ಇದೊಂದು ಚರ್ಮ ವ್ಯಾದಿ. ಚರ್ಮದ ಅಡಿಯಲ್ಲಿ ಚರ್ಮಕ್ಕೆ ಬಣ್ಣವನ್ನು ಕೊಡುವ ಮೆಲೆನಿನ್ ವರ್ಣ ದ್ರವ್ಯವನ್ನು ಉತ್ಪತ್ತಿ ಯಾಗದಿರುವುದೇ ಕಾರಣವಾಗಿ ತೊನ್ನು, ಶ್ವಿತ್ರ ಮುಂತಾದ ಹೆಸರಿಂದ ಕರೆಯುತ್ತಾರೆ ಔಷಧಿಗಳು ಇದ್ದರೂ ಪಥ್ಯವನ್ನು ಅನುಸರಿಸುವುದಿಲ್ಲವಾದುದರಿಂದ ಈ ರೋಗ ಗುಣವಾಗುವುದು ನಿಧಾನ ತಾಳ್ಮೆಯಿಂದ ಔಷಧಿ ಸೇವಿಸಬೇಕು.
1. ಮಂಜಿಷ್ಟಾದಿ ಕ್ವಿದು. ಮಹಾ ಮಂಜಿಷ್ಟಾದಿಕ್ವಾಧ ಖದಿರಾರೀಷ್ಠಗಳಲ್ಲಿ ಯಾವುದಾದರೂ ಒಂದನ್ನು ಸೇವಿಸುತ್ತಾ ಬಂದರೆ ಕಪ್ಪು ಬಣ್ಣ ಬರುತ್ತದೆ.
2. ಆಯುರ್ವೇದ ಔಷಧಿ ಅಂಗಡಿಗಳಲ್ಲಿ ಸಿಕ್ಕುವ ಭಲ್ಲಾತಕೀ ಲೇಹ್ಯವನ್ನು ಪ್ರತಿದಿನವೂ ಸೇವಿಸುತ್ತಾ ಬರಲು ಚರ್ಮ ಕಪ್ಪಾಗುವುದು.
3. ಕಗ್ಗಲಿ ಶ್ರೀಗಂಧ, ದೇವದಾರು, ಗೇರು ಇವುಗಳ ಎಣ್ಣೆ ಎರಡೆರಡು ತೊಟ್ಟು ಕಗ್ಗಲಿ ಚಕ್ಕೆ ರಸದಲ್ಲಿ ಸೇವಿಸಲು ಶ್ವೇತಕುಷ್ಠಹರವಾಗುವುದು.
4. ಮುರುದಾರ ಸಿಂಗಿಯನ್ನು ಸುಣ್ಣದೊಡನೆ ಅರೆದು ಲೇಪಿಸುವುದರಿಂದ ಚರ್ಮ ಕಪ್ಪು ಬಣ್ಣ ಬರುವುದು.
5. ಏಲಕ್ಕಿಯ ಬೇರೆನ್ನು ಒಣಗಿಸಿ ಎಣ್ಣೆಯಲ್ಲಿ ಸೇರಿಸಿ, ಒಂದೂವರೆ ತೊಲೆಯಷ್ಟು ಸೇವಿಸಿ ಆ ಎಣ್ಣೆಯನ್ನು ರಾತ್ರಿ ವೇಳೆ ಹಚ್ಚುತ್ತಾ ಬರಲು ಕಪ್ಪು ಬಣ್ಣ ತಿರುಗುವುದು.
6. ತಗಚೆ ಬೀಜ, ವಾಯುವಿಳಂಗ, ಅರಿಶಿನ,ನೆಲ್ಲಿಚೆಟ್ಟು, ಚಿತ್ರಮೂಲ ಅಳಲೆಕಾಯಿ ಕಕ್ಕೆತೊಕ್ಕು ಹೊಂಗೆ ತೊಕ್ಕು ಕೋಳಿ ಕುಟುಮನ ಗಡ್ಡೆ,ಚಂಗಲ ಕೋಷ್ಠ, ಬಜೆ ಬಾವಂಜಿ ಬೀಜಗಳನ್ನು ಚೂರ್ಣ ಮಾಡಿ ಗೋಮೂತ್ರದಿಂದ ಅರೆದು ಲೇಪಿಸುವುದರಿಂದ ಚರ್ಮ ಕಪ್ಪಾಗುವುದು. ಪಂಚ ಕರ್ಮಗಳನ್ನು ಮಾಡಿದ ಮೇಲೆ ಈ ಚಿಕಿತ್ಸೆ ಮಾಡಬೇಕು.
7. ಕಹಿಪಡುವಲು ತ್ರಿಪ್ಪಲೆ ಬೇವಿನ ಸೊಪ್ಪು, ಅಮೃತಬಳ್ಳಿ ಎರಡೆಲೆ ಹೊನ್ನೆ, ಅತಿಬಜೆ,ಹೊಂಗೆ ಬೇರು ಇವುಗಳನ್ನು ಕಷಾಯ ಸೇವಿಸುವುದರಿಂದ ಕುಷ್ಟಹರ
8. ಮಣಿಶಿಲೆ,ಕಾಳಕಿಅರಿಸಿನ ಚಂಗಲಕೋಷ್ಠ ಕೋಳಿ ಕುಟುಮನ ಗಡ್ಡೆ, ಚಿತ್ರಮೂಲ, ಬಾವಂಜಿ ಬೀಜ ಇವನ್ನು ಗೋಮೂತ್ರದಿಂದ ಅರೆದು ಲೇಪಿಸುವ ಕುಷ್ಠ ವಿಸ್ಪೋಟಗಳು ಶಮನವಾಗುವುದು.
9. ಗರುಗದ ಸೊಪ್ಪನ್ನು ತಂದು, ಶೋಧಿಸಿಕೊಂಡು ಕಬ್ಬಿಣದ ಪಾತ್ರೆಯಲ್ಲಿ ಎಣ್ಣೆಯನ್ನು ಬಿಟ್ಟು,ಹುರಿದು ಪ್ರತಿದಿನ ಸೇವಿಸಲು ಕುಷ್ಠ, ಶೀಘ್ರ ಪರಿಹಾರವಾಗುವುದು
10. ಸ್ವಮೂತ್ರಪಾನ ಮಾಡುವುದರಿಂದ ಶ್ವಿತ್ರ ನಿವಾರಣೆಯಾಗುತ್ತದೆ.