ಮನೆ ಸಾಹಿತ್ಯ ಗಾಯಕಿ ವಡವಾಟಿ ಶಾರದಾ ಭರತ್ ಅವರಿಗೆ ‘ರಮಣಶ್ರೀ ಶರಣ’ ಪ್ರಶಸ್ತಿ

ಗಾಯಕಿ ವಡವಾಟಿ ಶಾರದಾ ಭರತ್ ಅವರಿಗೆ ‘ರಮಣಶ್ರೀ ಶರಣ’ ಪ್ರಶಸ್ತಿ

0

ರಾಯಚೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನದ 2024ನೇ ಸಾಲಿನ ‘ರಮಣಶ್ರೀ ಶರಣ’ ಪ್ರಶಸ್ತಿಯನ್ನು ಗಾಯಕಿ ವಡವಾಟಿ ಶಾರದಾ ಭರತ್ ಅವರಿಗೆ ಘೋಷಿಸಲಾಗಿದೆ.

Join Our Whatsapp Group

2005 ರಿಂದ ಈ ಪ್ರಶಸ್ತಿ ನೀಡಲಾಗುತ್ತಿದ್ದು, 19ನೇ ವರ್ಷದ ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿಗೆ ಆರು ಸಾಧಕರನ್ನು ಹಾಗೂ  ‘ರಮಣ ಶ್ರೀ ಶರಣ ಉತ್ತೇಜನ ಪ್ರಶಸ್ತಿ’ಗೆ ಆರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಹಿರಿಯ ಶ್ರೇಣಿ ಪ್ರಶಸ್ತಿಯು ತಲಾ ₹ 40 ಸಾವಿರ ನಗದು, ಉತ್ತೇಜನ ಪ್ರಶಸ್ತಿಯು ತಲಾ ₹20 ಸಾವಿರ ನಗದು ಒಳಗೊಂಡಿದೆ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ರಾಯಚೂರಿನ ವಡವಾಟಿ ಶಾರದಾ ಭರತ್ ಅವರಿಗೆ ವಚನ ಸಂಗೀತಕ್ಕೆ ‘ರಮಣಶ್ರೀ ಉತ್ತೇಜನ ಪ್ರಶಸ್ತಿ’ ಪ್ರಕಟಿಸಲಾಗಿದೆ.  ಬೆಂಗಳೂರಿನ ರಿಚ್ಮಂಡ್ ವೃತ್ತದ ಬಳಿ ಇರುವ ಹೋಟೆಲ್ ರಮಣಶ್ರೀ ರಿಚ್ಮಂಡ್ ನಲ್ಲಿ ನ.18 ರಂದು ಬೆಳಿಗ್ಗೆ 10.30 ಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರದ ರಾಜ್ಯ ಸಚಿವ ವಿ. ಸೋಮಣ್ಣ, ಕಸಾಪ ಮಾಜಿ ಅಧ್ಯಕ್ಷ ಗೋ. ರು. ಚನ್ನಬಸಪ್ಪ, ಡಾ. ಮನು ಬಳಿಗಾರ  ಪಾಲ್ಗೊಳ್ಳಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ  ಎಸ್. ಷಡಕ್ಷರಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ ತಿಳಿಸಿದ್ದಾರೆ.