ಮನೆ ಅಪರಾಧ ಜೆಎನ್ ಯು ಕ್ಯಾಂಪಸ್ ನಲ್ಲಿ ಪಿಹೆಚ್ ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಜೆಎನ್ ಯು ಕ್ಯಾಂಪಸ್ ನಲ್ಲಿ ಪಿಹೆಚ್ ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

0

ನವದೆಹಲಿ: ಜೆಎನ್ ಯು ಕ್ಯಾಂಪಸ್ ನಲ್ಲಿ ಪಿಹೆಚ್ ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ 27 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅಕ್ಷಯ್ ಡೊಲೈ ಕುಡಿದ ಮತ್ತಿನಲ್ಲಿದ್ದ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಮೂಲದ ಡೊಲೈ ಪತ್ನಿ ಹಾಗೂ ಮಕ್ಕಳೊಂದಿಗೆ ದಕ್ಷಿಣ ದೆಹಲಿಯ ಮುನಿಕ್ರಾದಲ್ಲಿದ್ದ ಹಾಗೂ ಬಿಕಜಿ ಕಾಮಾ ಸ್ಥಳದಲ್ಲಿ ಮೊಬೈಲ್ ರಿಪೇರಿ ಅಂಗಡಿ ನಡೆಸುತ್ತಿದ್ದ.

ಜೆಎನ್ ಯು ಕ್ಯಾಂಪಸ್ ನ ಸುತ್ತಮುತ್ತಲಿರುವ ಸಾವಿರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ವಿಶ್ಲೇಷಣೆ ಮಾಡಿದ ನಂತರ ಆರೋಪಿಯನ್ನು ಗುರುತಿಸಲಾಗಿದ್ದು, ತನ್ನ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಆರೋಪಿಯನ್ನು ಬಂಧಿಸಲಾಗಿದೆ.

ಘಟನೆ ವಿವರ: ಜ.17 ರಂದು ಆರೋಪಿ ತನ್ನ ಪತ್ನಿಯೊಂದಿಗೆ ಜಗಳವಾಡಿಕೊಂಡಿದ್ದ ಈ ಘಟನೆ ನಡೆದ ಬಳಿಕ ಆತನ ಪತ್ನಿ ತವರುಮನೆಗೆ ಹೋಗಿದ್ದರು. ಇದರಿಂದ ಬೇಸರಗೊಂಡ ಡೊಲೈ ಮದ್ಯಸೇವನೆ ಮಾಡಿ ಜೆಎನ್ ಯು ಕ್ಯಾಂಪಸ್ ಬಳಿ ತೆರಳಿದ್ದ, ಈ ವೇಳೆ ಮೂವರು ಮಹಿಳೆಯರು ಕ್ಯಾಂಪಸ್ ಒಳಗೆ ತೆರಳುತ್ತಿದ್ದರು. ಆ ಮೂವರನ್ನೂ ಕೆಟ್ಟ ದೃಷ್ಟಿಯಿಂದ ಹಿಂಬಾಲಿಸಿದ್ದ.

ಆ ಮಹಿಳೆಯರು ಹಾಸ್ಟೆಲ್ ಗಳಿಗೆ ತೆರಳಿದ್ದಾರೆ. ಇದಾದ ಬಳಿಕ ಪಿಹೆಚ್ ಡಿ ವಿದ್ಯಾರ್ಥಿನಿಯೋರ್ವಳು ಕ್ಯಾಂಪಸ್ ಒಳಗೆ ಜಾಗಿಂಗ್ ಮಾಡುತ್ತಿದ್ದನ್ನು ಆತ ಗಮನಿಸಿದ್ದಾನೆ. ಆಕೆ ನಿರ್ಜನ ಪ್ರದೇಶಕ್ಕೆ ತೆರಳುತ್ತಿದ್ದಂತೆಯೇ ಡೊಲೈ ಆಕೆಯನ್ನು ತಡೆದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆಕೆ ಪ್ರತಿಭಟಿಸಿದ್ದು, ಈ ವೇಳೆ ಆರೋಪಿಯ ಕಾಲಿಗೆ ಗಾಯಗಳಾಗಿವೆ. ತಕ್ಷಣವೇ ಫೋನ್ ತೆಗೆದುಕೊಂಡ ವಿದ್ಯಾರ್ಥಿನಿ ಪೊಲೀಸ್ ಗೆ ಕರೆ ಮಾಡುವುದಾಗಿ ಬೆದರಿಸಿದ್ದಾಳೆ. ಆಕೆಯಿಂದ ಫೋನ್ ಕಸಿದುಕೊಂಡ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಈ ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಹಿಂದಿನ ಲೇಖನಸಚಿವ ಸಂಪುಟ ವಿಸ್ತರಣೆ ವರಿಷ್ಠರ ತೀರ್ಮಾನ: ಸಿಎಂ ಬೊಮ್ಮಾಯಿ
ಮುಂದಿನ ಲೇಖನನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಶವವಾಗಿ ಪತ್ತೆ