ಮನೆ ಅಪರಾಧ ಹಳಿ ಮೇಲೆ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದ ಶತಾಬ್ದಿ ಎಕ್ಸ್​ಪ್ರೆಸ್: ಓರ್ವ ಸಾವು

ಹಳಿ ಮೇಲೆ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದ ಶತಾಬ್ದಿ ಎಕ್ಸ್​ಪ್ರೆಸ್: ಓರ್ವ ಸಾವು

0

ಕೋಲಾರ: ಕೋಲಾರದ ರೈಲು ನಿಲ್ದಾಣದಲ್ಲಿ ಭಾರೀ ದುರಂತ ಸಂಭವಿಸಿದ್ದು, ರೈಲಿಗೆ ಸಿಲುಕಿ ಓರ್ವ ಪ್ರಯಾಣಿಕ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.

ಪ್ರಯಾಣಿಕರ ಮೇಲೆ ಎಕ್ಸ್​ಪ್ರೆಸ್​ ರೈಲು ಹರಿದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದಾರೆ.  ಕೋಲಾರದ ಮಾಲೂರು ತಾಲೂಕಿನ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಎರಡೂ ಬದಿ ಪ್ಯಾಸೆಂಜರ್​​ ರೈಲು ನಿಂತಿದ್ದು, ಮಾರಿಕುಪ್ಪಂ-ಎಸ್ ಬಿಎಸ್ ಮತ್ತು ಕುಪ್ಪಂ ಮತ್ತು ಎಸ್ ಬಿಸಿ ರೈಲುಗಳು ಆಗಮಿಸಿತ್ತು.

ವಿದ್ಯುತ್ ಕಡಿತದಿಂದಾಗಿ ರೈಲುಗಳು ಮಾರ್ಗ ಮಧ್ಯೆ ನಿಂತಿದ್ದವು. ಅದೇ ಸಂದರ್ಭದಲ್ಲಿ ಎಕ್ಸ್‌ಪ್ರೆಸ್ ರೈಲಿಗೆ ರೈಲ್ವೆ ಅಧಿಕಾರಿಗಳು ಸಿಗ್ನಲ್ ನೀಡಿದ್ದು, ರೈಲು ಇಳಿದು ಹಳಿ ಮೇಲೆ ಪ್ರಯಾಣಿಕರು ನಿಂತಿದ್ದರು.  

ಈ ವೇಳೆ ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ವೇಗವಾಗಿ ನುಗ್ಗಿ ಬಂದಿದ್ದು, ಪ್ರಯಾಣಿಕರು ಬಚಾವ್​ ಆಗಲು ಯತ್ನಿಸುವ ವೇಳೆಗೆ ಡಿಕ್ಕಿ ಹೊಡೆದಿದೆ. ಲೋಕೋ ಪೈಲಟ್ ಸತತವಾಗಿ ಹಾರ್ನ್ ಮಾಡುತ್ತಿದ್ದರೂ ಕೂಡ ಜನ ಹಳಿ ಮೇಲೆ ನಿಂತಿದ್ದರು. ಹೀಗಾಗಿ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ಟೇಕಲ್ ಹೊರಠಾಣೆ, ಬಂಗಾರಪೇಟೆ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಹಿಂದಿನ ಲೇಖನಟಿಬೆಟನ್ನರು ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ
ಮುಂದಿನ ಲೇಖನಮಾ.14 ರಂದು ವೀರಪ್ಪ ಮೊಯಿಲಿ ಅವರ ಆತ್ಮಕಥನ ಬಿಡುಗಡೆ