ಚೆನ್ನೈ (Chennai): ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಶೂಟಿಂಗ್ ಸದ್ದಿಲ್ಲದೇ ಶುರುವಾಗಿದೆ. ಹೊಸ ಪೋಸ್ಟರ್ ಸಮೇತ ಈ ವಿಚಾರವನ್ನು ಸನ್ ಪಿಕ್ಚರ್ಸ್ ಸಂಸ್ಥೆ ಘೋಷಿಸಿದೆ.
ಚೆನ್ನೈನಲ್ಲಿ ಅದ್ಧೂರಿ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ಶುರು ಮಾಡಲಾಗಿದೆ. ಚೆನ್ನೈನ ಚಿತ್ರೀಕರಣ ಮುಗಿದ ಬಳಿಕ ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆಸೋಕೆ ಸಿದ್ಧತೆ ನಡೆದಿದೆ. ನೆಲ್ಸನ್ ನಿರ್ದೇಶನದ ‘ಬೀಸ್ಟ್’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಆದರೂ ತಲೈವಾ ಸಿನಿಮಾ ನಿರ್ದೇಶನದ ಅವಕಾಶ ಕೊಟ್ಟಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಭರ್ಜರಿ ಫೋಟೋಶೂಟ್ ಮಾಡಿ ಪೋಸ್ಟರ್ ರಿಲೀಸ್ ಮಾಡಿದೆ ಟೀಂ.
ಸಾಲ್ಟ್ ಅಂಡ್ ಪೆಪ್ಪರ್ ಹೇರ್ ಸ್ಟೈಲ್, ಕಣ್ಣಿಗೆ ಸ್ಮಾರ್ಟ್ ಗ್ಲಾಸ್ ಹಾಗೂ ಕುತ್ತಿಗೆಯಲ್ಲಿ ಸ್ಟೈಲಿಶ್ ಚೈನ್ ಧರಿಸಿ ‘ಜೈಲರ್’ ರಜನಿಕಾಂತ್ ದರ್ಶನ ಕೊಟ್ಟಿದ್ದಾರೆ. ಪೋಸ್ಟರ್ ನೋಡ್ತಿದ್ರೆ ಚಿತ್ರದಲ್ಲಿ ಸೂಪರ್ ಸ್ಟಾರ್ ಇಂಟೆಲಿಜೆಂಟ್ ಕ್ಯಾರೆಕ್ಟರ್ ಪ್ಲೇ ಮಾಡುತ್ತಿರುವುದು ಗೊತ್ತಾಗುತ್ತಿದೆ. ತಲೈವಾ ಇನ್‌ಟೆನ್ಸ್ ಲುಕ್ ಪೋಸ್ಟರ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದ್ದು, ಸದ್ಯ ಪೋಸ್ಟರ್ ಅಭಿಮಾನಿಗಳ ಫೋನ್ ವಾಲ್‌ಪೇಪರ್, ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ರಾರಾಜಿಸುತ್ತಿದೆ.
ಬಿಗ್ ಬಜೆಟ್ ಸಿನಿಮಾಗಳನ್ನು ರಿಲೀಸ್ ಮಾಡೋಕೆ ಒಳ್ಳೆ ವೀಕೆಂಡ್ ಬೇಕು. ಪ್ರತಿವರ್ಷ ಏಪ್ರಿಲ್ 14ಕ್ಕೆ ತಮಿಳು ಪುತ್ತಾಂಡು(ತಮಿಳರ ಹೊಸ ವರ್ಷ) ಸಂಭ್ರಮದಲ್ಲಿ ತಮಿಳಿನ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತವೆ. ‘ಜೈಲರ್’ ಚಿತ್ರವನ್ನು ಕೂಡ ಮುಂದಿನ ವರ್ಷ ಏಪ್ರಿಲ್ 14ಕ್ಕೆ ತೆರೆಗೆ ತರುವ ಪ್ರಯತ್ನ ನಡೀತಿದೆ.
ಜೈಲರ್ ಚಿತ್ರದಲ್ಲಿ ರಜನಿಕಾಂತ್ ಗೆ ಐಶ್ವರ್ಯ ರೈ ಜೋಡಿಯಾಗಿ ನಟಿಸಲಿದ್ದಾರೆ. ರಮ್ಯಾ ಕೃಷ್ಣ, ಯೋಗಿಬಾಬು, ಪ್ರಿಯಾಂಕಾ ಅರುಣ್ ಮೋಹನ್ ಸೇರಿದಂತೆ ಪ್ರತಿಭಾನ್ವಿತ ಕಲಾವಿದರು ತಾರಾಗಣದಲ್ಲಿದ್ದಾರೆ. ಸ್ಯಾಂಡಲ್‌ವುಡ್ ನಟ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸ್ತಿರೋದು ಬಹಳ ಕುತೂಹಲ ಮೂಡಿಸಿದೆ. ಈ ಹೈವೋಲ್ಟೇಜ್ ಆಕ್ಷನ್ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಖಡಕ್ ಟೈಟಲ್‌ನಿಂದಲೇ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಛಾಯಾಗ್ರಾಹಕ ವಿಜಯ್ ಕಾರ್ತಿಕ್ ಕಣ್ಣನ್ ಬಹಳ ರೋಚಕವಾಗಿ ಚಿತ್ರವನ್ನು ಸೆರೆಹಿಡಿಯಲಿದ್ದಾರೆ.














