ಮನೆ ರಾಜ್ಯ ವಂದೇ ಮಾತರಂ ಬಗ್ಗೆ ಬ್ರಿಟಿಷರಿಗೆ ಇದ್ದಷ್ಟೇ ಕೋಪ ಸಿದ್ದರಾಮಯ್ಯ ಅವರಿಗಿದೆ: ನಳಿನ್ ಕುಮಾರ್ ಕಟೀಲ್ ಆರೋಪ

ವಂದೇ ಮಾತರಂ ಬಗ್ಗೆ ಬ್ರಿಟಿಷರಿಗೆ ಇದ್ದಷ್ಟೇ ಕೋಪ ಸಿದ್ದರಾಮಯ್ಯ ಅವರಿಗಿದೆ: ನಳಿನ್ ಕುಮಾರ್ ಕಟೀಲ್ ಆರೋಪ

0

ಬೆಂಗಳೂರು: ಗುಲಾಮಿ ಮನಸ್ಥಿತಿಯ ಸಿದ್ದರಾಮಯ್ಯ ಅವರಿಗೆ ವಂದೇ ಮಾತರಂ ಬಗ್ಗೆ ಬ್ರಿಟಿಷರಿಗೆ ಇದ್ದಷ್ಟೇ ಕೋಪ ಇದೆ ಎಂದು ಬಿಜೆಪಿ ರಾಜ್ಯಾಧ್ಯ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ವಂದೇ ಮಾತರಂ ಎನ್ನುವುದು ಕೇವಲ ಗೀತೆಯಲ್ಲ. ಅದು ಈ ದೇಶದ ಅಸ್ಮಿತೆಯ ಬಗ್ಗೆ ಭಾರತೀಯರಲ್ಲಿ ಸ್ಫೂರ್ತಿ ನೀಡುವ ಸಂದೇಶವೂ ಆಗಿದೆ. ಅದಕ್ಕಾಗಿ ಅಂದು ಬ್ರಿಟಿಷರು ಅದನ್ನು ವಿರೋಧಿಸಿದ್ದರು. ಗುಲಾಮಿ ಮನಸ್ಥಿತಿಯ ಸಿದ್ದರಾಮಯ್ಯ ಅವರಿಗೆ ವಂದೇ ಮಾತರಂ ಬಗ್ಗೆ ಬ್ರಿಟಿಷರಿಗೆ ಇದ್ದಷ್ಟೇ ಕೋಪ ಇರುವುದು ಜಗಜ್ಜಾಹೀರಾಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ವಂದೇ ಮಾತರಂ ಹಾಡಿದರೆ ಮುಸ್ಲಿಂ ಸಮುದಾಯಕ್ಕೆ ಬೇಸರವಾಗುತ್ತದೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಅದನ್ನು ಹಾಡುವುದು ಬೇಡವೆಂದು ಹೇಳಿರುವುದು ಸ್ಪಷ್ಟವಾಗಿದೆ ಎಂದು ಕಟೀಲ್ ಆರೋಪ ಮಾಡಿದ್ದಾರೆ.

ಮತಬ್ಯಾಂಕ್, ಚುನಾವಣೆ, ಅಧಿಕಾರದ ಭ್ರಮೆ ಈ ದೇಶದ ಗರಿಮೆಯ ಸಂಕೇತವಾಗಿರುವ ವಂದೇ ಮಾತರಂ ಗೀತೆಗಿಂತ ದೊಡ್ಡದಾಯಿತೇ ಎಂದು ಜನರು ಕಾಂಗ್ರೆಸ್ಸಿಗರನ್ನು ಪ್ರಶ್ನಿಸುತ್ತಿದ್ದಾರೆ ಎಂದು ಟ್ವೀಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ವಂದೇ ಮಾತರಂ ಹಾಡಲು ಹಿಂದೇಟು ಹಾಕಿದ ಘಟನೆ ಶನಿವಾರ ನಡೆದಿತ್ತು. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದಿದ್ದ ಕಾರ್ಯಕ್ರಮದ ಆರಂಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಮೊದಲು ವಂದೇ ಮಾತರಂ ಎಂದಿದ್ದಾರೆ. ತಕ್ಷಣ ರೊಚ್ಚಿಗೆದ್ದ ಸಿದ್ದರಾಮಯ್ಯ ‘ಏ ವಂದೇ ಮಾತರಂ ಬೇಡ’ ಎಂದಿದ್ದರು.

ಬಳಿಕ ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಹಾಡೋದಾದ್ರೆ ವಂದೇ ಮಾತರಂ ಹಾಡ್ರಪ್ಪ ಎಂದಿದ್ದಾರೆ. ಇಷ್ಟೇ ಅಲ್ಲ ಸಿದ್ದರಾಮಯ್ಯ ಹಾಡಬೇಡ ಅಂತ ಹೇಳಿದ ಎಂದಾಗುತ್ತೆ ಎಂದಿದ್ದಾರೆ. ಸಿದ್ದರಾಮಯ್ಯ ಮಾತಿನ ಬಳಿಕ ಕಾಂಗ್ರೆಸ್ ನಾಯಕರು ವಂದೇ ಮಾತರಂ ಹಾಡಿದ್ದಾರೆ.

ಹಿಂದಿನ ಲೇಖನಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತಾಂತರದ ಹಕ್ಕನ್ನು ಒಳಗೊಂಡಿಲ್ಲ: ಸುಪ್ರೀಂ ಕೋರ್ಟ್‌’ಗೆ ಕೇಂದ್ರದ ಪ್ರತಿಕ್ರಿಯೆ
ಮುಂದಿನ ಲೇಖನಹಸಿ ಬಟಾಣಿ ತಿನ್ನುವುದರ ಆರೋಗ್ಯ ಪ್ರಯೋಜನಗಳು