ನಾಲಿಗೆಯನ್ನು ಹೊರಚಾಚಿ U ಆಕಾರದಲ್ಲಿ ಮಡಿಸಿ, ದೀರ್ಘವಾಗಿ ಉಸಿರೆಳೆದುಕೊಂಡು, ಬಾಯಿ ಮುಚ್ಚಿ ಮೂಗಿನಿಂದ ಹೊರಬೀಡಬೇಕು. ಹೆಸರು ಹೇಳುವಂತೆ ಇದು ಉಷ್ಣತೆ ಅಥವಾ ತಾಪ (ಹೀಟ್) ಆದಾಗ ಮತ್ತು ಬಿ.ಪಿ. (B.P) ಕಡಿಮೆಯಾಗಲು ಸಹಾಯಕ ಅಂತಹ ಸಮಯದಲ್ಲಿ ಇದು ಹೆಚ್ಚು ಬೇಡ 10-15 ಸಲ ಮಾಡಿದರೆ ಸಾಕು.
ಶೀತ್ಕಾರಿ ಪ್ರಾಣಯಾಮ :-
ನಾಲಿಗೆಯನ್ನು ಮೇಲ್ಭಾಗಕ್ಕೆ ಮಡಚಿಕೊಂಡು ತುದಿಯನ್ನು ಅಂಗಳಕ್ಕೆ ಸ್ಪರ್ಶಿಸಿ ಮೇಲಿನ ಮತ್ತು ಕೆಳಗಿನ ಎರಡು ದಂತ ಪಂತಿಗಳನ್ನು ಒಟ್ಟಾಗಿ ಸೇರಿಸಿಕೊಂಡು ತುಟಿಗಳನ್ನು ತೆರೆದಿಟ್ಟುಕೊoಡು, “ಸ್..ಸ್..” ಶಬ್ದ ಹೊರಡಿಸುತ್ತಾ, ನಿಧಾನವಾಗಿ ಶ್ವಾಸವನ್ನು ಪೂರ್ಣವಾಗಿ ಒಳಗೆಳೆದುಕೊಳ್ಳಬೇಕು. ಮತ್ತು ಜರಂದರಬಂಧ ಮಾಡಿ ಸಾಧ್ಯವಿದ್ದಷ್ಟು ಹೊತ್ತು ಅದೇ ಸ್ಥಿತಿಯಲ್ಲಿದ್ದು ಬಾಯಿ ಮುಚ್ಚಿಕೊಂಡು, ನಂತರ ಮೂಗಿನಿಂದ ರೇಚಕ ಮಾಡುತ್ತ ಪೂರ್ತಿ ಉಸಿರನ್ನು ಹೊರ ಬಿಡಬೇಕು. ಹತ್ತರಿಂದ ಹದಿನೈದು ಆವೃತ್ತಿ ಮಾಡಬಹುದು. ಇದು ಕೂಡ ಶೀತಲಿ ಪ್ರಾಣಾಯಾಮದಂತೆಯೇ ಪ್ರಯೋಜನಕಾರಿ ಜೊತೆಗೆ ದಂತಕ್ಷಯ, ಪಯೋರಿಯ, ಗಂಟಲು, ನಾಲಿಗೆ, ಬಾಯಿಗೆ ಸಂಬಂಧಿಸಿದ ಎಲ್ಲಾ ತೊಂದರೆಗಳಿಗೂ ಪ್ರಯೋಜನಕಾರಿ.
ಸೂರ್ಯಬೇಧನ ಪ್ರಾಣಯಾಮ :-
ʼಬಿದ್ʼ ಧಾತುವಿನ ಮೂಲ ಭೇದನ. ಅಂದರೆ, ನುಗ್ಗಿಕೊಂಡು ಹೋಗುವುದು. ಸೂರ್ಯಭೇದನ ಅಂದರೆ ಸೂರ್ಯಶಕ್ತಿಯಲ್ಲಿ ನುಗ್ಗುವುದು. ಇಲ್ಲಿ ಪೂರಕವನ್ನು ಬಲಹೊಳೆಯಲ್ಲಿ ರೇಚಕವನ್ನು ಎಡಹೊಳೆಯಲ್ಲಿ ಮಾಡಲಾಗುತ್ತದೆ. ಅಂದರೆ ಪ್ರಾಣ ಚೈತನ್ಯವು ಬಲಹೊಳೆಯ ಮೂಲಕ ಅರ್ಥ ತಿಂಗಳ ಅಥವಾ ಸೂರ್ಯ ನಾಡಿಯ ಮೂಲಕ ರಚಕವನ್ನು ಮಾಡುವಾಗ ಅಥವಾ ಚಂದ್ರನಾಡಿಯ ಮೂಲಕ ಪ್ರವೇಶಿಸುತ್ತದೆ.
