ಮನೆ ಶಿಕ್ಷಣ ಗರ್ಭಿಣಿಯಾಗಿದ್ದಾಗ ಸೆಕ್ಸ್ ಸುರಕ್ಷಿತವೇ? ನಿಮ್ಮ ಪ್ರಶ್ನೆಗಳಿಗೆ ಉತ್ತರ

ಗರ್ಭಿಣಿಯಾಗಿದ್ದಾಗ ಸೆಕ್ಸ್ ಸುರಕ್ಷಿತವೇ? ನಿಮ್ಮ ಪ್ರಶ್ನೆಗಳಿಗೆ ಉತ್ತರ

0
ಗರ್ಭಿಣಿಯಾಗಿದ್ದಾಗ ಸೆಕ್ಸ್ ಸುರಕ್ಷಿತವೇ

ಗರ್ಭಿಣಿಯಾದಾಗ ಖುಷಿಯ ಜೊತೆಗೆ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಈ ಸಮಯದಲ್ಲಿ ತುಂಬ ನಾಜೂಕಾಗಿರಬೇಕೆಂದು ಹಿರಿಯರು ಸಲಹೆ ನೀಡುತ್ತಾರೆ. ಜೋರಾಗಿ ಓಡ ಬೇಡ, ಜೋರಾಗಿ ನಡೆಯಬೇಡ, ಸ್ಕೂಟಿ ಓಡಿಸಬೇಡ, ಕಾರು ಡ್ರೈವ್‌ ಮಾಡುವಾಗ ಹುಷಾರು ಹೀಗೆ ನಾನಾ ಸಲಹೆ ನೀಡುತ್ತಾರೆ.

ಆದರೆ ಗರ್ಭಿಣಿಯಾದ ಬಳಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದೇ? ಎಷ್ಟು ತಿಂಗಳವರೆಗೆ ಲೈಂಗಿಕ ಕ್ರಿಯೆ ಸುರಕ್ಷಿತ ಎಂಬ ಸಂಶಯ ಚೊಚ್ಚಲ ಗರ್ಭಿಣಿಯರಲ್ಲಿ ಇರುತ್ತದೆ, ಇದರ ಬಗ್ಗೆ ಹಿರಿಯರಲ್ಲಿ ಕೇಳಲು ಒಂಥರಾ ಮುಜುಗರ, ಇನ್ನು ಸ್ನೇಹಿತೆಯರ ಬಳಿ ಕೆಲವರಷ್ಟೇ ಈ ಕುರಿತು ಚರ್ಚಿಸುತ್ತಾರೆ, ಮತ್ತೆ ಕೆಲವರಿಗೆ ಹಿಂಜರಿಕೆ. ಗರ್ಭಿಣಿಯಾದಾಗ ತಮ್ಮದೇ ಆದ ಖಾಸಗಿ ಕ್ಷಣವನ್ನು ಕಳೆಯಬಹುದೇ, ಇದರಿಂದ ಗರ್ಭದಲ್ಲಿರುವ ಮಗುವಿಗೆ ತೊಂದರೆಯಾಗಬಹುದೇ ಎಂಬ ಆತಂಕ ಇರುತ್ತದೆ.

ಕೆಲವರಿಗೆ ಸ್ತ್ರೀರೋಗ ತಜ್ಞರು ಮೊದಲ ತ್ರೈ ಮಾಸಿಕದಲ್ಲಿ ಗಂಡ-ಹೆಂಡತಿ ಸೇರಬೇಡಿ ಎಂಬ ಸಲಹೆ ಮಾಡುತ್ತಾರೆ. ಅವರ ಆರೋಗ್ಯ ಸ್ಥಿತಿಯ ಮೇಲೆ ವೈದ್ಯರು ಈ ರೀತಿಯ ಸಲಹೆ ನೀಡಿರುತ್ತಾರೆ. ಅಲ್ಲದೆ ಗರ್ಭಾವಸ್ಥೆಯಲ್ಲಿ ಮಿಲನಕ್ರಿಯೆಯಲ್ಲಿ ಮೊದಲಿನಂತೆ ನಡೆಸಲು ಕಷ್ಟವಾಗುವುದು. ಅಲ್ಲದೆ ಈ ಸಮಯದಲ್ಲಿ ಕೆಲವರಿಗೆ ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ಇನ್ನು ಕೆಲವರಿಗೆ ಲೈಂಗಿಕ ಆಸಕ್ತಿ ಹೆಚ್ಚುವುದು. ಆದರೆ ಈ ಸಮಯದಲ್ಲಿ ಲೈಂಗಿಕ ಕ್ರಿಯೆ ಎಷ್ಟು ಸುರಕ್ಷಿತ ಎಂಬ ಭಯ ಕೆಲವರಲ್ಲಿರುತ್ತದೆ.

ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ಇದರ ಬಗ್ಗೆ ಬಗ್ಗೆ ನಿಮ್ಮಲ್ಲಿ ಅನೇಕ ಪ್ರಶ್ನೆಗಳಿರುತ್ತದೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ: ಗರ್ಭಾವಸ್ಥೆಯಲ್ಲಿ ಸೆಕ್ಸ್ ಸುರಕ್ಷಿತವೇ ?

ಗರ್ಭಾವಸ್ಥೆಯಲ್ಲಿ ಸೆಕ್ಸ್ ಸುರಕ್ಷಿತವೇ ಎಂದು ಕೇಳುವುದಾದರೆ ಹೌದು. ಆದ್ರೆ ಅದಕ್ಕೆ ನಿಮ್ಮ ವೈದ್ಯರಿಂದ ಗ್ರೀನ್ ಸಿಗ್ನಲ್ ಸಿಗ್ಬೇಕು. ಕೆಲವರಿಗೆ ಕಮ್ ಕಾಂಪ್ಲಿಕೇಟ್ ಇರುತ್ತದೆ. ಅಂಥವರಿಗೆ ಈ ಸಮಯದಲ್ಲಿ ಸೆಕ್ಸ್ ಲೈಫ್ ಬೇಡ ಎಂದು ನಿಮ್ಮ ಡಾಕ್ಟರ್ ಸಲಹೆ ನೀಡಬಹುದು. ಈ ಹಿಂದೆ ಗರ್ಭಪಾತವಾಗಿದ್ದರೆ ಒಂದಕ್ಕಿಂತ ಹೆಚ್ಚು ಬಾರಿ ಗರ್ಭಪಾತವಾಗಿದ್ದರೆ ವೈದ್ಯರು ಮೊದಲ ಕೆಲ ತಿಂಗಳುಗಳು ನಿಮ್ಮ ಸಂಗಾತಿ ಜೊತೆ ಸೇರಬೇಡಿ ಎಂದು ಹೇಳಬಹುದು. ಆಮ್ನಿಯೋಟಿಕ್ ಚೀಲ (ಗರ್ಭ ಚೀಲ)ದಲ್ಲಿ ಮಗು ಸುರಕ್ಷಿತವಾಗಿದ್ದರೂ ಕೆಲವೊಮ್ಮೆ ಸಂಗಾತಿ ಏನಾದರೂ ಸೋಂಕು ಉಂಟಾಗಿದ್ದರೆ (chlamydia, gonorrhea, HIV) ಲೈಂಗಿಕ ಕ್ರಿಯೆ ನಡೆಸಿದಾಗ ಸೋಂಕು ಹರಡುವ ಸಾಧ್ಯತೆ ಇದೆ ಅಂತ ಅಪಾಯದ ಭಯ ಇದ್ದರೆ ನಿಮ್ಮ ವೈದ್ಯರ ಬಳಿ ಈ ಕುರಿತು ಕೇಳಿ. ಅಲ್ಲದೆ ಸೆಕ್ಸ್ ಟಾಯ್ಸ್ ಬಳಸುವುದಾದರೆ ಅವುಗಳನ್ನು ಸೋಪು ಹಚ್ಚಿ ತೊಳೆದು ಸ್ವಚ್ಛಗೊಳಿಸಿ ರಬೇಕು.

ಓರಲ್ ಸೆಕ್ಸ್ ಮಾಡಬಹುದೆ ?

