ಮನೆ ರಾಜ್ಯ ಪ್ರವೀಣ್‌ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶೋಭಾ ಕರಂದ್ಲಾಜೆ

ಪ್ರವೀಣ್‌ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶೋಭಾ ಕರಂದ್ಲಾಜೆ

0

ಸುಳ್ಯ (sulya): ಪ್ರವೀಣ್ ನೆಟ್ಟಾರು ಅವರ ಮನೆಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ವೇಳೆ ಪ್ರವೀಣ್‌ ಕುಟುಂಬಸ್ಥರು ನಮಗೆ ನ್ಯಾಯ ಕೊಡಿಸುವಂತೆ ಕಣ್ಣೀರು ಹಾಕಿದರು. ಈ ವೇಳೆ ಕುಟುಂಬಸ್ಥರನ್ನು ಸಮಾಧಾನ ಪಡಿಸಿ ಧೈರ್ಯ ತುಂಬಿದ ಶೋಭಾ ಕರಂದ್ಲಾಜೆ ಅವರು ಈ ಸಾವಿಗೆ ಖಂಡಿತಾ ನ್ಯಾಯ ದೊರಕಿಸುತ್ತೇವೆ ಭರವಸೆ ನೀಡಿದರು.

ಬಳಿಕ ಒಂದು ತಿಂಗಳ ಸಂಬಳದ ಚೆಕ್ ಮತ್ತು 5 ಲಕ್ಷ ರೂ. ನಗದನ್ನು ಪ್ರವೀಣ್‌ ಕುಟುಂಬಸ್ಥರಿಗೆ ಪರಿಹಾರವಾಗಿ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರವೀಣ್ ನೆಟ್ಟಾರು ಸಾವು ನಮಗೆಲ್ಲರಿಗೂ ದುಃಖ ತಂದಿದೆ. ಯಾರಿಗೇ ಸಮಸ್ಯೆ ಆದರೂ ಆತ ಸ್ಪಂದಿಸುತ್ತಿದ್ದ. ಎಲ್ಲರ ಜೊತೆ ಪ್ರೀತಿಯಿಂದ ಬದುಕುತ್ತಿದ್ದ ವ್ಯಕ್ತಿ ಇಂದು ನಮ್ಮೊಂದಿಗೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರವೀಣ್‌ ಹತ್ಯೆಯಾದಾಗ ನಾನು ದೆಹಲಿಯಲ್ಲಿ ಇದ್ದೆ. ತನಿಖೆಯನ್ನು ಎನ್ಐಎಗೆ ವಹಿಸಲು ಕ್ರಮ ಕೈಗೊಂಡಿದ್ದೇವೆ. ಪ್ರಕರಣದ ನಿಜವಾದ ಆರೋಪಿಗಳು ಸಿಗುತ್ತಾರೆ. ಅವರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.