ಬೆಂಗಳೂರು : ಸಿದ್ದರಾಮಯ್ಯ ದೇವರಾಜ ಅರಸು ದಾಖಲೆ ಮುರಿದೆ ಎನ್ನುತ್ತಿದ್ದಾರೆ. ಇಟ್ ಇಸ್ ಜೋಕ್ ಆಫ್ ದ ಇಯರ್ 2026 ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.
ಡಿಸಿಎಂ ಡಿಕೆಶಿ ಭೇಟಿ ಮಾಡಿ ಬಳಿಕ ಮಾತನಾಡಿದ ಹೆಚ್.ವಿಶ್ವನಾಥ್, ನಮ್ಮನ್ನೆಲ್ಲ ದೇವರಾಜ ಅರಸು ಅವರು ಬೆಳೆಸಿದ್ದು. ದೇವರಾಜ ಅರಸು ಅವರನ್ನ ಮತ್ತು ಇಂದಿರಾಗಾಂಧಿ ಅವರನ್ನು ಸಿದ್ದರಾಮಯ್ಯನವರಷ್ಟು ಬೈದವರು ಯಾರಿಲ್ಲ. ಆದರೆ ಈಗ ದೇವರಾಜ ಅರಸು ಅವರ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ಅರಸು ಅವರು ಹಾವನೂರು ವರದಿ ತಗೊಂಡು ಬಂದರು. ಹಿಂದುಳಿದ ವರ್ಗದ ಅಧಿಕಾರಿ ಇದ್ದಾರೆ ಅಂದರೆ ಅದಕ್ಕೆ ಕಾರಣ ಅರಸು. ರಾಹುಲ್ ಗಾಂಧಿ ಹೇಳಿದ್ರು ಅನ್ನೋ ಕಾರಣಕ್ಕೆ ವರದಿ ಬಿಸಾಕಿದ್ರಿ. ಕಾಂಗ್ರೆಸ್ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಲೇ ಇಲ್ವಲ್ಲಾ? ಬರೀ ಅಹಿಂದ ಅಹಿಂದ, ಅಹಿಂದವೇ ಕಾಂಗ್ರೆಸ್ ಎಂದು ತಿರುಗೇಟು ಕೊಟ್ಟರು.
ರಾಜ್ಯದಲ್ಲಿ ಶಾಂತಿ, ಸುಭಿಕ್ಷೆ ಇಲ್ಲ. ದೇವರಾಜ ಅರಸು ಅವರಿಗೆ ಸಾಟಿ ಇಲ್ಲ. ಅರಸು ಸಮಾನ ಎನ್ನುವುದು ನಗೆಪಾಟಲು. ಇವರು ಯಾವ ಅಹಿಂದ ನಾಯಕ ರೀ? ಸಿದ್ದರಾಮಯ್ಯಗೆ ಕೃತಜ್ಞತೆ ಇಲ್ಲ. ಯುವ ನಾಯಕತ್ವವನ್ನ ಬೆಳೆಸೋದಿಲ್ಲ. ಹೈಕಮಾಂಡ್ ಸುತ್ತಿಗೆ ಹಿಡಿದುಕೊಂಡು ಕೂತಿದೆ. ಯಾವಾಗ ಹೊಡೆಯುತ್ತೋ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.















