ಮನೆ ರಾಜಕೀಯ ನಾಳೆಯಿಂದ ಮತ್ತೆ 18 ದಿನಗಳ ಕಾಲ ಪಂಚರತ್ನ ರಥಯಾತ್ರೆ

ನಾಳೆಯಿಂದ ಮತ್ತೆ 18 ದಿನಗಳ ಕಾಲ ಪಂಚರತ್ನ ರಥಯಾತ್ರೆ

0

ಬೆಂಗಳೂರು/ವಿಜಯಪುರ: ಸಂಕ್ರಾಂತಿ ಹಬ್ಬದ ನಿಮಿತ್ತ ಮೂರು ದಿನ ಸ್ಥಗಿತವಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಪಂಚರತ್ನ ರಥಯಾತ್ರೆ ನಾಳೆಯಿಂದ (ಜ.17) ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭೆ ಕ್ಷೇತ್ರದಿಂದ ಪುನಾರಂಭ ಆಗಲಿದೆ.

ಈ ಹಂತದಲ್ಲಿ ಒಟ್ಟು 18 ದಿನ ಪಂಚರತ್ನ ರಥಯಾತ್ರೆ ನಡೆಯಲಿದೆ.

ನಾಳೆಯಿಂದ 6 ದಿನಗಳ ಕಾಲ ಪಂಚರತ್ನ ರಥಯಾತ್ರೆ ವಿಜಯಪುರ ಜಿಲ್ಲೆಯಲ್ಲಿ ನಡೆಯಲಿದೆ. ಕ್ರಮವಾಗಿ ಇಂಡಿ, ಸಿಂಧಗಿ, ದೇವರಹಿಪ್ಪರಗಿ, ನಾಗಠಾಣ, ಮುದ್ದೇಬಿಹಾಳ ಹಾಗೂ ಬಸವನ ಬಾಗೇವಾಡಿ – ಬಬಲೇಶ್ವರ (ಈ ಎರಡೂ ಕ್ಷೇತ್ರಗಳಲ್ಲಿ ಒಂದು ದಿನ) ರಥಯಾತ್ರೆ ನಡೆಯಲಿದೆ.

ಜನವರಿ 23ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ, ಅದೇ ಜನವರಿ 24ರಿಂದ 29ರವರೆಗೆ ರಾಯಚೂರು ಜಿಲ್ಲೆಯ ಲಿಂಗಸಗೂರು, ದೇವದುರ್ಗ, ರಾಯಚೂರು ಗ್ರಾಮಾಂತರ, ರಾಯಚೂರು, ಮಾನ್ವಿ, ಸಿಂಧನೂರು ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಯುತ್ತದೆ.

30ರಂದು ಕೊಪ್ಪಳ ಜಿಲ್ಲೆಯ ಕನಕಗಿರಿ, ಕುಷ್ಟಗಿಯಲ್ಲಿ ರಥಯಾತ್ರೆ ನಡೆಯಲಿದೆ. 31ರಂದು ಬಳ್ಳಾರಿ, ವಿಜಯನಗರ ಜಿಲ್ಲೆಗಳ ಸಂಡೂರು, ಹಗರಿಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿ ರಥಯಾತ್ರೆ ಸಾಗುತ್ತದೆ.

ಫೆಬ್ರವರಿ 1ರಂದು ದಾವಣಗೆರೆ ಕ್ಷೇತ್ರದ ಹರಿಹರ ಕ್ಷೇತ್ರದಲ್ಲಿ ಹಾಗೂ ಫೆಬ್ರವರಿ 2-3ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಹಿರೇಕೆರೂರು ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಯುತ್ತದೆ.

ಕಲ್ಯಾಣ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ:

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕಲ್ಯಾಣ ಕರ್ನಾಟಕದ ಬೀದರ್ ಮತ್ತು ಕಲಬುರಗಿ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ರಥಯಾತ್ರೆ ನಡೆದಿದೆ. ಜನತೆಯಿಂದ ಉತ್ತಮ ಸ್ಪಂದನೆ ಸಿಕ್ಕಿತು. ಆ ಉತ್ಸಾಹದಿಂದ ಪುನಾ ಹದಿನೆಂಟು ದಿನಗಳ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಇಂದು ತಿಳಿಸಿದ್ದಾರೆ.

ಈವರೆಗೆ ಒಟ್ಟು 45 ಕ್ಷೇತ್ರಗಳಲ್ಲಿ ರಥಯಾತ್ರೆ ಮುಗಿದಿದ್ದು, ಎಲ್ಲೆಡೆಯಿಂದ ನಮಗೆ ಅತ್ಯುತ್ತಮ ಜನ ಬೆಂಬಲ ಸಿಕ್ಕಿದೆ. ಪಂಚರತ್ನ ಯೋಜನೆಗಳು ತಮಗೆ ಅನುಕೂಲ ಆಗುತ್ತವೆ ಎನ್ನುವ ನಂಬಿಕೆ ಎಲ್ಲರಿಗೂ ಬಂದಿದೆ ಎಂದು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಹಿಂದಿನ ಲೇಖನಲವಂಗವನ್ನು ಜೇನುತುಪ್ಪದಲ್ಲಿ ನೆನೆಸಿಟ್ಟು ತಿಂದ್ರೆ, ಗಂಟಲು ನೋವು ಕಮ್ಮಿ ಆಗುತ್ತೆ…
ಮುಂದಿನ ಲೇಖನಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ‘ಆರ್‌’ಆರ್‌’ಆರ್’