ಮನೆ ಸುದ್ದಿ ಜಾಲ ಉಚಿತ ಬೇಸಿಗೆ ಶಿಬಿರ

ಉಚಿತ ಬೇಸಿಗೆ ಶಿಬಿರ

0

ಮಂಡ್ಯ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ಮತ್ತು ರಾಜ್ಯ ಬಾಲಭವನ ಸೊಸೈಟಿ ಇವರುಗಳ ಸಹಯೋಗದೊಂದಿಗೆ 2025-26ನೇ ಸಾಲಿನ ಬೇಸಿಗೆ ಶಿಬಿರವನ್ನು ಮೇ 02 ರಿಂದ 17 ರವರೆಗೆ ಆಯೋಜಿಸಲಾಗಿದೆ. 05 ರಿಂದ 16 ವರ್ಷ ವಯೋಮಿತಿಯುಳ್ಳ ಮಕ್ಕಳು ಅಶೋಕನಗರದ ಆನೆಪಾರ್ಕ್ ಬಳಿಯಿರುವ ಜಿಲ್ಲಾ ಬಾಲಭವನದಲ್ಲಿ ಉಚಿತ ಬೇಸಿಗೆ ಶಿಬಿರವನ್ನು ಪಾಲ್ಗೊಳ್ಳಬಹುದಾಗಿದೆ.

ಆಸಕ್ತ ಮಕ್ಕಳು ಏಪ್ರಿಲ್ 30 ರ ಒಳಗಾಗಿ ಜಿಲ್ಲಾ ಬಾಲಭವನ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಪಿ.ಕೋಮಲ ರವರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. ಸಂ: 9036801065 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.