ಮನೆ ರಾಜ್ಯ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್ಐಟಿ ತನಿಖೆ  ಸರಿಯಾಗಿ ಸಾಗುತ್ತಿಲ್ಲ: ಜಿ ಟಿ ದೇವೇಗೌಡ

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್ಐಟಿ ತನಿಖೆ  ಸರಿಯಾಗಿ ಸಾಗುತ್ತಿಲ್ಲ: ಜಿ ಟಿ ದೇವೇಗೌಡ

0

ಮೈಸೂರು: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸರ್ಕಾರ ರಚಿಸಿರುವ ಎಸ್ಐಟಿ ತನಿಖೆ ಸರಿಯಾದ ನಿಟ್ಟಿನಲ್ಲಿ ಸಾಗುತ್ತಿಲ್ಲ ಮತ್ತು ಸಂತ್ರಸ್ತೆಯರಿಗೆ ರಕ್ಷಣೆ ಸಿಗುತ್ತಿಲ್ಲ, ಇದರ ಜೊತೆಗೆ ಪ್ರಕರಣದಲ್ಲಿ ಡಿ ಕೆ ಶಿವಕುಮಾರ  ಪಾತ್ರ ಇರೋದು ಮೇಲ್ನೋಟಕ್ಕೆ ಕಂಡುಬರುತ್ತಿದೆ, ಹಾಗಾಗಿ ಅವರ ರಾಜೀನಾಮೆ ಆಗ್ರಹಿಸಿ ಮತ್ತು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಹೇಳಿದರು.

Join Our Whatsapp Group

ನಗರದಲ್ಲಿಂದು ಮಾತಾಡಿದ ಅವರು ಎಸ್ಐಟಿ ತನಿಖೆ ಒನ್ ವೇನಲ್ಲಿ ಸಾಗುತ್ತಿದೆ, ಅಧಿಕಾರಿಗಳಿಗೆ ಸಂತ್ರಸ್ತೆಯರ ಬಗ್ಗೆ ಕಾಳಜಿ ಇಲ್ಲ, ಪೆನ್ ಡ್ರೈವ್ ಗಳನ್ನು ಕಾರ್ತೀಕ್ ಮೂಲಕ ಶಿವಕುಮಾರ್ ಮಾಡಿಸಿದರೆಂದು ಎಲ್ ಅರ್ ಶಿವರಾಮೇಗೌಡ ಅವರು ದೆವರಾಜೇಗೌಡರಿಂದ ಹೇಳಿಸಿದ್ದಾರೆ ಎಂದರು.

 ಪೆನ್ ಡ್ರೈವ್ ಗಳನ್ನು ತಯಾರಿಸಲು ಚೆನೈಯಿಂದ ಮೂರು ಕೋಟಿ ರೂ. ವೆಚ್ಚದಲ್ಲಿ ಒಂದು ಯಂತ್ರವನ್ನು ತಯಾರಿಸಲಾಗಿದೆ ಎಂದು ಹೇಳುವ ದೇವೇಗೌಡರು, ಪೆನ್ ಡ್ರೈವ್, ವಿಡಿಯೋಗಳನ್ನು ಒಮ್ಮೆ ಆಸ್ಟ್ರೇಲಿಯಾದಲ್ಲಿ ತಯಾರಿಸಲಾಗಿದೆ ಅನ್ನುತ್ತಾರೆ ಮತ್ತೊಮ್ಮೆ ಮಲೇಷ್ಯಾದಲ್ಲಿ ತಯಾರಿಸಲಾಗಿದೆ ಅನ್ನುತ್ತಾರೆ. ಎಸ್ ಐಟಿ ಅಧಿಕಾರಿಗಳು ವಿದೇಶದ ಮಾತು ಹಾಗಿರಲಿ, ಚೆನೈಗೂ ಹೋಗುವುದು ಸಾಧ್ಯವಿರದ ಕಾರಣ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ದೇವೇಗೌಡ ಹೇಳಿದರು.

ಹಿಂದಿನ ಲೇಖನಕಾರ್ತಿಕ್ ಬೆಂಗಳೂರಿನಲ್ಲೇ ಇದ್ದಾನೆ. ಆತನನ್ನ ಡಿ ಕೆ ಶಿವಕುಮಾರ್ ರಕ್ಷಣೆ ಮಾಡುತ್ತಿದ್ದಾನೆ: ಹೆಚ್ ​ಡಿ ಕುಮಾರಸ್ವಾಮಿ  
ಮುಂದಿನ ಲೇಖನಪ್ರೀತಿಸುವಂತೆ ಬೆನ್ನು ಬಿದ್ದಿದ್ದ ಯುವಕ, ಆತನ ಸಹೋದರನ ಕೊಲೆಗೈದ ಯುವತಿ ತಂದೆ