ಹುಣಸೂರು: ತಾಲೂಕಿನ ಹನಗೋಡು ಹೋಬಳಿಯ ಉಮ್ಮತ್ತೂರು ಚೆಕ್ ಪೋಸ್ಟ್ ನಲ್ಲಿ ನಡೆಸಿದ ತಪಾಸಣೆ ವೇಳೆ ಯಾವುದೇ ದಾಖಲಾತಿ ಇಲ್ಲದೆ ಹಣ ಕೊಂಡೊಯ್ಯುತ್ತಿದ್ದ 1,60,920 ರೂ.ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮೈಸೂರು ಹೂಟಗಳ್ಳಿಯ ಪ್ರೀತಮ್ ಎಂಟರ್ ಪ್ರೈಸಸ್ ನ ಚೇತನ್ ಹುಣಸೂರಿನಿಂದ ಎಚ್.ಡಿ.ಕೋಟೆ ಕಡೆಗೆ ಹೋಗುವಾಗ ಈ ಘಟನೆ ನಡೆದಿದೆ.
ಪ್ರೀತಮ್ ಅವರ ವಾಹನ ತಪಾಸಣೆ ವೇಳೆ ಚುನಾವಣಾ ಆಯೋಗ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಮೊತ್ತ ಅವರನು ಹೊಂದಿದ್ದ ಕಾರಣ ಚೆಕ್‌ಪೋಸ್ಟ್ ನಲ್ಲಿದ್ದ ಸೆಕ್ಟರ್ ಅಧಿಕಾರಿ ಮಂಜುನಾಥ ಎನ್.ಎಂ. ಹಾಗೂ ಸಿಬ್ಬಂದಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಉಮ್ಮತ್ತೂರು ಚೆಕ್ ಪೋಸ್ಟ್: ತಾಲೂಕಿನ ಉಮ್ಮತ್ತೂರು ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ ದಾಖಲೆ ಇಲ್ಲದೆ ಕೊಂಡೊಯ್ಯುತ್ತಿದ್ದ 89,720 ರೂ. ಗಳನ್ನು ವಶಕ್ಕೆ ಪಡೆಯಲಾಗಿದೆ.
ಕೊಡಗಿನ ವಿರಾಜಪೇಟೆ ತಾಲೂಕು ಪೊನ್ನಂಪೇಟೆಯ ಅಲ್ತಾಫ್ ಎಂಬವರು ಚುನಾವಣಾ ಆಯೋಗ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಮೊತ್ತ ಹೊಂದಿದ್ದ ಕಾರಣ ಆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ಎನ್.ಎಂ. ಮಂಜುನಾಥ ಮತ್ತು ತಂಡ ವಾಹನ ತಪಾಸಣೆ ನಡೆಸಿ ಹಣ ವಶಕ್ಕೆ ಪಡೆದುಕೊಂಡಿದ್ದಾರೆ.