ಮನೆ ರಾಷ್ಟ್ರೀಯ ಶಾಹಿ ಈದ್ಗಾ ಮಸೀದಿಯಲ್ಲಿ ಅಭಿಷೇಕ, ಪೂಜೆಗೆ ಅನುಮತಿ ಕೋರಿ ಅರ್ಜಿ: ಜುಲೈ 1ಕ್ಕೆ ವಿಚಾರಣೆ

ಶಾಹಿ ಈದ್ಗಾ ಮಸೀದಿಯಲ್ಲಿ ಅಭಿಷೇಕ, ಪೂಜೆಗೆ ಅನುಮತಿ ಕೋರಿ ಅರ್ಜಿ: ಜುಲೈ 1ಕ್ಕೆ ವಿಚಾರಣೆ

0

ಮಥುರಾ (Mathura)- ಶಾಹಿ ಈದ್ಗಾ ಮಸೀದಿಯಲ್ಲಿ ಅಭಿಷೇಕಕ್ಕೆ ಅನುಮತಿ ಕೋರಿ ಹಿಂದೂ ಮಹಾಸಭಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಅರ್ಜಿಯ ವಿಚಾರಣೆ ಜುಲೈ 1ರಂದು ನಡೆಯಲಿದೆ.

ಹಿಂದೂ ಮಹಾಸಭಾ ಶಾಹಿ ಈದ್ಗಾ ಮಸೀದಿಯ ಶುದ್ದೀಕರಣ ಕೋರಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದರೊಂದಿಗೆ ಶ್ರೀ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿಯ ಮತ್ತೊಂದು ಭೂ ವಿವಾದವೇರ್ಪಟ್ಟಿದೆ.

ಶಾಹಿ ಈದ್ಗಾ ಮಸೀದಿಯು ಶ್ರೀ ಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿದೆ. ಶ್ರೀ ಕೃಷ್ಣ ಜನ್ಮಭೂಮಿಯ ಗರ್ಭಗುಡಿಯಲ್ಲಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಮಹಾಸಭಾದ ಖಜಾಂಚಿ ದಿನೇಶ್ ಶರ್ಮಾ ಮನವಿಯಲ್ಲಿ ಹೇಳಿದ್ದಾರೆ.  ಪುರಾತನ ದೇವಾಲಯದ ವಿವಾದಿತ ಸ್ಥಳದಲ್ಲಿ ‘ಅಭಿಷೇಕ’ ಮತ್ತು ಭಗವಾನ್ ಕೃಷ್ಣನ ಪೂಜೆ ಮಾಡಲು ಶಾಹಿ ಈದ್ಗಾ ಮಸೀದಿ ಪ್ರವೇಶಿಸಲು ಅವರು ಅನುಮತಿ ಕೇಳಿದ್ದಾರೆ.

ಮೊದಲು ಕತ್ತಿಗಳ ಬಲದಿಂದ ನಮ್ಮ ದೇವಾಲಯಗಳ ಮೇಲೆ ದಾಳಿ ಮಾಡಿದರು. ಆದರೆ ಈಗ ನಾವು ಪ್ರಾಚೀನ ಪರಂಪರೆಯನ್ನು ಹಿಂಪಡೆಯುತ್ತೇವೆ. ಮಸೀದಿಯನ್ನು ತೆರವುಗೊಳಿಸಬೇಕು ಮತ್ತು ಹಿಂದೂಗಳ ಸ್ವಾಭಿಮಾನವನ್ನು ಪುನಃಸ್ಥಾಪಿಸಬೇಕು ಎಂದು ನಾವು ಬಯಸುತ್ತೇವೆ ಎಂದು  ದಿನೇಶ್ ಶರ್ಮಾ ಹೇಳಿದ್ದಾರೆ.

ಇದಕ್ಕೂ ಮುನ್ನ ಮಥುರಾದಲ್ಲಿ ಶ್ರೀ ಕೃಷ್ಣ ವಿರಾಜಮಾನನ ಅರ್ಜಿ ವಿಚಾರಣೆ ನಡೆಸಲು ನ್ಯಾಯಾಲಯ ಒಪ್ಪಿಕೊಂಡಿತ್ತು. ಮೇ 26ರಂದು ಕೆಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಶಾಹಿ ಈದ್ಗಾ ಮಸೀದಿ ಇರುವ 2.37 ಎಕರೆ ಭೂಮಿಯನ್ನು ತೆರವುಗೊಳಿಸುವಂತೆ  ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.