ಮನೆ ಸುದ್ದಿ ಜಾಲ `ಎಚ್ಚೆತ್ತುಕೊಳ್ಳಿ’ ಆಡಳಿತಗಾರರಿಗೆ ಸಿದ್ದರಾಮಯ್ಯ ಎಚ್ಚರಿಕೆ

`ಎಚ್ಚೆತ್ತುಕೊಳ್ಳಿ’ ಆಡಳಿತಗಾರರಿಗೆ ಸಿದ್ದರಾಮಯ್ಯ ಎಚ್ಚರಿಕೆ

0

ಬೆಂಗಳೂರು: ಯಾವುದೇ ದೇಶವಾಗಲಿ ಅಲ್ಲಿನ ಸರ್ಕಾರಗಳು ಜನಪರವಾದ ರೀತಿಯಲ್ಲಿ ಆಡಳಿತ ನಡೆಸದಿದ್ದರೆ ಪ್ರಜೆಗಳಿಂದಲೇ ಭಾರಿ ವಿರೋಧ ಎದರಿಸಬೇಕಾಗುತ್ತದೆ. ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ ಎಂಬ ಅರ್ಥ ಹೊಂದಿರುವ ಮಾರ್ಮಿಕ ಚಿತ್ರವನ್ನು ವಿಪಕ್ಷ ನಾಯಕ ದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಚಿತ್ರದಲ್ಲಿ, ಇಂದು ಅವರು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಶ್ರೀಲಂಕಾ ಆಡಳಿತಗಾರ ರಾಜಪಕ್ಸೆ ಅವರ ಚಿತ್ರವೊಂದನ್ನು ಹಾಕಿದ್ದಾರೆ. ಇದರ ಪಕ್ಕದ ಭಾವಚಿತ್ರದ ಚೌಕಟ್ಟು ಖಾಲಿಯಾಗಿದೆ. ಈ ಚಿತ್ರವನ್ನು ಹಾಕುವುದರ ಜೊತೆಗೆ ಎಚ್ಚೆತ್ತುಕೊಳ್ಳಿ, Be Careful ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಈ ಟ್ವೀಟ್‌ ಭಾರಿ ವೈರಲ್‌ ಆಗುತ್ತಿದೆ. ಭಾವಚಿತ್ರದ ಚೌಕಟ್ಟನ್ನು ಖಾಲಿ ಬಿಟ್ಟಿರುವುದೇಕೆ, ಯಾರನ್ನು ಉದ್ದೇಶಿಸಿ ಅವರು ಟ್ವೀಟ್‌ ಮಾಡಿದ್ದಾರೆ ಎಂಬ ಚರ್ಚೆಯೂ ಶುರುವಾಗಿದೆ. ಭಾರತದ ಕೇಂದ್ರದ ಪ್ರಮುಖ ಆಡಳಿತಗಾರರನ್ನು ಉದ್ದೇಶಿಸಿ ಈ ಟ್ವೀಟ್‌ ಮಾಡಿರಬಹುದು ಎಂದು ಸಹ ಅಂದಾಜಿಸಲಾಗಿದೆ.