ಮನೆ ಯೋಗಾಸನ ಸಿದ್ದಾಸನ

ಸಿದ್ದಾಸನ

0

 ‘ಸಿದ್ದ’ರೆಂಬುವವರು ದೇವಯೋನಿ ವಿಶೇಷಗಳು. ಇವರನ್ನು ಅರ್ಧ ದೇವತೆಗಳೆಂದು ಗಣಿಸುತ್ತಾರೆ.ಇವರು ಮಹಾ ಪವಿತ್ರ ಜೀವಿಗಳು, ಮತ್ತು ‘ಸಿದ್ದಿ’ಗಳನ್ನು ಅಂದರೆ ಅತಿ ಲೋಕಿಕ ಮತ್ತು ಅತಿಮಾನುಷಶಕ್ತಿಯನ್ನು ಹೊಂದಿರುವವರು. ಅಲ್ಲದೆ ತಪಸ್ಸಿದ್ಧಿಯನ್ನು ಪಡೆದ ಮಹಾ ಯೋಗಿಗಳಿಗೂ ‘ಸಿದ್ದರು’ ಎಂಬ ಹೆಸರು ಬಂದಿದೆ.

Join Our Whatsapp Group

 ‘ಸಿದ್ದಾಸನ’ ದ ವಿಷಯದಲ್ಲಿ ‘ಸಿದ್ಧ’ರ ಹೇಳಿಕೆ ಈ ಮುಂದಿನಂತಿದೆ:

 ‘ನಿಯಮ’ಗಳಲ್ಲಿ ‘ಅಹಿಂಸೆಯಂತೆ’ ‘ಯಮ’ ಗಳಲ್ಲಿ ‘ಮಿತಾಹಾರ’ದಂತೆ, ಆಸನಗಳೆಲೆಲ್ಲಾ ‘ಸಿದ್ಧಾಸನ’ವೆಂಬುದು ಅತೀ ಶ್ರೇಷ್ಠ.

ಆಸನಗಳ ಸಂಖ್ಯೆ 84 ಲಕ್ಷ ಗಳಿದ್ದರೂ, ಆಸನಭ್ಯಾಸಿಗಳಲ್ಲಿ ಪ್ರತಿಯೊಬ್ಬನೂ ‘ಸಿದ್ದಾಸನ’ವನ್ನು ಅಭ್ಯಸಿಸಲೇ ಬೇಕು.ಏಕೆಂದರೆ, ಈ ಆಸನವು ದೇಹದಲ್ಲಿರುವ 72 ಲಕ್ಷ ನಾಡಿಗಳನ್ನು ಶುದ್ಧಗೊಳಿಸುತ್ತದೆ. ಮಾನವನ ಶರೀರದಲ್ಲಿ ಈ ನಾಡಿಗಳ ಮೂಲಕ ರಕ್ತ ಪರಿಚಲನೆಯ ಕ್ರಮ ನೆರವೇರಿ, ಆ ಮೂಲಕ ದೇಹದ ಎಲ್ಲಾ ಭಾಗಗಳು ಪುಷ್ಟಿಯನ್ನೂ ಹುರುಪನ್ನೂ ಪಡೆಯುತ್ತವೆ. 

ಯೋಗಿಯಾದವನು,ಮಿತಾಹಾರಿಯಾಗಿ ಆನ್ಯ ತತ್ವವಾಗಿ ವಿದ್ಯಾಸನದ ಅಭ್ಯಾಸದಲ್ಲಿ 12 ವರ್ಷಗಳ ಕಾಲ ಕಳೆದುದ್ದೆ ಆದರೆ ಯೋಗಿಸಿದ್ದಿಗಳು ಆತನಿಗೆ ತಾವಾಗಿ ಎದುರಾಗುತ್ತದೆ ಆತ್ಮ ಎಂದರೆ ಜೀವಾತ್ಮ ಹಾಗೂ ಪರಮಾತ್ಮ ಸಿದ್ದಿಗಳೆಂದರೆ

