ಬೆಂಗಳೂರು: ದಾವಣಗೆರೆ ನಗರದಲ್ಲಿ ನಡೆದಿದ್ದ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ‘ದೇಶ ವಿಭಜನೆಯ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ ಕೊಲ್ಲಬೇಕು’ ಎಂಬ ಕೆ ಎಸ್.ಈಶ್ವರಪ್ಪ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದರು.
ಇದೀಗ ಪೇಟೆಯಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ‘ ಈಶ್ವರಪ್ಪಗೆ ಪ್ರತ್ಯೇಕ ಕಾನೂನು ಮಾಡಲು ಹೇಳಿ, ಈ ಕಾನೂನು ಮೀರಿ ಯಾರು ಕೂಡ ವರ್ತಿಸಬಾರದು ಎಂದು ಕಿಡಿಕಾರಿದ್ದಾರೆ.
ಇನ್ನು ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ಐಆರ್ ವಿಚಾರ ‘ಕೋಮುಸೌಹಾರ್ದತೆ ಕದಡುವವರನ್ನು ನೋಡಿ ಸುಮ್ಮನೆ ಕೂರಲ್ಲ. ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಚಕ್ರವರ್ತಿ ಸೂಲಿಬೆಲೆ ಅಷ್ಟೇ ಅಲ್ಲ, ಯಾರೇ ಈ ರೀತಿ ಹೇಳಿಕೆ ಕೊಟ್ಟರೂ , ಅಂಥವರ ವಿರುದ್ಧ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.














