ್‌ ರಶೀದ್‌ (29ಕ್ಕೆ 3) ಹಾಗೂ ಮೊಯೀನ್‌ ಅಲಿ (22ಕ್ಕೆ 2) ಅವರ ಸ್ಪಿನ್‌ ದಾಳಿಗೆ ಪರದಾಟ ನಡೆಸಿದ ದಕ್ಷಿಣ ಆಫ್ರಿಕಾ 20.4 ಓವರ್‌ಗಳಲ್ಲಿ 83 ರನ್‌ಗಳಿಗೆ ಆಲೌಟಾಯಿತು.