ಮನೆ ಅಪರಾಧ ಶಿವಮೊಗ್ಗ: ಜಮೀನು ವಿವಾದದ ಗಲಾಟೆಯು ಕೊಲೆಯಲ್ಲಿ ಅಂತ್ಯ

ಶಿವಮೊಗ್ಗ: ಜಮೀನು ವಿವಾದದ ಗಲಾಟೆಯು ಕೊಲೆಯಲ್ಲಿ ಅಂತ್ಯ

0

ಶಿವಮೊಗ್ಗ: ಜಮೀನು ವಿವಾದದ ಗಲಾಟೆಯು ಕೊಲೆಯಲ್ಲಿ ಅಂತ್ಯವಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.  ತಾಲೂಕಿನ ದುಮ್ಮಳ್ಳಿಯಲ್ಲಿ ಸೋಮವಾರ ಹಾಡಹಗಲೇ ರಕ್ತ ಹರಿದಿದೆ.

Join Our Whatsapp Group

ಸತೀಶ್ ನಾಯ್ಕ (28 ವ) ಕೊಲೆಯಾದ ದುರ್ದೈವಿ. ದೂರದ ಸಂಬಂಧಿ ಅಖಿಲೇಶ್ (27) ಸೇರಿದಂತೆ ಹಲವರ ಗುಂಪಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ.

ಕೊಲೆ ನಡೆದ ಜಮೀನು ಕಳೆದ ಹಲವಾರು ವರ್ಷಗಳಿಂದ ವಿವಾದದಲ್ಲಿತ್ತು. ನ್ಯಾಯಾಲಯವು ಈ ಜಮೀ‌ನಿನೊಳಗೆ ಯಾರೂ ಕೂಡ ತೆರಳದಂತೆ ಇಂಜಕ್ಷನ್ ಆದೇಶ ನೀಡಿತ್ತು.

ಇಂದು (ಮೇ 13) ಬೆಳಿಗ್ಗೆ ಸತೀಶ್ ನಾಯ್ಕ ಜಮೀನಿಗೆ ತೆರಳಿದ್ದರು. ಈ ವೇಳೆ ಅಖಿಲೇಶ್ ಗುಂಪಿನೊಂದಿಗೆ ಮಾತಿಗೆ ಮಾತು ಬೆಳೆದಿದೆ. ಸ್ಥಳದಲ್ಲಿದ್ದ ಕುಡುಗೋಲಿನಿಂದ ಮತ್ತು ಕೈಗಳಿಂದ ಗುಂಪು ಹಲ್ಲೆ ಮಾಡಿದೆ. ಪರಿಣಾಮ ಸತೀಶ್ ನಾಯ್ಕ ಕೊಲೆಯಾಗಿದೆ.

ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಆಟೋಗೆ ಕ್ಯಾಂಟರ್ ಡಿಕ್ಕಿ: ವಿದ್ಯಾರ್ಥಿನಿ ಸಾವು
ಮುಂದಿನ ಲೇಖನಬೆಂಗಳೂರು: ದೂರಸಂಪರ್ಕ ಇಲಾಖೆಯ ಅಧಿಕಾರಿಗಳೆಂದು ಹೇಳಿಕೊಂಡು ಮಹಿಳೆಗೆ 30 ಲಕ್ಷ ವಂಚನೆ