ವಾರವಿಡೀ ರಾಜಕೀಯ, ಅಪರಾಧ, ಪ್ರತಿಭಟನೆ, ಸಂಘರ್ಷ ಮುಂತಾದ ಸುದ್ದಿಗಳನ್ನು ಕೇಳಿ ಬೇಸತ್ತಿರುವ ಮನಸಿಗೆ ಒಂದಷ್ಟು ಉಲ್ಲಾಸ ಮೂಡಿಸಲು ಒಂದಷ್ಟು ನಗೆಹನಿಗಳು ಇಲ್ಲಿವೆ.
ಹುಡುಗಿ ಸಿಕ್ಕವರ ಕಥೆ
ಭಾರತದಲ್ಲಿ 1,000 ಹುಡುಗರಿಗೆ 943 ಹುಡುಗಿಯರಿದ್ದಾರೆ. ಅಂದರೆ 57 ಹುಡುಗರಿಗೆ ಹುಡುಗಿಯರೇ ಸಿಗುವುದಿಲ್ಲ. ಈ 57 ಮಂದಿ ಮುಂದೆ ಅಬ್ದುಲ್ ಕಲಾಂ, ವಾಜಪೇಯಿ, ರತನ್ ಟಾಟಾ, ಯೋಗಿ, ಮೋದಿಗಳ ರೀತಿ ಆಗುತ್ತಾರೆ.
ಉಳಿದ 943 ಮಂದಿ ಮನೆಯಲ್ಲಿ ಕುಕ್ಕರ್ ಮೂರು ಸೀಟಿ ಹೊಡೆದಾಗ ಗ್ಯಾಸ್ ಆಫ್ ಮಾಡುತ್ತಾರೆ.
ಗ್ರಹಣಗಳಲ್ಲಿ ಎಷ್ಟು ವಿಧ?
ಸಂದರ್ಶನಕಾರ: ಗ್ರಹಣಗಳಲ್ಲಿ ಎಷ್ಟು ವಿಧ? ಮತ್ತು ಅವು ಯಾವುವು…? ಹಾಗೂ ಅವುಗಳ ವ್ಯತ್ಯಾಸ ತಿಳಿಸಿ.
ಗುಂಡ : ಗ್ರಹಣಗಳಲ್ಲಿ ಮೂರು ವಿಧ, ಅವು ಸೂರ್ಯ ಗ್ರಹಣ, ಚಂದ್ರ ಗ್ರಹಣ ಮತ್ತು ಪಾಣಿ ಗ್ರಹಣ (ವಿವಾಹ ). ಸೂರ್ಯ ಗ್ರಹಣ ಮತ್ತು ಚಂದ್ರಗ್ರಹಣಕ್ಕೆ ಕೆಲವು ಗಂಟೆಗಳ ನಂತರ ಮೋಕ್ಷವುಂಟು ಆದರೆ ಈ ಪಾಣಿಗ್ರಹಣಕ್ಕೆ ಮೋಕ್ಷವಿಲ್ಲ ಜೀವನ ಪರ್ಯಂತ ಅನುಭವಿಸಲೇ ಬೇಕು.
ಜುಬ್ಬಾ ಹಾಕಿಕೊಳ್ಳೋದು ಹೇಗೆ?
ರೋಗಿ: ತುಸು ಬಾಗಿ ನಿಂತು ಎರಡೂ ಕೈ ಮುಂದೆ ಚಾಚಿ ನಿಧಾನವಾಗಿ ಕೈ ಮೇಲೆತ್ತಿ ಸ್ವಲ್ಪ ಕತ್ತು ಬಗ್ಗಿಸಿ ನಂತರ ನಿಧಾನವಾಗಿ ಕೈ ಇಳಿಸಿ ಮುಖ ಮೇಲೆತ್ತಿ ನೇರ ನಿಂತಾಗ ಬೆನ್ನಿನಲ್ಲಿ ಛಳಕ್ ಅಂದಹಾಗೆ ಆಗುತ್ತದೆ… ಸ್ವಲ್ಪ ನೋಡಿ ಡಾಕ್ಟರ್….
ಡಾಕ್ಟರ್: ನೀವು ಅದೇಕೆ ಹಾಗೆ ವಿಚಿತ್ರ ಭಂಗಿ ಮಾಡುತ್ತೀರಿ…?
ರೋಗಿ: ಮತ್ತೆ ಜುಬ್ಬಾ ಹೇಗೆ ಹಾಕಿಕೊಳ್ಳೋದು…. ಡಾಕ್ಟರ್?