ಚಾಮರಾಜನಗರ: ಅಡಿಕೆ ಹಾಗೂ ತೆಂಗಿನ ತೋಟದಲ್ಲಿ ಬೆಳೆದಿದ್ದ ಗಾಂಜಾ ಗಿಡವನ್ನು ಸೆನ್ ಠಾಣೆ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಕೋಡಿಮೋಳೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವಕುಮಾರ ಅಲಿಯಾಸ್ ಪುಲ್ಲಿ ಎಂಬುವವರು ತಮ್ಮ ಅಡಿಕೆ ಹಾಗೂ ತೆಂಗಿನ ತೋಟ ಮಧ್ಯ 18 ಗಾಂಜಾ ಗಿಡಗಳನ್ನು (19 ಕೆಜಿ) ಬೆಳೆದಿದ್ದರು.
ಈ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಚಾಮರಾಜನಗರದ ಸೆನ್ ಠಾಣೆ ಪೊಲೀಸರು ದಾಳಿ ಮಾಡಿ ಗಾಂಜಾ ಗಿಡ ವಶಪಡಿಸಿಕೊಂಡು, ಆರೋಪಿಯನ್ನ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಸಾಗರ್, ಎಸ್.ಐ. ಗಳಾದ ಪ್ರಕಾಶ್, ಧನಂಜಯ್, ಮುಖ್ಯಪೇದೆಗಳಾದ ಮಹದೇವಸ್ವಾಮಿ, ರಮೇಶ್, ಚಿಕ್ಕಣ್ಣ, ಮಹೇಶ್, ನವೀನ್, ಭೀಮಪ್ಪ ಹಿಂಡಿ, ಖಾದರ್ ಪಾಲ್ಗೊಂಡಿದ್ದರು.