ಗರ್ಭಿಣಿಯಾದಾಗ ಓರಲ್ ಸೆಕ್ಸ್ ನಿಮಗೂ ಮಗುವಿಗೂ ಅಪಾಯಕಾರಿಯಾಗಿದೆ. ಗರ್ಭಿಣಿಯ ಜನನೇಂದ್ರಿಯಗಳಿಗೆ ಗಾಳಿ ಊದುವುದರಿಂದ ಮಗುವಿಗೂ ತಾಯಿಗೂ ತೊಂದರೆ ಉಂಟಾಗುವುದು. ಇದರಿಂದ ಉಸಿರಾಟದ ತೊಂದರೆ, ಸ್ಟ್ರೋಕ್, ಹೃದಯಾಘಾತ ಮುಂತಾದ ಅಪಾಯ ಉಂಟಾಗುವ ಸಾಧ್ಯತೆ ಇದೆ. ಆದರೆ ಗರ್ಭಿಣಿಯರು ಓರಲ್ ಸೆಕ್ಸ್ ಮಾಡುವುದು ಅಪಾಯಕಾರಿಯಾಗಿದೆ.

ಆನಲ್ ಸೆಕ್ಸ್ ಮಾಡಬಹುದೆ ?

ಗರ್ಭಾವಸ್ಥೆಯಲ್ಲಿ ಆನಲ್ ಸೆಕ್ಸ್ ಅಂದರೆ ಗುದದ್ವಾರದ ಮೂಲಕ ಸೆಕ್ಸ್ ಸುರಕ್ಷಿತವಾಗಿದೆ. ಆದರೆ ಹೆಮೂರಾಯಿಡ್ಸ್ ಸಮಸ್ಯೆ ಇದ್ದರೆ ತೊಂದರೆ ಉಂಟಾಗುವುದು ಆನಲ್ ಮಾಡಿ ನಂತರ ಜನನೇಂದ್ರಿಯದಲ್ಲಿ ಮಾಡಬೇಡಿ, ಹಾನಿಕಾರಕ ಬ್ಯಾಕ್ಟೀರಿಯಾ ಇದ್ದರೆ ಮಗು ಹಾಗೂ ತಾಯಿಗೆ ಅಪಾಯ ಉಂಟಾಗುವುದು.

ಗರ್ಭಾವಸ್ಥೆಯಲ್ಲಿ ಇರುವಾಗ ಯಾವಾಗ ಸೆಕ್ಸ್ ಸುರಕ್ಷಿತವಲ್ಲ ?

ಕೆಲವೊಂದು ಪರಿಸ್ಥಿತಿಯಲ್ಲಿ ಸೆಕ್ಸ್ ಸುರಕ್ಷಿತವಲ್ಲ ಕೆಲವರಿಗೆ ಕೆಲವು ತಿಂಗಳವರೆಗೆ ಸೆಕ್ಸ್ ಮಾಡಬಾರದು ಎಂದು ನಿಮ್ಮ ಡಾಕ್ಟರ್ ತಿಳಿಸಿದರೆ ಇನ್ನೂ ಕೆಲವರಿಗೆ 9ತಿಂಗಳವರೆಗೆ ಸೆಕ್ಸ್ ಸುರಕ್ಷಿತವಲ್ಲ. ನಿಮ್ಮ ಆರೋಗ್ಯ ಸ್ಥಿತಿ ನೋಡಿ ವೈದ್ಯರು ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ ಈ ಸಮಸ್ಯೆ ಇರುವವರಿಗೆ ಗರ್ಭಿಣಿಯಾಗಿದ್ದಾಗ ಸೆಕ್ಸ್ ಸುರಕ್ಷಿತವಲ್ಲ. ಅವಧಿಪೂರ್ವ ಮಗು ಈ ಮೊದಲು ಜನಿಸಿದ್ದರೆ, ಗರ್ಭಕೋಶ ಅಥವಾ ಜರಾಯುವಿನಲ್ಲಿ ಏನಾದರೂ ಸಮಸ್ಯೆ ಇದ್ದರೆ, ರಕ್ತಸ್ರಾವ, ಕಿಬ್ಬೊಟ್ಟೆ ನೋವು ಈ ರೀತಿಯ ಸಮಸ್ಯೆ ಇದ್ದರೆ  ಹಾಗೂ ಅವಳಿ ಅಥವಾ ತ್ರಿವಳಿ ಮಕ್ಕಳಿದ್ದಾಗ ಗರ್ಭಿಣಿಯಾಗಿದ್ದಾಗ.

