ಮನೆ ಆರೋಗ್ಯ ಲವಂಗವನ್ನು ಜೇನುತುಪ್ಪದಲ್ಲಿ ನೆನೆಸಿಟ್ಟು ತಿಂದ್ರೆ, ಗಂಟಲು ನೋವು ಕಮ್ಮಿ ಆಗುತ್ತೆ…

ಲವಂಗವನ್ನು ಜೇನುತುಪ್ಪದಲ್ಲಿ ನೆನೆಸಿಟ್ಟು ತಿಂದ್ರೆ, ಗಂಟಲು ನೋವು ಕಮ್ಮಿ ಆಗುತ್ತೆ…

0

ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಕೆಲವೊಂದು ಮಸಾಲೆ ಪದಾರ್ಥಗಳನ್ನು, ಹಲವು ರೂಪಗಳಲ್ಲಿ ಬಳಕೆಯಾಗುತ್ತವೆ. ಇದರಿಂದ ನಮ್ಮ ಆರೋಗ್ಯಕ್ಕೆ ಪರೋಕ್ಷವಾಗಿ ಪ್ರಯೋಜನ ಗಳು ಸಿಗುತ್ತಾ ಹೋಗುತ್ತದೆ. ಇಂತಹ ಮಸಾಲೆ ಪದಾರ್ಥಗಳಲ್ಲಿ ಲವಂಗ ಕೂಡ ಒಂದು.

ಹೌದು ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ವಿಟಮಿನ್ಸ್, ಕ್ಯಾಲ್ಸಿಯಂ, ಖನಿಜಾಂಶಗಳು, ಅಯೋಡಿನ್, ಪಾಸ್ಪರಸ್ ಹಾಗೂ ಕಬ್ಬಿಣಾಂಶವನ್ನು ಹೊಂದಿರುವುದರಿಂದ ಇದೊಂದು ಆರೋಗ್ಯಕಾರಿ ಮಸಾಲೆ ಪದಾರ್ಥ ಎನ್ನುವುದರಲ್ಲಿ ಎರಡು ಮಾತಿಲ್ಲ. ಬನ್ನಿ ಇಂದಿನ ಲೇಖನದಲ್ಲಿ ಚಳಿಗಾಲದಲ್ಲಿ ಆಗಾಗ ಕಾಡುವ ಗಂಟಲು ನೋವಿನ ಸಮಸ್ಯೆಗೆ ಲವಂಗ ಹೇಗೆಲ್ಲಾ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಬಗ್ಗೆ ನೋಡೋಣ…

ಗಂಟಲು ಕೆರೆತ ಸಮಸ್ಯೆಗೆ ಲವಂಗ

• ಸಾಮಾನ್ಯವಾಗಿ ಚಳಿಗಾಲದಲ್ಲಿ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳು ಕಂಡು ಬರುತ್ತದೆ. ಇಂತಹ ಸಮಯದಲ್ಲಿ ಇದ್ದಕ್ಕಿದ್ದಂತೆ ಮೂಗು ಕಟ್ಟಿಕೊಂಡಂತೆ ಆಗುವುದು, ಎದೆಕಟ್ಟಿದ ಅನುಭವ ಉಂಟಾ ಗುವುದು, ನೆಗಡಿ, ಕೆಮ್ಮು, ಕಫ ಜೊತೆಗೆ ಗಂಟಲು ನೋವಿನ ಸಮಸ್ಯೆ ಕೂಡ ಕಂಡು ಬರಲು ಶುರುವಾಗುತ್ತದೆ.

• ಇಂತಹ ಸಮಸ್ಯೆಗಳಿಗೆ ಲವಂಗ ತನ್ನ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳಿಂದ ಪರಿಹಾರ ಒದಗಿಸುತ್ತದೆ. ಬಹುಮುಖ್ಯವಾಗಿ ಗಂಟಲು ನೋವು, ಗಂಟಲು ಕೆರೆತ ಸೋಂಕನ್ನು ದೂರ ಮಾಡು ವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

• ಮೊದಲಿಗೆ ಒಂದು ದೊಡ್ಡ ಟೇಬಲ್ ಚಮಚ ಆಗುವಷ್ಟು ಜೇನುತುಪ್ಪವನ್ನು ಒಂದು ಸಣ್ಣ ಬೌಲ್’ಗೆ ಹಾಕಿಕೊಳ್ಳಿ.

