Saval TV on YouTube
ಚಂಡಿಗಡ: ಭಾರತ – ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಮಂಗಳವಾರ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಶಸ್ತ್ರಸಜ್ಜಿತ ಪಾಕಿಸ್ತಾನಿ ನುಸುಳುಕೋರರನ್ನು ಗಡಿ ಭದ್ರತಾ ಪಡೆ (ಬಿಎಸ್’ಎಫ್) ಹೊಡೆದುರುಳಿಸಿದೆ.
ನುಸುಳುಕೋರರಿಂದ ಬಂದೂಕುಗಳು ಸೇರಿದಂತೆ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ 8 ಗಂಟೆ ಸುಮಾರಿಗೆ ಗುರುದಾಸ್’ಪುರ ಸೆಕ್ಟರ್’ನಲ್ಲಿ ಶಂಕಿತ ನುಸುಳುಕೋರನೊಬ್ಬನ ಚಲನವಲನಗಳನ್ನು ಗಮನಿಸಿ ಆತನನ್ನು ಹತ್ಯೆ ಮಾಡಲಾಗಿದೆ.
ಮತ್ತೊಂದೆಡೆ ಅಮೃತಸರದ ದರಿಯಾ ಮನ್ಸೂರ್ ಗ್ರಾಮದ ಬಳಿ ಮತ್ತೊಬ್ಬ ನುಸುಳುಕೋರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.
ಘಟನಾ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.














