ಮನೆ ರಾಷ್ಟ್ರೀಯ ಸಿಕ್ಕೀಂ: 4.3 ರಷ್ಟು ತೀವ್ರತೆಯ ಭೂಕಂಪ

ಸಿಕ್ಕೀಂ: 4.3 ರಷ್ಟು ತೀವ್ರತೆಯ ಭೂಕಂಪ

0

ಸಿಕ್ಕೀಂ: ಈಶಾನ್ಯ ರಾಜ್ಯ ಸಿಕ್ಕೀಂನಲ್ಲಿ 4.3ರಷ್ಟು ತೀವ್ರತೆಯ ಭೂಕಂಪನವಾಗಿದೆ.

ಸಿಕ್ಕೀಂನ ಉತ್ತರಕ್ಕೆ 70 ಕಿಲೋ ಮೀಟರ್​ ದೂರದಲ್ಲಿರುವ ಯುಕ್ಸೋಮ್‌ ಎಂಬಲ್ಲಿ ಇಂದು ಬೆಳಗಿನ ಜಾವ 4.15 ರ ಸುಮಾರಿಗೆ ಭೂಕಂಪನವಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ.

ಭೂಕಂಪನದ ಕೇಂದ್ರವು ಯುಕ್ಸೋಮ್‌’ನಿಂದ 70 ಕಿ.ಮೀ ದೂರದಲ್ಲಿದೆ. ಭೂಮಿಯ ಒಳಭಾಗದಲ್ಲಿ 10 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ.

 ಘಟನೆಯಿಂದ ಸದ್ಯಕ್ಕೆ ಪ್ರಾಣ ಹಾನಿ ಮತ್ತು ಆಸ್ತಿ-ಪಾಸ್ತಿ ನಷ್ಟವಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಹಿಂದಿನ ಲೇಖನಭಾರತ ಜಾಗತಿಕ ನಾಯಕವಾಗಲು ಕರ್ನಾಟಕ ಅತ್ಯಂತ ದೊಡ್ಡ ಕೊಡುಗೆ ನೀಡಲಿದೆ: ಸಿಎಂ ಬೊಮ್ಮಾಯಿ
ಮುಂದಿನ ಲೇಖನಪ್ರಧಾನಿಯವರ ಸಂಕಲ್ಪದಿಂದ ಭಾರತ ಆರ್ಥಿಕತೆಯಲ್ಲಿ ಮುನ್ನಡೆ ಸಾಧಿಸುತ್ತಿದೆ: ರಾಜನಾಥ್ ಸಿಂಗ್