ಮನೆ ಜ್ಯೋತಿಷ್ಯ ಶ್ರವಣ

ಶ್ರವಣ

0

ಕ್ಷೇತ್ರ – ಮಕರ ರಾಶಿಯಲ್ಲಿ 9 ಡಿಗ್ರಿ 10 ಕಲೆಯಿಂದ 23 ಡಿಗ್ರಿ, 20 ಕಲೆ, ರಾಶಿಸ್ವಾಮಿ – ಶನಿ, ನಕ್ಷತ್ರಸ್ವಾಮಿ – ಚಂದ್ರ, ಗಣ – ದೇವ, ಯೋನಿ – ವಾನರ, ನಾಡಿ – ಅಂತ್ಯ, ನಾಮಾಕ್ಷರ – ಖೀ, ಖೂ, ಖೆ, ಖೊ. ಶರೀರಭಾಗ – ಮೊಣಕಾಲ ಕೆಳಭಾಗ, ಚರ್ಮ, ನಾಡಿಗಳು.

ರೋಗಗಳು :- ಚರ್ಮರೋಗ, ಕುಷ್ಠ, ಪಿತ್ತ, ಗಂಟು, ಸಂಧಿವಾತ, ಕ್ಷಯ, ಅಗ್ನಿಮಾಂದ್ಯ, ಸನ್ನಿಪಾತ, ಶೀತರೋಗ.

ಸಂರಕ್ಷಣೆ :- ಎಲ್ಲಾ ಉತ್ತಮ ಗುಣಗಳನ್ನು ಹೊಂದಿರಬಹುದಾಗಿದೆ. ಸುಶೀಲ, ಬುದ್ಧಿವಂತ, ಹಸನ್ಮುಖಿ, ವಿನೋದಪ್ರಿಯ, ವ್ಯರ್ಥಕಾರ್ಯ ಮಾಡುವ, ವಿಷ್ಣು ಪೂಜಾರಿ, ಕಾರ್ಯಕರ್ತ, ಜಾದುಗಾರ, ಧಾರ್ಮಿಕ ವಿದ್ವಾನ, ಪ್ರಸಿದ್ಧವಾದ ವ್ಯಕ್ತಿ ಆಗಬಹುದಾಗಿದೆ. ಶಕ್ತಿಶಾಲಿ, ಉತ್ತಮ ಪತ್ನಿಯನ್ನು ಪಡೆಯುವವನಾಗುವನು.

ಉದ್ಯೋಗ, ವಿಶೇಷತೆಗಳು :- ಗಣಿ ಉತ್ಪಾದನೆ, ತೈಲಗಳು, ಕಲ್ಲಿದ್ದಲು, ಬಾವಿ, ನೀರಾವರಿ, ಸುರಂಗ, ಕಂದಕ, ಮಂತ್ರಿ ,ರಾಜ, ಮೀನುಗಾರ, ಕೃಷಿಕ ಇಂಜಿನಿಯರ್, ಚಾಲಕ ವ್ಯಾಪಾರಿ, ಚರ್ಮ ಉದ್ಯಮಿ, ಪಾದ್ರಿ ಮುಂತಾದವರಾಗಬಹುದು. ಶ್ರವಣ ನಕ್ಷತ್ರದಲ್ಲಿ ಜನಿಸಿದವರು ಬಾಲ್ಯದಲ್ಲಿ ಚಂಚಲರಾಗುವರು. ಮಾತಾ – ಪಿತೃ ಭಕ್ತ ಪೂಜಾರಿ, ಉಟೋಪಚಾರ ಪ್ರಿಯ, ಆರೋಗ್ಯವಂತ, ಕೃಷಿಕನಾಗಬಹುದಾಗಿದೆ.

ಆಸೆ ಬುರುಕ, ಅಲ್ಪ ಬುದ್ಧಿಯವ, ಅಸಭ್ಯನೂ ಆಗಬಹುದಾಗಿದೆ. ಚಂದ್ರ, ಗುರು, ಶುಕ್ರನು ಬಲಿಷ್ಠರಾದರೆ ವ್ಯಕ್ತಿಯು ಕವಿ, ಶಾಸ್ತ್ರಜ್ಞಾನಿ, ವೈಜ್ಞಾನಿಕ ಗಾಯಕನಾಗಬಹುದಾಗಿದೆ. ಹಣ ಗ್ರಹಿಸುವುದರಲ್ಲಿ ಸೂರ್ಯನು ಮಾಘಮಾಸದಲ್ಲಿ 13-25 ದಿವಸಗಳವರೆಗೆ ಇರುವನು. ಶನಿಯ ದಶಕಾಲದಲ್ಲಿ ಜೀವನದಲ್ಲಿ ವಿಶೇಷ ಕುಶಲತೆಗಳು ಸಿದ್ಧಿಸಬಹುದಾಗಿದೆ.

ಹಿಂದಿನ ಲೇಖನಹಾಸ್ಯ
ಮುಂದಿನ ಲೇಖನJNCASR: 01 ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸಿ