ಮನೆ Uncategorized ನಗೆಹನಿಗಳು

ನಗೆಹನಿಗಳು

0

ವಾರವಿಡೀ ರಾಜಕೀಯ, ಅಪರಾಧ, ಪ್ರತಿಭಟನೆ, ಸಂಘರ್ಷ ಮುಂತಾದ ಸುದ್ದಿಗಳನ್ನು ಕೇಳಿ ಬೇಸತ್ತಿರುವ ಮನಸಿಗೆ ಒಂದಷ್ಟು ಉಲ್ಲಾಸ ಮೂಡಿಸಲು ಒಂದಷ್ಟು ನಗೆಹನಿಗಳು ಇಲ್ಲಿವೆ.

ಹುಡುಗಿ ಸಿಕ್ಕವರ ಕಥೆ

ಭಾರತದಲ್ಲಿ 1,000 ಹುಡುಗರಿಗೆ 943 ಹುಡುಗಿಯರಿದ್ದಾರೆ. ಅಂದರೆ 57 ಹುಡುಗರಿಗೆ ಹುಡುಗಿಯರೇ ಸಿಗುವುದಿಲ್ಲ. ಈ 57 ಮಂದಿ ಮುಂದೆ ಅಬ್ದುಲ್ ಕಲಾಂ, ವಾಜಪೇಯಿ, ರತನ್ ಟಾಟಾ, ಯೋಗಿ, ಮೋದಿಗಳ ರೀತಿ ಆಗುತ್ತಾರೆ.

ಉಳಿದ 943 ಮಂದಿ ಮನೆಯಲ್ಲಿ ಕುಕ್ಕರ್ ಮೂರು ಸೀಟಿ ಹೊಡೆದಾಗ ಗ್ಯಾಸ್ ಆಫ್ ಮಾಡುತ್ತಾರೆ.

ಗ್ರಹಣಗಳಲ್ಲಿ ಎಷ್ಟು ವಿಧ?

 ಸಂದರ್ಶನಕಾರ: ಗ್ರಹಣಗಳಲ್ಲಿ ಎಷ್ಟು ವಿಧ? ಮತ್ತು ಅವು ಯಾವುವು…? ಹಾಗೂ ಅವುಗಳ ವ್ಯತ್ಯಾಸ ತಿಳಿಸಿ.

ಗುಂಡ : ಗ್ರಹಣಗಳಲ್ಲಿ ಮೂರು ವಿಧ, ಅವು ಸೂರ್ಯ ಗ್ರಹಣ, ಚಂದ್ರ ಗ್ರಹಣ ಮತ್ತು ಪಾಣಿ ಗ್ರಹಣ (ವಿವಾಹ ). ಸೂರ್ಯ ಗ್ರಹಣ ಮತ್ತು ಚಂದ್ರಗ್ರಹಣಕ್ಕೆ ಕೆಲವು ಗಂಟೆಗಳ ನಂತರ ಮೋಕ್ಷವುಂಟು ಆದರೆ ಈ ಪಾಣಿಗ್ರಹಣಕ್ಕೆ ಮೋಕ್ಷವಿಲ್ಲ ಜೀವನ ಪರ್ಯಂತ ಅನುಭವಿಸಲೇ ಬೇಕು.

ಜುಬ್ಬಾ ಹಾಕಿಕೊಳ್ಳೋದು ಹೇಗೆ?

ರೋಗಿ: ತುಸು ಬಾಗಿ ನಿಂತು ಎರಡೂ ಕೈ ಮುಂದೆ ಚಾಚಿ ನಿಧಾನವಾಗಿ ಕೈ ಮೇಲೆತ್ತಿ ಸ್ವಲ್ಪ ಕತ್ತು ಬಗ್ಗಿಸಿ ನಂತರ ನಿಧಾನವಾಗಿ ಕೈ ಇಳಿಸಿ ಮುಖ ಮೇಲೆತ್ತಿ ನೇರ ನಿಂತಾಗ ಬೆನ್ನಿನಲ್ಲಿ ಛಳಕ್ ಅಂದಹಾಗೆ ಆಗುತ್ತದೆ… ಸ್ವಲ್ಪ ನೋಡಿ ಡಾಕ್ಟರ್….

ಡಾಕ್ಟರ್: ನೀವು ಅದೇಕೆ ಹಾಗೆ ವಿಚಿತ್ರ ಭಂಗಿ ಮಾಡುತ್ತೀರಿ…?

ರೋಗಿ: ಮತ್ತೆ ಜುಬ್ಬಾ ಹೇಗೆ ಹಾಕಿಕೊಳ್ಳೋದು…. ಡಾಕ್ಟರ್?

ಹಿಂದಿನ ಲೇಖನಸ್ವಚ್ಛ ರೈಲು, ಸ್ವಚ್ಛ ಭಾರತ: ಮೈಸೂರು ರೇಲ್ವೆ ನಿಲ್ದಾಣದಲ್ಲಿ ವಿವಿಧ ಸ್ವಚ್ಛತಾ ಚಟುವಟಿಕೆ
ಮುಂದಿನ ಲೇಖನಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