ಪ್ರಯೋಜನಗಳು :-
ಇದು ದೇಹದಲ್ಲಿ ಶಾಖ ಹೆಚ್ಚಿಸಿ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ನರಗಳ ಚೈತನ್ಯ ವೃದ್ಧಿಸಿ ಶುದ್ಧೀಕರಣ ಮಾಡುತ್ತದೆ. ಇದು ವಿಶೇಷವಾಗಿ ಕಡಿಮೆ ರಕ್ತದೊತ್ತಡ ಲೋ ಬಿ.ಪಿ. ಇರುವವರಿಗೆ ಪ್ರಯೋಜನಕಾರಿಯಾಗಿದೆ. ಮತ್ತು ಕಫದೋಷ ಕೂಡ ನಿವಾರಣೆ ಆಗುತ್ತದೆ.
ಚಂದ್ರಭೇದನ ಪ್ರಾಣಾಯಾಮ :-
ಇದು ಸೂರ್ಯಬೇಧನಾದ ವಿರುದ್ಧ ಕ್ರಿಯೆಯಲ್ಲಿ ಪೂರಕವನ್ನು ಎಡ ಹೊಳೆಯಿಂದ, ರೇಚಕವನ್ನು ಬಲ ಹೊಳೆಯನ್ನು ಮಾಡಲಾಗುತ್ತದೆ. ಅಂದರೆ ಪ್ರಾಣ ಚೈತನ್ಯವೂ ʼಇಡಾʼ ನಾಡಿಯ ಮೂಲಕ ಪೂರಕ ಒಳ ಪ್ರವೇಶ ಮಾಡಿ ತಿಂಗಳ ನಾಡಿಯ ಮೂಲಕ ರೇಚಕ ಅರ್ಥತ್ ಹೊರಬರುತ್ತದೆ.
ಪ್ರಯೋಜನಗಳು :-
ಈ ದೇಹವನ್ನು ಶಾಂತಗೊಳಿಸುತ್ತದೆ ಅರ್ಥತ್ ಶೀತ ಮತ್ತು ತಂಪು ಮಾಡುತ್ತದೆ. ಆಯಾಸ ನಿವಾರಣೆಯಾಗುವುದು.
ಸೂರ್ಯನುಲೋಮಾ ಮತ್ತು ಚಂದ್ರಾನುಲೋಮ ಪ್ರಾಣಯಾಮಗಳು :-
ಇವು ಕೂಡ ಸೂರ್ಯಭೇಧನ, ಚಂದ್ರಬೇದನ ಪ್ರಾಣಾಯಾಮಗಳಂತೆಯೇ ವ್ಯತ್ಯಾಸವಿಷ್ಟೇ, ಅನುಲೋಮಾ ಅಂದರೆ ನಡುನಡುವೆ ಬಿಟ್ಟು ಬಿಟ್ಟು ಮಾಡುವುದು ಮತ್ತು ಪ್ರಯೋಜನಗಳು ಕೂಡ ಅವುಗಳಂತೆಯೇ.
ಮೂರ್ಛಾ ಮತ್ತು ಪ್ಲಾವಿನೀ ಪ್ರಾಣಯಾಮ :-
ಮೂರ್ಛಾ ಎಂದರೆ ಜ್ಞಾನ ತಪ್ಪುವುದು. (ಅಂತರ ಕುಂಭಕವನ್ನು ಜ್ಞಾನತಪ್ಪಿದಂತೆ ಆಗುವವರಿಗೆ ಮಾಡುವುದು) ಫ್ಲಾವಾ ಎಂದರೆ , ಈಜುವುದು ಅಥವಾ ತೇಲುವುದು (ನೀರಿನ ಮೇಲೆ ಈಜಲು ಸಹಾಯಕ) ವೆಂದು ಹೇಳಲಾಗಿದ್ದು, ಈ ಎರಡು ಪ್ರಾಣಾಯಾಮಗಳು ಆಗ ಅಭ್ಯಾಸದಲ್ಲಿಲ್ಲವೆಂದು ಹೇಳಲಾಗಿದೆ.