ಯೋಗಿಯಾದವನು. ಮಿತಾಹಾರಿಯಾಗಿ ಆತ್ಮಧ್ಯಾನತತ್ವ ರಾನಾಗಿ ‘ಸಿದ್ದಾಸನ’’ ದ ಅಭ್ಯಾಸದಲ್ಲಿ 12 ವರ್ಷಗಳ ಕಾಲ ಕಳೆದುದೇ ಆದರೆ, ಯೋಗಿಸಿದ್ದಿಗಳು ಆತನಿಗೆ ತಾವಾಗಿಯೇ ದೊರಕುತ್ತದೆ.( ಆತ್ಮ ನೆಂದರೆ,ಜೀವಾತ್ಮ ಹಾಗೂ ಪರಮಾತ್ಮ ಸಿದ್ದಿಗಳೆಂದರೆ, ಅತಿ ಲೌಕಿಕ ಶಕ್ತಿ ಪ್ರದರ್ಶನಗಳು. )

ಯೋಗಿಯಾದವನಿಗೆ ಸಿದ್ಧಾಸನಾಭ್ಯಾಸವು ಕೈಗೂಡಿತೆಂದರೆ, ಆನಂದಾ ನುಭದಲ್ಲಿ ಕೊನೆಗೊಳ್ಳುವ ಉನ್ಮನೀ ಅವಸ್ಥೆ ಇಲ್ಲವೆ, ‘ಸಮಾಧಿಸ್ಥಿತಿ’ಯು ಆತನಿಗೆ ಪ್ರಯತ್ನಪಡದೆಯೇ ಸ್ವಾಭಾವಿಕವಾಗಿ ಸಿದ್ಧಿಸುತ್ತದೆ.

ಪರಿಣಾಮಗಳು

ಈ ಆಸನಭ್ಯಾಸವು ಗುಹ್ಯಸ್ಥಾನ ಆರೋಗ್ಯವಾಗಿಡಲು ನೆರವಾಗುತ್ತದೆ. ಪದ್ಮಾಸನದಂತೆ ಈ ಆಸನವೂ ಕೂಡ ದೇಹಕ್ಕೆ ಅತ್ಯಂತ ವಿಶ್ರಾಂತಿಯನ್ನು ಕೊಡುವಂಥದು. ಕಾಲುಗಳನ್ನು ಒಂದರಲ್ಲೊಂದು ಸೇರಿಸಿ, ದೇಹವನ್ನು ಅವುಗಳಾಸೆರೆಯಿಂದ ಕುಳ್ಳಿರಿಸಿ, ಬೆನ್ನನ್ನು ನೆಟ್ಟಗೆ ಮಾಡಿರುವ ಈ ಭಂಗಿಯು ಮನಸ್ಸಿಗೆ ಉಲ್ಲಾಸ ತಂದು, ಅದು ಒಂದೆಡೆ ನಿಲ್ಲುವಂತೆ ಮಾಡಲು ಸಹಕಾರಿ. ಪ್ರಾಣಾಯಾಮಭ್ಯಾಸಕ್ಕೂ ಧ್ಯಾನಕ್ಕೂ ಈ ಆಸನವು ಅತ್ಯುತ್ತಮವೆಂದು ತಿಳಿಯಹೇಳಿದೆ.

    ಭೌತಿಕ ಅಥವಾ ಶಾರೀರಿಕ ದೃಷ್ಟಿಯಿಂದ ನೋಡಿದರೂ, ಈ ಆಸನವು ಮಂಡಿ ಮತ್ತು  ಹರಡುಗಳಲ್ಲಿರುವ ಪಿಡಿಸುತನವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಅಲ್ಲದೆ ಈ ಆಸನಾಭ್ಯಾಸದಿಂದ ರಕ್ತವು ಟೊಂಕ, ಬೆನ್ನೆಲುಬು ಮೊದಲಾದ ಪ್ರದೇಶಗಳಲ್ಲಿಯೂ (Lumber regions)ಮತ್ತು ಕಿಬ್ಬೊಟ್ಟೆಯ ಭಾಗದಲ್ಲಿಯೂ ಚೆನ್ನಾಗಿ ಪರಿಚಲಿಸುವಂತಾಗುವುದರಿಂದ ಆ ಭಾಗಗಳೆಲ್ಲ ನಿರಾತಂಕವಾಗಿ ಕೆಲಸ ಮಾಡುವಂತಾಗುವುದು.