ಜ್ಞಾನವನ್ನು ಗಳಿಸಲು ದೃಶ್ಯ ಮತ್ತು ಧ್ವನಿಯಲ್ಲಿ ಧ್ವನಿಯೇ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಆದರೆ ಬರೆಹ ಮತ್ತು ಧ್ವನಿಯ ವಿಚಾರಕ್ಕೆ ಬಂದರೆ ಬರೆಹಕ್ಕಿಂತ ದ್ವನಿಗೆ ಆಕರ್ಷಣೆ ಜಾಸ್ತಿ ಮತ್ತು ಧ್ವನಿಗಿಂತ ಬರೆಹಕ್ಕೆ ಜ್ಞಾನವನ್ನು ಬೆಳೆಯಿಸುವ ಶಕ್ತಿ ಜಾಸ್ತಿ ಇರುತ್ತದೆ. ನಿಮಗೆ ಒಂದು ಒಳ್ಳೆಯ ಹಾಡಿನ ಸಿ.ಡಿಯನ್ನು ಕೊಡಲಾಗುತ್ತದೆ.ಒಳ್ಳೆಯ ಪುಸ್ತಕವನ್ನು ಕೊಡಲಾಗುತ್ತದೆ. ಮೊದಲು ನೀವು ಹಾಡು ಕೇಳುತ್ತಿರೋ? ಹಾಡು ಓದುತ್ತಿರೋ?ಸ್ವಾಭಾವಿಕವಾಗಿ ಹಾಡನ್ನು ಕೇಳುವುದೇ ಮೊದಲು ಆಯ್ಕೆಯಾಗಿರುತ್ತದೆ.
ಆದರೆ ಧ್ವನಿಯ ಮೂಲಕ ಹೇಳಿದಾಗ ಜ್ಞಾನದ ವಿಸ್ತರಣೆಗೆ ಎರಡು ರೀತಿಯಲ್ಲಿ ಮಿತಿಗಳು ಉಂಟಾಗುತ್ತವೆ. ಮೊದಲನೇದಾಗಿ ಮಾತಿನಲ್ಲಿ ಹೇಳುವಾಗ ಎಲ್ಲವನ್ನು ಹೇಳಲು ಆಗುವುದಿಲ್ಲ ಉದಾಹರಣೆಗೆ ನೀವು ಒಂದು ಭಾಷಣ ಮಾಡುತ್ತೀರಿ ಎಂದುಕೊಳ್ಳಿ. ಭಾಷಣದ ಕೇಳು ಗರು ಯಾರು ಎಂದು ಗಮನಿಸಬೇಕಾಗುತ್ತದೆ.ನಿಮಗಿಂತ ಹಿರಿಯರೇ ತುಂಬಿರುವ ಸಭೆಯಲ್ಲಿ ಕೆಲವು ವಿಚಾರಗಳನ್ನು ಹೇಳಲು ಆಗುವುದಿಲ್ಲ ಕೇವಲ ಮಹಿಳೆಯರೇ ತುಂಬಿರುವ ಸಭೆಯಲ್ಲಿ ಕೆಲವು ವಿಚಾರಗಳನ್ನು ಹೇಳಲು ಆಗುವುದಿಲ್ಲ. ಕೆಲವೇ ಚಿಕ್ಕವರೇ ತುಂಬಿರುವ ಸಭೆಯಲ್ಲಿ ಕೆಲವು ವಿಚಾರವನ್ನು ಹೇಳಲು ಆಗುವುದಿಲ್ಲ ಈ ರೀತಿಯ ಸಾಮಾಜಿಕ ಚೌಕಟ್ಟುಗಳು ಧ್ವನಿಯ ಮೂಲಕ ಜ್ಞಾನದ ವಿಸ್ತರಣೆಯನ್ನು ಕಡಿಮೆಗೊಳಿಸುತ್ತದೆ. ಎರಡನೆಯದಾಗಿ ಹೇಳಿದ್ದನ್ನು ಕೇಳಿಸಿಕೊಳ್ಳುವಾಗ ಕೇಳುವುದನ್ನು ಮತ್ತೆಮತ್ತೆ ಕೇಳಲು ಅವಕಾಶ ಕಡಿಮೆ ಇರುತ್ತದೆ. ಒಂದು ಸಲ ಕೇಳಿದಾಗ ಹೇಳಿದವನು ಯಾವ ಯಾವ ಉದ್ದೇಶವನ್ನಿಟ್ಟುಕೊಂಡು ಹೇಳಿರತ್ತಾನೆಯೋ. ಅದೇ ಉದ್ದೇಶದ ಆಧಾರದಲ್ಲಿ ಗ್ರಹಿಸಲು ಸಾಧ್ಯವಾದರೆ ಕೇಳಿದ್ದು ಸರಿಯಾದ ತಿಳುವಳಿಕೆಯನ್ನು ಉಂಟುಮಾಡುತ್ತದೆ.ಸ್ವಲ್ಪ ಹೆಚ್ಚು ಕಡಿಮೆಯಾಗಿ ಗ್ರಹಿಸಿದರೂ ತಪ್ಪು ತಿಳುವಳಿಕೆಗಳು ಉಂಟಾಗುತ್ತವೆ. ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡಾಗಲೂ ಧ್ವನಿಯಾ ತಿಳುವಳಿಕೆಯನ್ನು ಉಂಟುಮಾಡುವಷ್ಟು ಸಮರ್ಥ್ಯವಾಗಿ ಅನುಭವವನ್ನು ಉಂಟು ಮಾಡುವುದಿಲ್ಲ. ಅನುಭವ ಉಂಟಾಗಬೇಕಾದರೆ ಗಳಿಸಿಕೊಂಡ ಜ್ಞಾನವು ಬಹು ಮುಖಿಯಾಗಿ ಅನೇಕ ರೀತಿಯ ಆಲೋಚನೆಗಳನ್ನು ನಮ್ಮಲ್ಲಿ ಹುಟ್ಟು ಹಾಕಬೇಕಾಗುತ್ತದೆ.ಆಗ ಒಂದು ಮಾನಸಿಕ ಅನುಭವದ ಜ್ಞಾನ ಸಿಗುತ್ತದೆ. ಈ ಕೆಲಸವನ್ನು ಅತ್ಯಂತ ಸಾಮರ್ಥವಾಗಿ ಮಾಡುವುದು ನೈಜ ಜೀವನಾ ನುಭವಗಳು. ಅಂದರೆ ಎಲ್ಲ ಮಾನಸಿಕ ಅನುಭವಗಳನ್ನು ನೈಜ ಜೀವನದಲ್ಲೇ ಪಡೆಯಲು ಸಾಧ್ಯವಿಲ್ಲ ಆಗ ಓದು ಅಜ್ಞಾನವನ್ನು ಕೊಡುವ ಶಕ್ತಿಯಾಗುತ್ತದೆ.