ಮನೆ ಅಪರಾಧ ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ

0

ಶಿವಮೊಗ್ಗ: ಹಾಡಹಗಲೇ ಇಬ್ಬರು ರೌಡಿಶೀಟರ್ ಗಳನ್ನು ನಡುರಸ್ತೆಯಲ್ಲಿ ಹತ್ಯೆಗೈದ ಭಯಾನಕ ಘಟನೆ ಶಿವಮೊಗ್ಗದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಬುಧವಾರ ನಡೆದಿದೆ.

Join Our Whatsapp Group

ಹತ್ಯೆಯಾದವರನ್ನು ತುಂಗಾನಗರದ ಸೊಹೈಲ್ (35) ಮತ್ತು ದೊಡ್ಡಪೇಟೆ ಮೊಹಮ್ಮದ್ ಗೌಸ್(30) ಎಂದು ಹೇಳಲಾಗಿದೆ.

ರೌಡಿ ಶೀಟರ್ ಯಾಸೀನ್ ಕುರೇಶಿ ಮೇಲೆ ದಾಳಿ ಮಾಡಲು ಬಂದ ತಂಡ ಯಾಸೀನ್ ಗೆ ಚಾಕುವಿನಿಂದ ಇರಿದಿದೆ ಇದಕ್ಕೆ ಪ್ರತಿದಾಳಿ ಮಾಡಿರುವ ಯಾಸೀನ್ ಕುರೇಶಿ ಗ್ಯಾಂಗ್ ದಾಳಿಗೆ ಬಂದಿದ್ದ ಇಬ್ಬರು ರೌಡಿಶೀಟರ್ ಗಾಲ ಮೇಲೆ ಮನಬಂದಂತೆ ದಾಳಿ ನಡೆಸಿದ್ದಾರೆ ಅಲ್ಲದೆ ಬ್ಯಾಟ್, ಲಾಂಗು, ಮಚ್ಚುಗಳಿಂದ ಕೊಚ್ಚಿ ಬಳಿಕ ತಲೆಯ ಮೇಲೆ ಚಪ್ಪಡಿ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಗಂಭೀರ ಗಾಯಗೊಂಡಿರುವ ಯಾಸೀನ್ ಕುರೇಶಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಪೊಲೀಸ್ ಬೀಗಿ ಬಂದೋಬಸ್ತ್ ಏರ್ಪಡಿಸಲಾಗಿದೆ

ಹಿಂದಿನ ಲೇಖನಪೆನ್ ಡ್ರೈವ್ ಪ್ರಕರಣವನ್ನು ಸರ್ಕಾರ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
ಮುಂದಿನ ಲೇಖನನಿಮ್ಮ ಎಸ್ ಐಟಿ ಅಧಿಕಾರಿಗಳಿಗೆ ಕ್ರೆಡಿಬಲಿಟಿ ಎನ್ನುವುದು ಇದೆಯಾ?: ಹೆಚ್.ಡಿ.ಕುಮಾರಸ್ವಾಮಿ