ಗರ್ಭಿಣಿಯಾಗಿದ್ದಾಗ ಸೆಕ್ಸ್ ಮಾಡಿದರೆ ಮಗುವಿಗೆ ನೋವಾಗುವುದೆ ?

    ಗರ್ಭಾವಸ್ಥೆಯಲ್ಲಿ ಸೆಕ್ಸ್ ಸುರಕ್ಷಿತವಾಗಿದೆ. ಅಲ್ಲದೆ ಸೆಕ್ಸ್ ಬಳಿಕ ಮಗು ಒದ್ದಂತೆ ಅನಿಸಿದರೆ ಅದು ನಿಮ್ಮಿಬ್ಬರ ಚಟುವಟಿಕೆಯಿಂದ ಅಲ್ಲ. ಸಾಮಾನ್ಯವಾಗಿ ಕಿಟ್ ಮಾಡುವಂತೆ ಮಾಡಿರುತ್ತದೆ ಆದ್ದರಿಂದ ಈ ಬಗ್ಗೆ ಆತಂಕ ಬೇಡ.

ಗರ್ಭಾವಸ್ಥೆಯಲ್ಲಿ ಸೆಕ್ಸ್ : ಇದರಿಂದ ದೊರೆಯುವ ಪ್ರಯೋಜನಗಳೇನು?

  • ಹಾಗೂ ಕಿರಿಕಿರಿ ಕಡಿಮೆ ಮಾಡುತ್ತದೆ.
  • ಒಳ್ಳೆಯ ನಿದ್ದೆ ಇಬ್ಬರ ನಡುವೆ ಆತ್ಮೀಯತೆ ಮತ್ತಷ್ಟು ಹೆಚ್ಚಿಸುವುದು.
  • ನಿಮ್ಮ ದೈಹಿಕ ಆರೋಗ್ಯಕ್ಕೆ ಒಳ್ಳೆಯದು.
  • ನೋವು ಬರುವುದು.
  • ನಿಮ್ಮ ಮೂಡ್ ಚೆನ್ನಾಗಿರುತ್ತದೆ.
  • ಸಹಜ ಹೆರಿಗೆಗೆ ಸಹಾಯ ಮಾಡುವುದಾಗಿ ತಜ್ಞರು ಹೇಳುತ್ತಾರೆ.
  • ಹೆರಿಗೆಯ ಬಳಿಕ ಬೇಗನೆ ಚೇತರಿಸಿಕೊಳ್ಳಲು ಸಹಕಾರಿ.

 ಗರ್ಭಾವಸ್ಥೆಯಲ್ಲಿ ಯಾವ ಸೆಕ್ಸ್ ಭಂಗಿ ಒಳ್ಳೆಯದು ?

  • ಒಂದು ಬದಿಯಲ್ಲಿ ತಿರುಗಿ ಮಲಗಿ ಮಾಡುವ ಭಂಗಿ.
  • ಗರ್ಭಿಣಿ ಟಾಪ್ ನಲ್ಲಿರುವ ಭಂಗಿ.
  • ಪರಸ್ಪರ ಹಸ್ತ ಮೈಥುನ.
  • ಆನಲ್ ಸೆಕ್ಸ್ .
ಹಿಂದಿನ ಲೇಖನಮೈಸೂರು ಜಿಲ್ಲೆಯಲ್ಲಿ ಗರಿಷ್ಟ ಮಟ್ಟ ದಾಟಿರುವ ಕೊರೊನಾ: ಡಿಸಿ
ಮುಂದಿನ ಲೇಖನಶಾಲಾ ಮುಖ್ಯ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