ಬೆಂಗಳೂರು: ಶಾಲೆಗೆ ತೆರಳುತ್ತಿದ್ದ 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ವಿವೇಕನಗರ ಠಾಣಾ ವ್ಯಾಪ್ತಿಯ ಈಜಿಪುರದ ಮುಖ್ಯರಸ್ತೆಯಲ್ಲಿ ನಡೆದಿದ್ದು, ಆರೋಪಿ ಯುವಕನನ್ನು ಬಂಧಿಸಲಾಗಿದೆ.
ಫೆಬ್ರವರಿ 9ರಂದು ಬೆಳಿಗ್ಗೆ ಘಟನೆ ನಡೆದಿದ್ದು, 20 ವರ್ಷ ವಯಸ್ಸಿನ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ತನ್ನ ಕುಟುಂಬದೊಂದಿಗೆ ವಿವೇಕನಗರ ವ್ಯಾಪ್ತಿಯಲ್ಲಿ ವಾಸವಿದ್ದ ಬಾಲಕಿ ಫೆಬ್ರವರಿ 9ರಂದು ಬೆಳಗ್ಗೆ 8.15ರ ಸುಮಾರಿಗೆ ಶಾಲೆಗೆ ತೆರಳುತ್ತಿದ್ದಳು. ಈ ವೇಳೆ ಬೈಕ್ ಮೆಕ್ಯಾನಿಕ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯು ಬಾಲಕಿಯನ್ನು ಮೆಕ್ಯಾನಿಕ್ ಶಾಪ್ ಒಳಗೆ ಕರೆದೊಯ್ದು ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅಳುತ್ತಾ ಓಡಿ ಬಂದ ಬಾಲಕಿ ನಡೆದ ಘಟನೆ ಬಗ್ಗೆ ತಾಯಿಯ ಮುಂದೆ ವಿವರಿಸಿದ್ದಾಳೆ.
ಬಾಲಕಿಯ ಮಾಹಿತಿ ಮೇರೆಗೆ ಆಕೆಯ ತಾಯಿ ವಿವೇಕನಗರ ಠಾಣೆಗೆ ದೂರು ನೀಡಿದ್ದಾರೆ. ದೂರನ್ನು ಆಧರಿಸಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ವಿವೇಕನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.