• ಇನ್ನು ಈ ಜೇನುತುಪ್ಪದಲ್ಲಿ ಮೂರುನಾಲ್ಕು ಲವಂಗಗಳನ್ನು ಗಂಟೆಗಳ ಕಾಲ ನೆನೆ ಹಾಕಿ ಇಲ್ಲವೆಂ ದರೆ ಇಡೀ ರಾತ್ರಿ ನೆನೆಹಾಕಿ. ಆ ಬಳಿಕ ಬೆಳಗಿನ ಸಮಯದಲ್ಲಿ, ನೆನೆಹಾಕಿದ ಲವಂಗ ಗಳನ್ನು ಹಾಗೂ ಜೇನುತುಪ್ಪವನ್ನು ಜೊತೆಗೆ ಸೇವಿಸಿ. ಈ ಮನೆಮದ್ದನ್ನು ಪ್ರತಿದಿನ ಅನುಸರಿಸಿದರೆ ಗಂಟಲು ನೋವು ಬಹಳ ಬೇಗನೇ ಕಡಿಮೆ ಆಗುವುದು.

ಇನ್ನೊಂದು ವಿಧಾನ

• ಇನ್ನೊಂದು ಪ್ರಕಾರದಲ್ಲಿ ನೋಡುವುದಾದರೆ, ಒಂದೆರಡು ಲವಂಗ ಹಾಗೂ ಜೇನುತುಪ್ಪವನ್ನು

• ಬಾಯಿಯಲ್ಲಿ ಸ್ವಲ್ಪ ಹೊತ್ತು ಇಟ್ಟು, ಅದರ ರಸವನ್ನು ನಿಧಾನಕ್ಕೆ ಹೀರುತ್ತಾ ಬನ್ನಿ.

• ಇದರ ರಸ, ನಿಧಾನಕ್ಕೆ ಗಂಟಲಿನ ಒಳಭಾಗಕ್ಕೆ, ಹೀರಿಕೊಳ್ಳುವುದರಿಂದ, ಗಂಟಲಿನ ಕಿರಿಕಿರಿ, ಗಂಟಲು ನೋವು, ಬಹಳ ಬೇಗನೇ ಕಡಿಮೆ ಆಗುತ್ತದೆ

ಹೀಗೂ ಮಾಡಬಹುದು

• ಗಂಟಲು ನೋವಿನ ಪರಿಹಾರಕ್ಕೆ ಬಹಳ ಸಿಂಪಲ್ ಮನೆಮದ್ದು ಎಂದರೆ, ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ, ಒಂದೆರಡು ಟೇಬಲ್ ಚಮಚದಷ್ಟು ಜೇನುತುಪ್ಪ ಮಿಕ್ಸ್ ಮಾಡಿ ಕುಡಿಯುವುದು ಅಷ್ಟೇ!

• ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗವುದು ಮಾತ್ರವಲ್ಲದೆ, ಗಂಟಲು ನೋವಿನ ಸಮಸ್ಯೆ ಕೂಡ ದೂರವಾಗುವುದು. ಸಾಧ್ಯವಾದಷ್ಟು ಅಪ್ಪಟ ಜೇನುತುಪ್ಪ ಬಳಸಿ.

ಕೊನೆಯ ಮಾತು

ಆಯುರ್ವೇದ ತಜ್ಞರು ದಿನಾ ಒಂದೆರಡು ಲವಂಗಗಳನ್ನು, ಜಗಿದು ಅದರ ರಸವನ್ನು ಹೀರಿಕೊಳ್ಳಲು ಸಲಹೆ ನೀಡುತ್ತಾರೆ. ಯಾಕೆಂದ್ರೆ ದಿನಕ್ಕೆರಡು ಲವಂಗ ಜಗಿದು ನುಂಗುವುದರಿಂದ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಹಿಡಿದು, ದೇಹದಲ್ಲಿ ಕೆಟ್ಟ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯ ಮಟ್ಟ ಅಧಿಕವಾಗದಂತೆ ನೋಡಿಕೊಂಡು, ಮಧುಮೇಹ ನಿಯಂತ್ರಣದಲ್ಲಿ ಇಡಲು ನೆರವಾಗುತ್ತದೆ.